• Home  
  • ಶನಿವಾರ (ಸೆ.೩೦) ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ.
- ಕರಾವಳಿ - ವಿಡಿಯೋ

ಶನಿವಾರ (ಸೆ.೩೦) ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ.

Share: ಶನಿವಾರ (ಸೆ.೩೦) ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ. ಉಡುಪಿ\ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಗೋಧಾಮು ಕಟ್ಟಡ, ಪಡಿತರ ಮತ್ತು ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನೆ ಸೆಪ್ಟೆಂಬರ್ ಶನಿವಾರ ಬೆಳಿಗ್ಗೆ 9:30ಕ್ಕೆ ಜರಗಲಿದೆ.  ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಕಛೇರಿ ಉದ್ಘಾಟಿಸಲಿದ್ದು, […]

ಶನಿವಾರ (ಸೆ.೩೦) ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ.

ಉಡುಪಿ\ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಗೋಧಾಮು ಕಟ್ಟಡ, ಪಡಿತರ ಮತ್ತು ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನೆ ಸೆಪ್ಟೆಂಬರ್ ಶನಿವಾರ ಬೆಳಿಗ್ಗೆ 9:30ಕ್ಕೆ ಜರಗಲಿದೆ.

 ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಕಛೇರಿ ಉದ್ಘಾಟಿಸಲಿದ್ದು, ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ತ್ಯಾರು ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

 ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭದ್ರತಾ ಕೊಠಡಿ, ಶಾಸಕ ಯಶಪಾಲ್ ಸುವರ್ಣ ಕಾನ್ಫರೆನ್ಸ್ ಕಾಲ್ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಗ್ರಾಹಕರ ಭದ್ರತಾ ಕೋಶ, ಉಡುಪಿ ಜಿಲ್ಲೆ ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ರಸಗೊಬ್ಬರ ಗೋಧಾಮು ಮತ್ತು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಎಂ ಎಸ್ ಸಿ ಗೋದಾಮು ಉದ್ಘಾಟಿಸಲಿದ್ದಾರೆ.

 ನಾಬಾರ್ಡ್ ನ ಡಿಡಿಎಂ ಸಂಗೀತ ಎಸ್ ಕರ್ತ, ಮಂಗಳೂರು ಮತ್ತು ಉಡುಪಿ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್ ಹಾಗೂ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಘದ ಉಪಾಧ್ಯಕ್ಷೆ ವಾರಿಜಾ ಆರ್ ಕಲ್ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿರುವರು.

ಬೆಳಿಗ್ಗೆ 9.30 ಕ್ಕೆ ಕಚೇರಿ ಕಟ್ಟಡ ಉದ್ಘಾಟನೆ ನಡೆದು 10 ಗಂಟೆಗೆ ಪ್ರಧಾನ ಕಚೇರಿಯಿಂದ ಶಿರ್ವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದವರೆಗೆ ಶೋಭ ಯಾತ್ರೆ ನಡೆಯಲಿದೆ. 10:30 ಕ್ಕೆ ದೇವಸ್ಥಾನದ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ಬಳಿಕ ಗಾನ ವೈಭವ ಮತ್ತು ಸಹಭೋಜನ ಕಾರ್ಯಕ್ರಮ ಜರಗಲಿವೆ ಎಂದು ಸಂಘದ ಅಧ್ಯಕ್ಷ ಕುತ್ತ್ಯಾರು ಪ್ರಸಾದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುವರ್ಣ ಮಹೋತ್ಸವದತ್ತ ದಾಪುಗಾಲು:

 ಶಿರ್ವ ಸಹಕಾರಿ ವ್ಯವಸಾಯಿಕ ಸಂಘ 47 ವರ್ಷಗಳ ಸಾರ್ಥಕ ಸೇವೆಯನ್ನು ಪೂರ್ಣಗೊಳಿಸಿ ಸುವರ್ಣ ಮಹೋತ್ಸವ ಸಂಭ್ರಮದತ್ತ ದಾಪುಗಾಲು ಇಡುತ್ತಿದೆ.

ಶಿರ್ವದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಘವು, ಸಾಂತೂರು, ಕಳತ್ತೂರು ಮತ್ತು ಮಟ್ಟಾರಿ ನಲ್ಲಿ ಪೂರ್ಣ ಪ್ರಮಾಣದ ಶಾಖೆಗಳನ್ನು ಹೊಂದಿದೆ.

 ಕುತ್ಯಾರು, ಪಿಲಾರಿನಲ್ಲಿ ನ್ಯಾಯಬೆಲೆ ಮಳಿಗೆ ತೆರೆದು ಸೇವೆ ನೀಡುತ್ತಿದೆ.

 ನಬಾರ್ಡ್ ನ ಸಹಯೋಗದೊಂದಿಗೆ ಸುಮಾರು 1. 25 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಇಲ್ಲಿ ಗ್ರಹಕರ ಭದ್ರತಾ ಕೋಶ, ಈ – ಸ್ಟಾಂಪಿಂಗ್ ಸೌಲಭ್ಯಗಳನ್ನು ಒದಗಿಸಲಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.