• Home  
  • ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ (Shankarapura Rotary club : “Usirigagi Hasiru” program)
- Mansoon - social service

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ ವತಿಯಿಂದ ಉಸಿರಿಗಾಗಿ ಹಸಿರು ಗಿಡ ನೆಡುವ ಕಾರ್ಯಕ್ರಮ (Shankarapura Rotary club : “Usirigagi Hasiru” program)

Share: ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮ (Shankarapura) ಶಂಕರಪುರ: ರೋಟರಿ ಕ್ಲಬ್ ಶಂಕರಪುರ ಆಯೋಜಿಸಿದ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮವನ್ನು ಕಾಪು ತಾಲೂಕು ತಹಸೀಲ್ದಾರ್‌ ಡಾ. ಪ್ರತಿಭಾ ಆರ್ ರವರು ಗಿಡ ನೆಡುವುದರ, ಮತ್ತು ವಿತರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭ ಶಂಕರಪುರದ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಗಿಡ ನೆಡಲಾಯಿತು. ತಹಸೀಲ್ದಾರ್‌ ಡಾ. ಪ್ರತಿಭಾರವರು ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು.   ರೋಟರಿ […]

ಶಂಕರಪುರ ರೋಟರಿ ಕ್ಲಬ್‌ ಆಯೋಜನೆಯಲ್ಲಿ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮ

(Shankarapura) ಶಂಕರಪುರ: ರೋಟರಿ ಕ್ಲಬ್ ಶಂಕರಪುರ ಆಯೋಜಿಸಿದ “ಉಸಿರಿಗಾಗಿ ಹಸಿರು” ಗಿಡ ನೆಡುವ ಕಾರ್ಯಕ್ರಮವನ್ನು ಕಾಪು ತಾಲೂಕು ತಹಸೀಲ್ದಾರ್‌ ಡಾ. ಪ್ರತಿಭಾ ಆರ್ ರವರು ಗಿಡ ನೆಡುವುದರ, ಮತ್ತು ವಿತರಿಸುವ ಮೂಲಕ ಉದ್ಘಾಟಿಸಿದರು.

ಇದೇ ಸಂದರ್ಭ ಶಂಕರಪುರದ ಫ್ರಾನ್ಸಿಸ್ ಡೆಸಾ ಮತ್ತು ಗಿರೀಶ್ ಆಚಾರ್ಯ ಇವರ ಮನೆಯ ಪರಿಸರದಲ್ಲಿ ಗಿಡ ನೆಡಲಾಯಿತು.

ತಹಸೀಲ್ದಾರ್‌ ಡಾ. ಪ್ರತಿಭಾರವರು ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು.

  ರೋಟರಿ ಶಂಕರಪುರ ವತಿಯಿಂದ  ತಹಸೀಲ್ದಾರ್ ರವರಿಗೆ ಮತ್ತು ಈ ಕಾರ್ಯಕ್ರಮಕ್ಕೆ ಗಿಡ ನೀಡಿ ತುಂಬು ಸಹಕಾರ ನೀಡಿದ ನಾನಾ ಸಾಹೇಬ್‌ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯ ಸಂತೋಷ್ ಶೆಟ್ಟಿಗಾ‌ರ್ ಪಾಂಗಾಳರವರನ್ನು ಗೌರವಿಸಲಾಯಿತು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಂಕರಪುರ ಅಧ್ಯಕ್ಷರು ಆದ ಮಾಲಿನಿ ಶೆಟ್ಟಿ ಇನ್ನಂಜೆ ವಹಿಸಿದ್ದರು.

 ಮುಖ್ಯ ಅತಿಥಿಯಾಗಿ ವಲಯ 5 ರ ಸಹಾಯಕ ಗವರ್ನರ್ ಆದ ಅನಿಲ್‌ ಡೇಸಾ, ಮಾಜಿ ಸಹಾಯಕ ಗವರ್ನರ್ ರೋ. ನವೀನ್ ಅಮೀನ್ ಶಂಕರಪುರ,  ರೋಟರಿ ಸ್ಥಾಪಕ ಸದಸ್ಯ ಯು. ನಂದನ್  ಕುಮಾರ್            ಕಾರ್ಯದರ್ಶಿ ಅನಿಲ್ಲಾ ನೋರೋನ್ಹಾ ಮತ್ತು ರೋಟರಿಯ ಸದಸ್ಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.