ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆ : ಜೂನಿಯರ್ ಪ್ರಿನ್ಸೆಸ್ ಆಗಿ ಉಡುಪಿಯ ಸಚಿತ ರಾವ್
ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆ
(Udupi) ಉಡುಪಿ : ಉಡುಪಿಯ ಪುಟಾಣಿ ಪ್ರತಿಭೆಯಾದ ಸಚಿತ ರಾವ್ ಅವರು ಇತ್ತೀಚೆಗೆ ನಡೆದ ಎರಡು ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ̤
ಇತ್ತೀಚೆಗೆ ಬೆಂಗಳೂರಿನ ಆರ್.ಆರ್. ನಗರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯ ಜೂನಿಯರ್ ಪ್ರಿನ್ಸೆಸ್ ವಿಭಾಗದಲ್ಲಿ ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ ಮಲೆನಾಡು 2025 ಬ್ಯೂಟಿ ಕಾಂಟೆಸ್ಟ್‌ನಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಉಡುಪಿಯ ಪುತ್ತೂರು ನಿವಾಸಿಗಳಾದ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ಅವರ ಪುತ್ರಿಯಾದ ಸಚಿತ ರಾವ್ ಅವರು, ಉಡುಪಿಯ ಸಿಲಸ್ ಇಂಟರ್‌ನ್ಯಾಷನಲ್ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಉಡುಪಿಯ ಟಾಪ್ ಮಾಡೆಲ್ ಆಗಿರುವ ಸ್ಪೂರ್ತಿ ಶೆಟ್ಟಿ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಈ ಸೌಂದರ್ಯ ಸ್ಪರ್ಧಾಕಾರ್ಯಕ್ರಮದಲ್ಲಿ ಡೆಸ್ಟಿಂಗ್ ವಿಭಾಗದಲ್ಲಿ ಉಡುಪಿಯ ಗೀತಾಂಜಲಿ ಹಾಗೂ ಉಡುಪಿಯ ಖ್ಯಾತ ಮೇಕಪ್ ಆರ್ಟಿಸ್ಟ್ ನಾಗಶ್ರೀ ಆರ್ ಆಚಾರ್ಯ ಅವರು ಸಹಕಾರ ನೀಡಿದ್ದಾರೆ.

