ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿ ಕೊಳ್ಳಿ: ರವಿರಾಜ್ ಹೆಚ್ ಪಿ.
(Udupi) ಉಡುಪಿ: ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಸಹಕಾರದಲ್ಲಿ ಸುನಾಗ್ ಆಸ್ಪತ್ರೆ ಆಶ್ರಯದಲ್ಲಿ ಸುನಾಗ್ ನವ್ಯಹಿತ ಬೇಸಿಗೆ ಶಿಬಿರವು ಉಡುಪಿ ಕುಂಜಿಬೆಟ್ಟು ಪರಿಸರದ ಐಡನ್ ಸ್ಟೆ ಹೋಮ್‌ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಶಿಬಿರಗಳಿಗೆ ಸಹಕಾರವನ್ನು ನೀಡುತ್ತಿದ್ದು, ಈ ಶಿಬಿರದ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ಅರಿವನ್ನು ಮಕ್ಕಳಿಗೆ ತಿಳಿಸುವ ಅಗತ್ಯ ಮನಗಂಡು ಶಿಬಿರ ಆಯೋಜಿಸಲಾಗಿದೆ.
ನಮ್ಮ ನಾಡಿನ ಹಿರಿಯ ಸಂಪನ್ಮೂಲ ವ್ಯಕ್ತಿಗಳು ಶಿಬಿರಲ್ಲಿ ಆಗಮಿಸಿ ಮಾಹಿತಿ ನೀಡಿದಾಗ ಇದು ಪರಿಪೂರ್ಣ ಶಿಬಿರವಾಗುತ್ತದೆ .ಆಟದ ಮೂಲಕ ಶಿಕ್ಷಣವನ್ನು ಈ ಶಿಬಿರದಲ್ಲಿ ಕಲಿಸಲಾಗುವುದು ಎಂದರು.
ನಾಡಿನ ಹೆಸರಾಂತ ಜಾದುಗಾರ ಪ್ರೊ. ಶಂಕರ್ (Prof. Shankar) ಶಿಬಿರವನ್ನು ಉದ್ಘಾಟಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ತೇಜಸ್ವಿ ಆಚಾರ್ಯ, ಪ್ರಸಿದ್ಧ ಜಾದೂಗಾರ ಜೂ. ಶಂಕರ್ ಉಪಸ್ಥಿತರಿದ್ದರು .
ಶಿಬಿರದ ನಿರ್ದೇಶಕ ಡಾ| ನರೇಂದ್ರ ಕುಮಾರ್ ಎಚ್. ಎಸ್ ಪ್ರಸ್ತಾವಿಸಿ ಸ್ವಾಗತಿಸಿದರು.
ಸಾಹಿತಿ ಎಚ್. ಎಸ್. ನವೀನ್ ಕುಮಾರ್ ಹೊಸದುರ್ಗ ನಿರೂಪಿಸಿ, ಡಾ| ವೀಣಾ ನರೇಂದ್ರ ಕುಮಾರ್ ವಂದಿಸಿದರು.

