• Home  
  • ವಿಶ್ವ ಕಂಡ ಅಪ್ರತಿಮ ಮೇಧಾವಿ ಡಾ. ಬಿ. ಆರ್. ಅಂಬೇಡ್ಕರ್ – ಮಾಜಿ ಸಚಿವ ಸೊರಕೆ (World’s unique genius Dr. B. R. Ambedkar – Former Minister Sorake)
- ಪ್ರಚಲಿತ

ವಿಶ್ವ ಕಂಡ ಅಪ್ರತಿಮ ಮೇಧಾವಿ ಡಾ. ಬಿ. ಆರ್. ಅಂಬೇಡ್ಕರ್ – ಮಾಜಿ ಸಚಿವ ಸೊರಕೆ (World’s unique genius Dr. B. R. Ambedkar – Former Minister Sorake)

Share: ವಿಶ್ವ ಕಂಡ ಅಪ್ರತಿಮ ಮೇಧಾವಿ ಡಾ. ಬಿ. ಆರ್. ಅಂಬೇಡ್ಕರ್ – ಮಾಜಿ ಸಚಿವ ಸೊರಕೆ   ಕಾಪು ರಾಜೀವ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ  (Kaup) ಕಾಪು: ಸ್ವಾತಂತ್ರ್ಯ ನಂತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸರಕಾರದ ಸಂಪುಟದಲ್ಲಿ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್ ರವರು, ದೇಶದ ಅತ್ಯಂತ ಕೆಳವರ್ಗದ ಬಡವರ, ಕಾರ್ಮಿಕರ, ಮಹಿಳೆಯರ, ಯುವಕರ ಮತ್ತು ಎಲ್ಲಾ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಣೆಗೆ ತರಲು, ಮತ್ತು ಸಾಮಾಜಿಕ […]

 (Kaup) ಕಾಪು: ಸ್ವಾತಂತ್ರ್ಯ ನಂತರ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸರಕಾರದ ಸಂಪುಟದಲ್ಲಿ ಕಾನೂನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಡಾ. ಬಿ. ಆರ್. ಅಂಬೇಡ್ಕರ್ ರವರು, ದೇಶದ ಅತ್ಯಂತ ಕೆಳವರ್ಗದ ಬಡವರ, ಕಾರ್ಮಿಕರ, ಮಹಿಳೆಯರ, ಯುವಕರ ಮತ್ತು ಎಲ್ಲಾ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಣೆಗೆ ತರಲು, ಮತ್ತು ಸಾಮಾಜಿಕ ನ್ಯಾಯದ ಮೂಲಕ ಸಮಾನತೆಯನ್ನು ತರುವ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಚಿಸಿ ಜಾರಿಗೆ ತಂದಿರುವ ಭಾರತದ ಸಂವಿಧಾನವು ಇಂದು ವಿಶ್ವಕ್ಕೇ ಮಾದರಿಯಾಗಿದೆ ಎಂದು ಕೆ. ಪಿ. ಸಿ. ಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದರು.

 ಅವರು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಕಾಪು ರಾಜೀವ್ ಭವನ ದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ರವರ 135 ನೇ ಜನ್ಮದಿನದ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

   ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ವಿಶ್ವದ ಇತರ ರಾಷ್ಟ್ರಗಳು ಕೂಡಾ ಪ್ರಶಂಸಿಸುವ ಸಂವಿಧಾನವನ್ನು ನೀಡಿದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರು ಇಂದಿಗೂ ವಿಶ್ವ ಕಂದ ಅಪ್ರತಿಮ ಮೇಧಾವಿಯಾಗಿ ವಿಶ್ವಡೆಲ್ಲೆಡೆ ಜನಮಾನಸದಲ್ಲಿ ಅಚ್ಚಳಿಯದೆ ನೆಲೆಯೂರಿದ್ದಾರೆ ಎಂದೂ ಸೊರಕೆಯವರು ಹೇಳಿದರು.

  ಈ ಸಂದರ್ಭ ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ನಮನ ಸಲ್ಲಿಸಲ್ಲಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವೈ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು.

   ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ನವೀನ್ ಚಂದ್ರ ಸುವರ್ಣ, ಪ್ರಶಾಂತ್ ಜತ್ತನ್ನ, ಶರ್ಫುದ್ದಿನ್ ಶೇಖ್, ಶಾಂತಲತಾ ಎಸ್. ಶೆಟ್ಟಿ,  ಮೊಹಮ್ಮದ್ ಸಾದಿಕ್, ಸುಚರಿತಾ ಲಕ್ಷ್ಮಣ್, ಮಾರ್ಗರೆಟ್ ಸೀಮಾ ಡಿಸೋಜ, ದೇವರಾಜ್ ಎ. ಕೋಟ್ಯಾನ್, ಕೆ. ಎಚ್. ಉಸ್ಮಾನ್, ಸುನಂದಾ, ಸುಮನ್ ಬೋಳಾರ್, ಬಾಶು ಮಲ್ಲಾರ್, ಅಶೋಕ್ ಪೂಜಾರಿ, ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.