• Home  
  •  ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ  ಬ್ರಹ್ಮಕಲಶ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Handadi: Gopalakrishna Temple Brahma Kalasha)
- ದೈವ - ದೇವರು - ಧಾರ್ಮಿಕ

 ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ  ಬ್ರಹ್ಮಕಲಶ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Handadi: Gopalakrishna Temple Brahma Kalasha)

Share: ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ  ಬ್ರಹ್ಮಕಲಶ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Brahmavara) ಬ್ರಹ್ಮಾವರ : ಬ್ರಹ್ಮಾವರ ಸಮೀಪದ ಪುರಾತನ ಹಂದಾಡಿ ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಪುಣ್ಯೋತ್ಸವ ಮೇ 1 ಬುಧವಾರದಿಂದ ಮೇ 5 ಭಾನುವಾರದ ತನಕ ನಡೆಯಲಿದ್ದು, ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.  ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು, ದೇವಳದ ತಂತ್ರಿ ರಮೇಶ್ ಭಟ್ ನಾಯರ್‌ಬೆಟ್ಟು ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ […]

ಹಂದಾಡಿ ಹೆಗ್ಗಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ  ಬ್ರಹ್ಮಕಲಶ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

(Brahmavara) ಬ್ರಹ್ಮಾವರ : ಬ್ರಹ್ಮಾವರ ಸಮೀಪದ ಪುರಾತನ ಹಂದಾಡಿ ಹೆಗ್ಗಡೆ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶ ಪುಣ್ಯೋತ್ಸವ ಮೇ 1 ಬುಧವಾರದಿಂದ ಮೇ 5 ಭಾನುವಾರದ ತನಕ ನಡೆಯಲಿದ್ದು, ಈ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

 ಸಂಪೂರ್ಣ ಶಿಲಾಮಯ ದೇವಸ್ಥಾನವಾಗಿದ್ದು, ದೇವಳದ ತಂತ್ರಿ ರಮೇಶ್ ಭಟ್ ನಾಯರ್‌ಬೆಟ್ಟು ಮತ್ತು ಅರ್ಚಕ ವೃಂದದವರ ನೇತೃತ್ವದಲ್ಲಿ ಮೇ 2 ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠೆ ಕಾರ್ಯಕ್ರಮ ಮತ್ತು ಮೇ 5 ರ ಭಾನುವಾದಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

 ಕಾರ್ಯಕ್ರಮದಲ್ಲಿ ಅರ್ಚಕ ವೇ. ಮೂ. ಜೀವನ ಉಡುಪ ದೇವರಿಗೆ ಪೂಜೆ ಸಲ್ಲಿಸಿದ ನಂತರ ಆಡಳಿತ ಮಂಡಳಿಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು, ಹಂದಾಡಿ ನಾಲ್ಕು ಮನೆಯವರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ತಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.