ಲಯನ್ಸ್ ಕ್ಲಬ್ ನೀರೆ ಬೈಲೂರು ಪದಗ್ರಹಣ ಸಮಾರಂಭ
(Bailuru) ಬೈಲೂರು: ಲಯನ್ಸ್ ಕ್ಲಬ್ ನೀರೆ ಬೈಲೂರು ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬೈಲೂರು ಅರ್ಚನ ಹಾಲ್‌ನ ಸಭಾಂಗಣದಲ್ಲಿ ನಡೆಯಿತು.
ಲ| ಸುರೇಶ್ ಪ್ರಭು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಸಿದರು.
ಅವರು ಈ ಸಂದರ್ಭ ಮಾತನಾಡಿ, ಭಾರತೀಯರು ಸಮಾಜ ಸೇವೆಯಲ್ಲಿ ಎತ್ತಿದ ಕೈ. ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್‌ನಲ್ಲಿ ಭಾರತದ ಅತೀ ಹೆಚ್ಚು ಮಂದಿ ಸದಸ್ಯರಿದ್ದಾರೆ. ಕರ್ನಾಟಕ ಮತ್ತು ಗೋವಾದಲ್ಲಿ ಒಟ್ಟು ೨೦ ಸಾವಿರಕ್ಕಿಂತ ಮೆಲ್ಪಟ್ಟು ಸದಸ್ಯರಿದ್ದು, ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದುಡಿಮೆಯ ಓಂದಿಷ್ಟು ಪಾಲನ್ನು ಸಮಾಜಕ್ಕೆ ನೀಡಿ ಆ ಮೂಲಕ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು.
ನೂತನ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ ಮಾತನಾಡಿ, ಮಾತಿಗಿಂತ ಕೆಲಸ ಮಾಡಿಸಿ ತೋರಿಸುವುದು ಮುಖ್ಯ. ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ನಡೆಯುವ ಸಮಾಜಮುಖಿ ಕಾರ್ಯಗಳಲ್ಲಿ ಸಂಘದ ಎಲ್ಲಾ ಸದಸ್ಯರು ನನ್ನೊಂದಿಗೆ ಕೈಜೊಡಿಸುವಂತೆ ವಿನಂತಿಸಿಕೊಂಡರು
ನಿರ್ಗಮನ ಅಧ್ಯಕ್ಷ ಸುರೇಂದ್ರ ಪೂಜಾರಿ ಮಾತನಾಡಿ, ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಸಂಘದ ಸರ್ವ ಸದಸ್ಯರ ಸಹಕಾರದಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದ್ದು, ಮುಂದಿನ ಅಧ್ಯಕ್ಷರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಸಂಪುಟ ಖಜಾಂಚಿ ಶಶಿಧರ್ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ವಲಯಾಧ್ಯಕ್ಷ ಸತೀಶ್ ಶೆಟ್ಟಿ, ನೂತನ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಕೋಶಾಧಿಕಾರಿ ರಾಜೇಶ್ ಶೆಟ್ಟಿ, ನಿರ್ಗಮನ ಕೋಶಾಧಿಕಾರಿ ದಿಲೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೂರ್ವ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ವಲಯಾಧ್ಯಕ್ಷ ಸತೀಶ್ ಶೆಟ್ಟಿ ಶುಭಾಂಸನೆಗೈದರು. ರಮೆಶ್ ಶೆಟ್ಟಿ ಪಳ್ಳಿ ನೂತನ ಸದಸ್ಯರಾಗಿ ಸೇರ್ಪಡೆಗೊಂಡು ಪ್ರತಿಜ್ಞೆ ಸ್ವೀಕರಿಸಿದರು.
ಸುರೆಂದ್ರ ಪೂಜಾರಿ ಸ್ವಾಗತಿಸಿದರು. ಅಕ್ಷತಾ ಶೆಟ್ಟಿ ಧ್ವಜವಂದನೆ ನೆರವೇರಿಸಿದರು. ದೀಕ್ಷಿತಾ ಶೆಟ್ಟಿ ಲಯನ್ ನೀತಿ ಸಂಹಿತೆಯನ್ನು ವಾಚಿಸಿದರು.
ವಿಶ್ವ ಶಾಂತಿಗಾಗಿ ಮೌನ ಪ್ರಾರ್ಥನೆ ಮಾಡಲಾಯಿತು.
ಮಹೇಶ್ ರಾವ್ ಪದಗ್ರಹಣಾಧಿಕಾರಿ ಸುರೇಶ್ ಪ್ರಭುರವರನ್ನು ಪರಿಚಯಿಸಿದರು. ಸುಜಯ ಜತ್ತನ್ನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸದಾನಂದ ಸಾಲಿಯಾನ್ ವಂದಿಸಿದರು. ಉದಯ ಹೆಗ್ಡೆ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು.

