ರೋಟರಿ ಉಡುಪಿಯಿಂದ ಕಡಿಯಾಳಿ ಶಾಲೆ ವಿದ್ಯಾರ್ಥಿಗಳ ದತ್ತು ಸ್ವೀಕಾರ
(Udupi) ಉಡುಪಿ:ರೋಟರಿ ಉಡುಪಿಯಿಂದ ಪ್ರತಿ ವರ್ಷದಂತೆ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ 21 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿ ಅವರ ಸಂಪೂರ್ಣ ಶೈಕ್ಷಣಿಕ ಖರ್ಚ ನ್ನು ನೀಡುವ ಕಾರ್ಯಕ್ರಮ ಇತ್ತೀಚಿಗೆ ಜರಗಿತು.
ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರೋ. ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮ ದ ಮುಖ್ಯ ಅತಿಥಿಯಾಗಿ ಮಾತಾಡುತ್ತಾ, ರೋಟರಿ ಉಡುಪಿಯ ಈ ಕಾರ್ಯಕ್ರಮಕ್ಕಾಗಿ ಅವರನ್ನು ಅಭಿನಂದಿಸಿದರು.
ಈ ಸಹಾಯವು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮುಂದುವರಿಸಲು ತುಂಬಾ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ತೊರಿಸಬೇಕೆಂದರು.
ರೋಟರಿ ಅಧ್ಯಕ್ಷ ರೋ. ಗುರುರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ನಾಯಕ್‌ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯರವರು ಧನ್ಯವಾದವಿತ್ತರು.

