• Home  
  • ಶಂಕರಪುರ: ಟಿಪ್ಪರ್ ಕಾರು ಡಿಕ್ಕಿ, ಓರ್ವ ಸಾವು (Shankarpur: One dead after being hit by a tipper car)
- ಅಪಘಾತ

ಶಂಕರಪುರ: ಟಿಪ್ಪರ್ ಕಾರು ಡಿಕ್ಕಿ, ಓರ್ವ ಸಾವು (Shankarpur: One dead after being hit by a tipper car)

Share: ಶಂಕರಪುರ: ಟಿಪ್ಪರ್ ಕಾರು ಡಿಕ್ಕಿ, ಓರ್ವ ಸಾವು (Shankarapura) ಶಂಕರಪುರ:  ಎಂಸ್ಯಾಂಡ್ ಸಾಗಿಸುತ್ತಿದ್ದ ಟಿಪ್ಪರೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಮಗುಚಿ ಪರಿಣಾಮ ಟಿಪ್ಪರ್‌ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಸಾಸ್ತಾನದ ಮೂಲದ ಟಿಪ್ಪರು, ಚಾಲಕನ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಆ ವೇಳೆ ಚಾಲಕ ಟಿಪ್ಪರ್‌ನಿಂದ […]

ಶಂಕರಪುರ: ಟಿಪ್ಪರ್ ಕಾರು ಡಿಕ್ಕಿ, ಓರ್ವ ಸಾವು

(Shankarapura) ಶಂಕರಪುರ:  ಎಂಸ್ಯಾಂಡ್ ಸಾಗಿಸುತ್ತಿದ್ದ ಟಿಪ್ಪರೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಮಗುಚಿ ಪರಿಣಾಮ ಟಿಪ್ಪರ್‌ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ ಎಂಬವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಸಾಸ್ತಾನದ ಮೂಲದ ಟಿಪ್ಪರು, ಚಾಲಕನ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಒಮ್ಮೆಲೆ ಎಡಕ್ಕೆ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಆ ವೇಳೆ ಚಾಲಕ ಟಿಪ್ಪರ್‌ನಿಂದ ಕೆಳಗೆ ಹಾರಿದಾಗ ಟಿಪ್ಪ‌ರ್ ನಡಿಗೆ ಬಿದ್ದಿದ್ದಾರೆ.

ಎಂಸ್ಯಾಂಡ್ ಕೂಡ ಚಾಲಕ ಕೃಷ್ಣರವರ ಮೇಲೆ ಬಿದ್ದಿದೆ.

  ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ  ಪಾರಾಗಿದ್ದಾರೆ.

ಶಿರ್ವ ಪೊಲೀಸರು ಘಟನಾ ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿದ್ದಾರೆ.

ಟಪ್ಪರ್‌ ಚಾಲಕನ ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.