• Home  
  •   ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ,  ಉದ್ಯೋಗಕ್ಕೆ ಬರವಿಲ್ಲ- ಡಾ. ತಿರುಮಲೇಶ್ವರ ಭಟ್ (If students have skills along with learning, there will be no shortage of jobs – Dr. Tirumaleshwar Bhat)
- CONGARTULATIONS - ಸನ್ಮಾನ, ಅಭಿನಂದನೆ

  ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ,  ಉದ್ಯೋಗಕ್ಕೆ ಬರವಿಲ್ಲ- ಡಾ. ತಿರುಮಲೇಶ್ವರ ಭಟ್ (If students have skills along with learning, there will be no shortage of jobs – Dr. Tirumaleshwar Bhat)

Share:   ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಕೌಶಲ್ಯ ಇದ್ದರೆ,  ಉದ್ಯೋಗಕ್ಕೆ ಬರವಿಲ್ಲ– ಡಾ. ತಿರುಮಲೇಶ್ವರ ಭಟ್ ಬಂಟಕಲ್ಲಿನಲ್ಲಿ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ –ಸಂವಾದ” ಕಾರ್ಯಕ್ರಮ   (Shirva) ಶಿರ್ವ: ಉದ್ಯೋಗ ಅವಕಾಶದಲ್ಲಿ ತಾಂತ್ರಿಕ ಶಿಕ್ಷಣದ ಅಗತ್ಯತೆ ಶೇಕಡ 60ರಷ್ಟು ಜಾಸ್ತಿಯಾಗಿದೆ. ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಕೌಶಲಗಳನ್ನು ಕಲಿಯುತ್ತಿಲ್ಲ. ಕಲಿಕೆಯ ಜೊತೆಗೆ ಕೌಶಲಗಳನ್ನು ಸೃಷ್ಠಿಸಿಕೊಳ್ಳುವಲ್ಲಿ ಶ್ರಮಿಸಿದರೆ ಉದ್ಯೋಗಾವಕಾಶಗಳಿಗೆ ಬರವಿಲ್ಲ ಎಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಹೇಳಿದ್ದಾರೆ.    ಅವರು ಉಡುಪಿ […]

  (Shirva) ಶಿರ್ವ: ಉದ್ಯೋಗ ಅವಕಾಶದಲ್ಲಿ ತಾಂತ್ರಿಕ ಶಿಕ್ಷಣದ ಅಗತ್ಯತೆ ಶೇಕಡ 60ರಷ್ಟು ಜಾಸ್ತಿಯಾಗಿದೆ. ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳು ಕೌಶಲಗಳನ್ನು ಕಲಿಯುತ್ತಿಲ್ಲ. ಕಲಿಕೆಯ ಜೊತೆಗೆ ಕೌಶಲಗಳನ್ನು ಸೃಷ್ಠಿಸಿಕೊಳ್ಳುವಲ್ಲಿ ಶ್ರಮಿಸಿದರೆ ಉದ್ಯೋಗಾವಕಾಶಗಳಿಗೆ ಬರವಿಲ್ಲ ಎಂದು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಹೇಳಿದ್ದಾರೆ.

   ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ  ನವೆಂಬರ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ತಿಂಗಳ ಸಡಗರ” ಕಾರ್ಯಕ್ರಮದಡಿಯಲ್ಲಿ ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪಾಚಾರ್ಯರಾದ ಡಾ. ತಿರುಮಲೇಶ್ವರ ಭಟ್ ಅವರ ನಿವಾಸದಲ್ಲಿ ಏರ್ಪಡಿಸಿದ “ಹಿರಿಯರೆಡೆಗೆ ಸಾಹಿತ್ಯದ ನಡಿಗೆ -ಸಂವಾದ” ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರ ಪ್ರಶ್ನೆಗಳಿಗೆ ಉತ್ತರಿಸಿ ಅನುಭವ ಹಂಚಿಕೊಡರು.

   ಸೋದೆ ಶ್ರೀಗಳ ಇಚ್ಚಾಶಕ್ತಿಯ ಪ್ರತೀಕವಾಗಿ ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯ ಎದ್ದು ನಿಂತಿದೆ. ಭೂತರಾಜರ ದಯೆ, ಕಾರ್ಯದರ್ಶಿಗಳ ಪರಿಶ್ರಮ, ಉಪನ್ಯಾಸಕರು, ಸಿಬ್ಬಂಧಿವರ್ಗದವರ ಧನಾತ್ಮಕ ಸ್ಪಂದನ, ಸ್ಥಳೀಯರ ಪ್ರೋತ್ಸಾಹ ಎಲ್ಲವೂ ಸಿಕ್ಕಿದೆ ಎಂದರು.

   ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ ಡಾ. ತಿರುಮಲೇಶ್ವರ ಭಟ್ ಶಿಕ್ಷಣ ತಜ್ಞರಾಗಿ, ಕಲಾಪ್ರೇಮಿಗಳಾಗಿ ಸಾಂಸ್ಕೃತಿಕ ಚಿಂತಕರಾಗಿ ಸಕಾರಾತ್ಮಕ ಭಾವನೆಗಳನ್ನು  ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಿರ್ವ ಗ್ರಾ., ಪಂ.ಅಧ್ಯಕ್ಷೆ ಸವಿತಾ ರಾಜೇಶ್, ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಕಸಾಪ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಸಮಿತಿಯ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಸಕಾಲಿಕವಾಗಿ ಮಾತನಾಡಿದರು.

    ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿ ಮಾತನಾಡಿ, ಡಾ. ತಿರುಮಲೇಶ್ವರ ಭಟ್ ಇವರು ಕಸಾಪ ತಾಲೂಕು ಸಮಿತಿಯ ಸದಸ್ಯರಾಗಿದ್ದಲ್ಲದೆ, ಕಾಪು ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಆವರಣದಲ್ಲಿ ಅವಿಸ್ಮರಣೀಯವಾಗಿ ಸಂಪನ್ನಗೊಳಿಸುವಲ್ಲಿ ಅವರ ಕೊಡುಗೆ ಅನನ್ಯ ಎಂದರು.

    ಈ ಸಂದರ್ಭದಲ್ಲಿ ಡಾ. ತಿರುಮಲೇಶ್ವರ ಭಟ್ ಮತ್ತು ಶ್ರೀಮತಿ ಗೌರೀ ತಿರುಮಲೇಶ್ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು.

   ‌ ಕಸಾಪ ಜಿಲ್ಲಾ ಸಮಿತಿಯ ನರಸಿಂಹಮೂರ್ತಿ ರಾವ್, ಬಂಟಕಲ್ಲು ಶ್ರೀ ದೇವಳದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಸಾಪ ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ ಪಡುಬಿದ್ರಿ, ಕಸಾಪ ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಸದಸ್ಯರಾದ ಮಧುಕರ್ ಎಸ್. ಕಲ್ಯಾ, ನಿವೃತ್ತ ಆರೋಗ್ಯಾಧಿಕಾರಿ ಉಷಾ ಮರಾಠೆ, ನಿವೃತ್ತ ಮುಖ್ಯ ಶಿಕ್ಷಕ ಯು. ನಂದನ ಕುಮಾರ್,  ಉಪಸ್ಥಿತರಿದ್ದರು.

    ಕಸಾಪ ಕಾರ್ಯದರ್ಶಿ ನೀಲಾನಂದ ನಾಯ್ಕ್ ಸ್ವಾಗತಿಸಿದರು. ಕಸಾಪ ಕೋಶಾಧಿಕಾರಿ ವಿದ್ಯಾಧರ ಪುರಾಣಿಕ್ ಸನ್ಮಾನಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಕೆ. ಆರ್. ಪಾಟ್ಕರ್ ನಿರೂಪಿಸಿದರು. ಸಮಿತಿಯ ಸದಸ್ಯ ದೇವದಾಸ್ ಪಾಟ್ಕರ್ ವಂದಿಸಿದರು. ದೀಕ್ಷಾ, ದಿಶಾ, ಧೀಕ್ಷಿತಾ ನಾಡಗೀತೆ ಹಾಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.