• Home  
  • ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸಮವಸ್ತ್ರ ವಿತರಣೆ,  ವನಮಹೋತ್ಸವ Rotary Udupi distributes uniforms at Sri Krishna Balaniketan, Vanamahothsava)
- ಸಂಘ, ಸಂಸ್ಥೆಗಳು - ಸಹಾಯ ಹಸ್ತ

ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸಮವಸ್ತ್ರ ವಿತರಣೆ,  ವನಮಹೋತ್ಸವ Rotary Udupi distributes uniforms at Sri Krishna Balaniketan, Vanamahothsava)

Share: ಶ್ರೀಕೃಷ್ಣ ಬಾಲನಿಕೇತನದಲ್ಲಿ ರೋಟರಿ ಉಡುಪಿಯಿಂದ ಸಮವಸ್ತ್ರ ವಿತರಣೆ,  ವನಮಹೋತ್ಸವ   ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ ರೋ. ಗೋಕುಲದಾಸ ಪೈ (Udupi) ಉಡುಪಿ: ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.   ಅಲ್ಲಿಯ ಪ್ರಾಂಗಣದಲ್ಲಿ ವನಮಹೋತ್ಸವವನ್ನು ಗಿಡಗಳನ್ನು ನೆಡುವುದರ ಮೂಲಕ ನೆರವೇರಿಸಲಾಯ್ತು.   ಸಮವಸ್ತ್ರದ ಪ್ರಾಯೋಜಕತ್ವನ್ನು ವಹಿಸಿದ ರೋ. ಗೋಕುಲದಾಸ ಪೈಯವರು ಮಾತನಾಡಿ,  ಬಾಲನಿಕೇತನದೊಂದಿಗೆ ತಮ್ಮ ಭಾಂದವ್ಯವನ್ನು ನೆನಪಿಸಿಕೊಂಡು ರೋಟರಿ ಮುಖಾಂತರ  ಕಾರ್ಯಕ್ರಮಕ್ಕೆ  ತಮಗೆ  ಅವಕಾಶ ನೀಡಿದಕ್ಕಾಗಿ ಧನ್ಯತೆ  ಅನುಭವಿಸಿದೆ ಎಂದರು.    ರೋಟರಿ ಉಡುಪಿಯ […]

(Udupi) ಉಡುಪಿ: ರೋಟರಿ ಉಡುಪಿಯಿಂದ ಶ್ರೀ ಕೃಷ್ಣಬಾಲನಿಕೇತನದ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.

  ಅಲ್ಲಿಯ ಪ್ರಾಂಗಣದಲ್ಲಿ ವನಮಹೋತ್ಸವವನ್ನು ಗಿಡಗಳನ್ನು ನೆಡುವುದರ ಮೂಲಕ ನೆರವೇರಿಸಲಾಯ್ತು.

  ಸಮವಸ್ತ್ರದ ಪ್ರಾಯೋಜಕತ್ವನ್ನು ವಹಿಸಿದ ರೋ. ಗೋಕುಲದಾಸ ಪೈಯವರು ಮಾತನಾಡಿ,  ಬಾಲನಿಕೇತನದೊಂದಿಗೆ ತಮ್ಮ ಭಾಂದವ್ಯವನ್ನು ನೆನಪಿಸಿಕೊಂಡು ರೋಟರಿ ಮುಖಾಂತರ  ಕಾರ್ಯಕ್ರಮಕ್ಕೆ  ತಮಗೆ  ಅವಕಾಶ ನೀಡಿದಕ್ಕಾಗಿ ಧನ್ಯತೆ  ಅನುಭವಿಸಿದೆ ಎಂದರು.

   ರೋಟರಿ ಉಡುಪಿಯ ಅಧ್ಯಕ್ಷ ರೋ. ಗೋಪಾಲಕೃಷ್ಣ ಪ್ರಭುರವರು ಸಮವಸ್ತ್ರದ ಪ್ರಾಯೋಜಕತ್ವ ವಹಿಸಿದ್ದ ರೋ. ಗೋಕುಲದಾಸ ಪೈಯವರನ್ನು ಅಭಿನಂದಿಸಿ ಬಾಲನಿಕೇತನದೊಂದಿಗೆ ರೋಟರಿಯ ಭಾಂದವ್ಯವನ್ನು ಸ್ಮರಿಸಿ ಇಂತಹ ಕಾರ್ಯಕ್ರಮ ನಡೆಸಲು ನೀಡಿದ ಅವಕಾಶಕ್ಕಾಗಿ ಧನ್ಯವಾದ ಅರ್ಪಿಸಿದರು.

  ಕಾರ್ಯಕ್ರಮದಲ್ಲಿ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, ಕ್ಲಬ್ ನ ಕಾರ್ಯದರ್ಶಿ ರೋ. ಗಣಪತಿ ಪ್ರಭು, ರೋ. ನಾರಾಯಣ ಬಿ.ಕೆ., ರೋ. ಸುಬ್ರಹ್ಮಣ್ಯ ಕಾರಂತ, ಮಾತಾಜಿಯವರು ಮಕ್ಕಳು ಉಪಸ್ಥಿತರಿದ್ದರು.

  ರೋ. ಗುರುರಾಜ ಭಟ್ ಕಾರ್ಯಕ್ರಮ ಸಂಯೋಜಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.