• Home  
  •  ಶಂಕರಪುರ  ಶ್ರೀ ಸಾಯಿ ಈಶ್ವರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವ (Sankarpura : Panchashath birth glory of Shri Sai Ishwar Guruji)
- ದೈವ - ದೇವರು - ಧಾರ್ಮಿಕ

 ಶಂಕರಪುರ  ಶ್ರೀ ಸಾಯಿ ಈಶ್ವರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವ (Sankarpura : Panchashath birth glory of Shri Sai Ishwar Guruji)

Share: ಶಂಕರಪುರ  ಶ್ರೀ ಸಾಯಿ ಈಶ್ವರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವ ಶ್ರೀ ಕ್ಷೇತ್ರದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಕ್ಷೇತ್ರದ ಭಕ್ತೆ ಶ್ರೀಮತಿ ಗೀತಾಂಜಲಿ ಸುವರ್ಣರಿಂದ ಮಾಹಿತಿ.  (Shankarapura) ಶಂಕರಪುರ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠದ ಆತ್ಮಜ್ಞಾನಿ ಶ್ರೀ ಸಾಯಿ ಈಶ್ವ‌ರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವ ಇದರ ಚಾಲನೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರಗಲಿದ್ದು, ಆ ಪ್ರಯುಕ್ತ ಅ.3 ಶನಿವಾರ ಮತ್ತು ಅ.4 ಆದಿತ್ಯವಾರದಂದು ವಿವಿಧ […]

 (Shankarapura) ಶಂಕರಪುರ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠದ ಆತ್ಮಜ್ಞಾನಿ ಶ್ರೀ ಸಾಯಿ ಈಶ್ವ‌ರ್ ಗುರೂಜಿಯವರ ಪಂಚಾಶತ್ ಜನ್ಮ ವೈಭವ ಇದರ ಚಾಲನೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ಜರಗಲಿದ್ದು, ಆ ಪ್ರಯುಕ್ತ ಅ.3 ಶನಿವಾರ ಮತ್ತು ಅ.4 ಆದಿತ್ಯವಾರದಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಲಿವೆ ಎಂದು ಶ್ರೀ ಕ್ಷೇತ್ರದಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಭಕ್ತೆ ಶ್ರೀಮತಿ ಗೀತಾಂಜಿ ಸುವರ್ಣ ಹೇಳಿದ್ದಾರೆ.

 ಅವರು ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಗುರುವಾರ ನಡೆದ ಪತ್ರಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

 ಅಕ್ಟೋಬರ್‌ 3ರ ಶನಿವಾರ ಬೆಳಗ್ಗೆ 7.30ಕ್ಕೆ ಗಣಹೋಮ, 9 ಕ್ಕೆ ಪವಮಾನ ಹೋಮ, ಮಧ್ಯಾಹ್ನ 12ಕ್ಕೆ ಮಧ್ಯಾಹ್ನದ ಆರತಿ, 1ಕ್ಕೆ ಅನ್ನಪ್ರಸಾದ, ಸಂಜೆ 6ರಿಂದ ರಾಮತಾರಕ ಮಂತ್ರ, 7ಕ್ಕೆ ಮಹಾಪೂಜೆಯು ಜರಗಲಿದೆ.

 ಅ.4 ಆದಿತ್ಯವಾರದಂದು ಬೆಳಗ್ಗೆ ಗಂಟೆ 7 ರಿಂದ ವೈಷ್ಣವೀ ಹವನ್ ಪಂಚಾಶದ್ವರ್ಷೀಯ, 11ಕ್ಕೆ ಕಲಶಾಭಿಷೇಕ, 11.30ಕ್ಕೆ ಗುರುವಂದನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ.

  ಅ.4ರಂದು ಬೆಳಗ್ಗೆ 10.30ಕ್ಕೆ ಪಂಚಾಶತ್ ಜನ್ಮ ವೈಭವಕ್ಕೆ ಸ್ವಾಮೀಜಿ ಜೋಗಿಮಠ ಕದ್ರಿ ಮಂಗಳೂರು ಶ್ರೀ 1008 ಶ್ರೀ ರಾಜ ಯೋಗಿ ನಿರ್ಮಲಾನಾಥ್ ಮಹಾರಾಜ್, ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಿಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ್ ಬಾಬಾ, ಬೆಂಗಳೂರು ಸಿದ್ದಿವಿನಾಯಕ ಶರಭೇಶ್ವರ ಪೀಠದ ಪೀಠಾಧಿಪತಿ ಶ್ರೀ ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ, ಕಿಮ್ಮಿಂದ ಸಾಣಾಪುರ ಶ್ರೀ ಬಾಲಾಂಜನೇಯ ಬೆಟ್ಟದ ಶ್ರೀ ಹನುಮಾನ್ ದಾಸ್ ಬಾಬಾ, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್ ದಾಸ್ ಸ್ವಾಮೀಜಿ, ಧಾರವಾಡ ಶ್ರೀ ಪರಮಾತ್ಮ ಮಹಾ ಸಂಸ್ಥಾನಂ ಶ್ರೀ ಕ್ಷೇತ್ರ ದ್ವಾರಾಪುರದ ಶ್ರೀ ಪರಮಾತ್ಮ ಜೀ ಮಹಾರಾಜ್, ಚಿಕ್ಕಬಳ್ಳಾಪುರ ಓಂಕಾರ ಮಠದ ಕಾಳೀತನಯ ಡಾ. ಶ್ರೀ ಉಮಾಮಹೇಶ್ವರ ಸ್ವಾಮೀಜಿ ಸಹಿತ ಗುರುವರ್ಯರ ದಿವ್ಯ ಉಪಸ್ಥಿತರಿದ್ದು ಚಾಲನೆಯನ್ನು ನೀಡಲಿದ್ದಾರೆ.

  ಆ ಬಳಿಕ 2026 ರ ಅ.10 ರಿಂದ 2027ರ ಅ.10ರ ಪರ್ಯಂತ   ನಿರಂತರ ಒಂದು ವರ್ಷಗಳ ಕಾಲ ದಾನಿಗಳಿಂದ, ಶಿಷ್ಯ ಹಾಗೂ ಭಕ್ತ ಅಭಿಮಾನಿಗಳ ಸಹಕಾರದಿಂದ ನಿರಂತರ ಗೋ ಸೇವೆ, ಅನ್ನದಾನ, ಶಿಕ್ಷಣ ಸೇವೆ, ಆರೋಗ್ಯ ಸೇವೆ, ವಸ್ತ್ರ ಮತ್ತು ಅಗತ್ಯ ವಸ್ತುಗಳ ದಾನ, ಹೆಣ್ಣುಬಾಲೆಯರ ಮಹಿಳಾ ಮತ್ತು ಮಕ್ಕಳ ಸೇವೆ, ವೃದ್ಧರ ಸೇವೆ, ಪರಿಸರ ಸೇವೆ, ತುರ್ತು ನೆರವು ನೀಡುವ ಮುಖ್ಯಧೈಯದೊಂದಿಗೆ ಯೋಗಧ್ಯಾನ ಶಿಬಿರಗಳನ್ನು ನಡೆಸುತ್ತಾ ಧರ್ಮ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

 ಸುದ್ದಿಗೋಷ್ಟಿಯಲ್ಲಿ ಟ್ರಸ್ಟಿಗಳಾದ ಗೀತಾಂಜಲಿ ಎಂ. ಸುವರ್ಣ, ರಾಘವೇಂದ್ರ ಪ್ರಭು ಕರ್ವಾಲು, ಗಜೇಂದ್ರ ಎಸ್. ಬೇಲೆಮನೆ, ವಿಜಯ್ ಕುಂದರ್, ನಾಗರಾಜ್ ಬೈಂದೂರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.