ವಿದ್ವತ್ಪೂರ್ವ ಸಂಗೀತದಲ್ಲಿ ಕು. ಪ್ರಸನ್ನ ಹೆಚ್ ರಾಜ್ಯಕ್ಕೆ ತೃತೀಯ ಸ್ಥಾನ
ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ಪರೀಕ್ಷೆ
(Udupi) ಉಡುಪಿ: ಕು. ಪ್ರಸನ್ನಾ ಹೆಚ್ ಇವರು 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಮೈಸೂರು ಇವರು ನಡೆಸಿದ ವಿದ್ವತ್ ಪೂರ್ವ ರಾಜ್ಯ ಮಟ್ಟದ ಸಂಗೀತ ಹಾಡುಗಾರಿಕೆ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಈಕೆ ಚಿಟ್ಪಾಡಿಯ ಹರಿಕೃಷ್ಣ ಆಚಾರ್ಯ – ವಿದ್ಯಾ ದಂಪತಿ ಪುತ್ರಿ.
ಕು. ಪ್ರಸನ್ನಾರವರು ಸಂಗೀತ ಶಿಕ್ಷಕಿ ವಿದುಷಿ ವಿನುತಾ ಆಚಾರ್ಯ ಹಾಗೂ ವಿದುಷಿ ಭಾರ್ಗವಿ ಹೆಚ್, ಚೆನ್ನೈ ಇವರ ಶಿಷ್ಯೆ.

