• Home  
  • ವಿದ್ಯಾ ಸರಸ್ವತಿ ಮಡಿಲಿಗೆ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಅವಾರ್ಡ್ (Fashin Catalyst of the Year award to Vidya Saraswathi Udupi)
- ಜೀವನಶೈಲಿ - ದೇಶ-ವಿದೇಶ

ವಿದ್ಯಾ ಸರಸ್ವತಿ ಮಡಿಲಿಗೆ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಅವಾರ್ಡ್ (Fashin Catalyst of the Year award to Vidya Saraswathi Udupi)

Share: ವಿದ್ಯಾ ಸರಸ್ವತಿ ಮಡಿಲಿಗೆ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಅವಾರ್ಡ್ (Udupi) ಉಡುಪಿ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ  ಪ್ರತಿಷ್ಠಿತ  ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.​ ಈ ಪ್ರಶಸ್ತಿಯನ್ನು […]

ವಿದ್ಯಾ ಸರಸ್ವತಿ ಮಡಿಲಿಗೆಫ್ಯಾಷನ್ ಕ್ಯಾಟಲಿಸ್ಟ್ ಆಫ್ ಇಯರ್ಅವಾರ್ಡ್

(Udupi) ಉಡುಪಿ: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ ಮೋತಿ ಮಹಲ್ ಹೋಟೆಲ್ ನಲ್ಲಿ  ಪ್ರತಿಷ್ಠಿತ  ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.

ಉಡುಪಿಯ ಫ್ಯಾಷನ್ ತಾರೆ​ ವಿದ್ಯಾ ಸರಸ್ವತಿಯವರು ಚಾಣಕ್ಯ ಅವಾರ್ಡ್ಸ್ ವಿಭಾಗದ 2024 ನ “ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್” ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.​

ಈ ಪ್ರಶಸ್ತಿಯನ್ನು “ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ “ಸಚಿವರಾದ ಶ್ರೀಪಾದ್ ನಾಯಕ್‌ರವರು ಹಸ್ತಾಂತರಿಸಿದರು.

ವಿದ್ಯಾ ಸರಸ್ವತಿಯವರು ಮಿಸೆಸ್ ಇಂಡಿಯಾ ಕರ್ಣಾಟಕದ “ವಾರಿಯರ್ ಕ್ವೀನ್” “ಟ್ರೆಡಿಷನಲ್ ವಿನ್ನರ್” ಆಗಿದ್ದಾರೆ. “2022ರ ಕ್ಯೂಟೆಸ್ಟ್ ಮೋಮ್” ಕಿರೀಟವನ್ನೂ ಪಡೆದಿದ್ದಾರೆ.​ ಜ್ಯುವೆಲ್ಲರಿ ಹಾಗೂ ಉಡುಪಿ ಕೈಮಗ್ಗ ಸೀರೆಯ ಮೊದಲ ರೂಪದರ್ಶಿಯೂ ಆಗಿದ್ದರು.

2023 ಹಾಗೂ 2024 ರಲ್ಲಿ ಉಡುಪಿ ಕೈಮಗ್ಗ ಸೀರೆಯನ್ನುಟ್ಟು ಸ್ವತಃ ರೂಪದರ್ಶಿಯಾಗಿ 2000 ಕ್ಯಾಲೆಂಡರ್‌ನ್ನು ರಾಜ್ಯ, ಅಂತರಾಜ್ಯಗಳಿಗೆ ತೆರಳಿ ಜನರಿಗೆ ಹಂಚಿ​, ನೇಕಾರರಿಗೆ ಉತ್ತಮ ಪ್ರೋತ್ಸಾಹವನ್ನು ಕೊಟ್ಟಿ​ದ್ದರು. ಅಲ್ಲದೆ ಸತತವಾಗಿ 4 ವರ್ಷಗಳಿಂದ ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ.​

 ವಿದ್ಯಾ ಸರಸ್ವತಿಯವರು ಉಡುಪಿ ತುಳುಕೂಟದ ಮಾಜಿ ಉಪಾಧ್ಯಕ್ಷರು, 2024 ರ ಆಟಿ ಕೂಟದ ಸಂಚಾಲಕಿಯಾಗಿ​ ದುಡಿದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.