ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಪ್ರವಚನ
(Udupi) ಉಡುಪಿ: ಕರಂಬಳ್ಳಿ ವೆಂಕಟ್‌ರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು.
7 ದಿನಗಳ ಪರ್ಯಂತ ಭಾಗವತ ಸಪ್ತಾಹ (ದಶಮ ಸ್ಕಂದ) ಪ್ರವಚನ ನ್ನು ನಡೆಸಿ ಕೊಟ್ಟ ಉಡುಪಿ ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ಶ್ರೀಪಾದರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು .
ವಾಸ್ತು ತಜ್ಞ ಶ್ರೀ ಸುಬ್ರಮಣ್ಯ ಭಟ್ ಗುಂಡಿಬೈಲ್ ಕಾರ್ತಿಕ ಮಾಸ ಜ್ಞಾನ ದೀಪೋತ್ಸವದ ಮಹತ್ವವನ್ನು ತಿಳಿಸಿದರು.
ಉಡುಪಿ ಪುತ್ತಿಗೆ ಮಠದ ದಿವಾಣ ನಾಗರಾಜ ಆಚಾರ್ಯ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ್ ಭಟ್ ವಂದಿಸಿದರು. ಅರ್ಚಕ ದಿವಾಕರ್ ಐತಾಳ್ ಉಪಸ್ಥಿತರಿದ್ದರು
ಸಮಿತಿಯ ಪದಾಧಿಕಾರಿಗಳಾದ ಅಜಿತ್ ಬಿಜಾಪುರ್ , ರಂಗನಾಥ ಸಾಮಗ, ಲಕ್ಷ್ಮೀನಾರಾಯಣ ಆಚಾರ್, ರಂಗನಾಥ ಸರಳಾಯ, ರಾಜಶೇಖರ್, ಪ್ರಕಾಶಾಚಾರ್, ಶ್ರೀಪತಿ ಭಟ್, ವೇದವ್ಯಾಸಾಚಾರ್, ಚಂದ್ರಕಾಂತ್ ಸಹಕರಿಸಿದರು. ವಾಸುದೇವ ಭಟ್ ನಿರ್ವಹಿಸಿದರು.

