• Home  
  • ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ
- ಕರಾವಳಿ - ಪ್ರಚಲಿತ

ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ

Share: ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ  ಕೋಲಾರ ; ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ₹30ಕ್ಕೆ ಇಳಿದಿದ್ದು, ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ಕೇವಲ ₹500ಕ್ಕೆ ಮಾರಾಟವಾಗಿದೆ.  ಈ ಮೂಲಕ ಟೊಮೆಟೊ ದರದಲ್ಲಿ ದಿಢೀರ್ ಇಳಿಮುಖವಾಗಿದ್ದು, ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ.  ಹರಾಜಿನಲ್ಲಿ ಗರಿಷ್ಠ ₹ 530 ಹಾಗೂ ಕನಿಷ್ಠ ₹ 150ಕ್ಕೆ ಮಾರಾಟವಾಗಿದೆ. […]

ಶತಕದ ಗಡಿಯಿಂದ 30ಕ್ಕೆ ಇಳಿದ ಟೊಮೆಟೊ ದರ – ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ

 ಕೋಲಾರ ; ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೊ ಬೆಲೆ ₹30ಕ್ಕೆ ಇಳಿದಿದ್ದು, ಹರಾಜಿನಲ್ಲಿ 15 ಕೆ.ಜಿ ನಾಟಿ ಟೊಮೆಟೊ ಬಾಕ್ಸ್‌ ಕೇವಲ ₹500ಕ್ಕೆ ಮಾರಾಟವಾಗಿದೆ.

 ಈ ಮೂಲಕ ಟೊಮೆಟೊ ದರದಲ್ಲಿ ದಿಢೀರ್ ಇಳಿಮುಖವಾಗಿದ್ದು, ಬೆಲೆ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ.

 ಹರಾಜಿನಲ್ಲಿ ಗರಿಷ್ಠ ₹ 530 ಹಾಗೂ ಕನಿಷ್ಠ ₹ 150ಕ್ಕೆ ಮಾರಾಟವಾಗಿದೆ. ರೈತನಿಗೆ ಕೆ.ಜಿಗೆ ಸರಾಸರಿ ₹33 ದರ ಲಭಿಸಿದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಇದೇ ದರ ಇದೆ.

 ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡಲು ಶುರುವಾಗಿದ್ದರಿಂದ ಮಾರುಕಟ್ಟೆಗೆ ಬರುತ್ತಿರುವ‌ ಟೊಮೆಟೊ ತೀರಾ ಹೆಚ್ಚಳವಾಗಿದೆ. ಇದರಿಂದ ಎಪಿಎಂಸಿಯಲ್ಲಿ ಭಾರಿ ಪ್ರಮಾಣದಲ್ಲಿ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ದರ ಭಾರಿ ಇಳಿಕೆಯಾಗಿದೆ.

 ಜುಲೈ ತಿಂಗಳಿನಲ್ಲಿ ಟೊಮೆಟೊ ದರ ಕೆಜಿಗೆ ಶತಕದ ಗಟಿ ದಾಟಿ ದಾಖಲೆ ನಿರ್ಮಾಣವಾಗಿತ್ತು. ಇದೀಗ ನಿಧಾನ ಗತಿಯಲ್ಲಿ ಟೊಮೆಟೊ ದರದಲ್ಲಿ ಇಳಿಮುಖವಾಗುತ್ತಿದೆ. ಜುಲೈ 31 ರಂದು ಗರಿಷ್ಠ ₹ 2,700ಕ್ಕೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿತ್ತು. 17 ದಿನಗಳ ಅಂತರದಲ್ಲಿ 15 ಕೆ.ಜಿ.ಟೊಮೊಟೊ ಬಾಕ್ಸ್‌ ದರ ₹ 2 ಸಾವಿರಕ್ಕೂ ಅಧಿಕ ಇಳಿಕೆ ಆದಂತಾಗಿದೆ.

 ಗುರುವಾರ ಕೋಲಾರ ಎಪಿಎಂಸಿಗೆ 17,546 ಕ್ವಿಂಟಲ್‌ ಅಂದರೆ 1.17 ಲಕ್ಷ ಬಾಕ್ಸ್‌ ಟೊಮೆಟೊ ಆವಕವಾಗಿತ್ತು. 17 ದಿನಗಳ ಅಂತರದಲ್ಲಿ ಸುಮಾರು 64 ಸಾವಿರ ಬಾಕ್ಸ್‌ ಆವಕ ಹೆಚ್ಚಿದೆ‌. ಜುಲೈ 31 ರಂದು ಕೇವಲ 52,820 ಬಾಕ್ಸ್‌ ಆವಕವಾಗಿತ್ತು. ಹೀಗಾಗಿ, ಬೇಡಿಕೆ ತಗ್ಗಿದೆ ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

 ಈಚೆಗೆ ಅಡುಗೆ ಕೋಣೆಯಲ್ಲಿ ಪ್ರಮುಖವಾಗಿರುವ ಟೊಮೆಟೊ ದರ ಏರಿಕೆ ಕಂಡು ತಮಾಷೆ ಮಾಡಿ ಟ್ರೋಲ್ ಮಾಡಿದುಂಟು. ಅದಲ್ಲದೆ ಬೆಲೆ ಏರಿಕೆಯಾಗಿದ್ದರಿಂದ ರೈತರು ಬೆಳೆದ ಟೊಮೆಟೊ ಕಳವು ಆದ ಪ್ರಕರಣಗಳು ಇವೆ. ಆದರೆ ಇದೀಗ ಟೊಮೆಟೋ ದರದಲ್ಲಿ ದಿಢೀರ್ ಇಳಿಕೆಯಿಂದ ಗ್ರಾಹಕರು ಖುಷಿಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.