• Home  
  • ಶರಣ್ ಕುಮಾರ್  ಅವರೇ ರಾಮಭಕ್ತಿ ಮಾತಿನಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು : ಪ್ರಭೋದ್ ಚಂದ್ರ ಹೆಜ್ಮಾಡಿ (Sharan Kumar’s devotion to Ram should be seen in his actions, not in his words: Prabodh Chandra Hejmadi)
- ರಾಜಕೀಯ

ಶರಣ್ ಕುಮಾರ್  ಅವರೇ ರಾಮಭಕ್ತಿ ಮಾತಿನಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು : ಪ್ರಭೋದ್ ಚಂದ್ರ ಹೆಜ್ಮಾಡಿ (Sharan Kumar’s devotion to Ram should be seen in his actions, not in his words: Prabodh Chandra Hejmadi)

Share: ಶರಣ್ ಕುಮಾರ್  ಅವರೇ ರಾಮಭಕ್ತಿ ಮಾತಿನಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು : ಪ್ರಭೋದ್ ಚಂದ್ರ ಹೆಜ್ಮಾಡಿ  ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿ ಓಡುವ ದಿನ ದೂರವಿಲ್ಲ : ಪ್ರಭೋದ್‌ ತಿರುಗೇಟು (Hejamadi) ಹೆಜಮಾಡಿ, ಜು.24: ಇತ್ತೀಚಿನ ದಿನಗಳಲ್ಲಿ ಕಾಪು ಬಿಜೆಪಿ ಮುಖಂಡ  ಶರಣ್ ಕುಮಾರ್ ಮಟ್ಟುರವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ, ಜನಸೇವೆ ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ […]

(Hejamadi) ಹೆಜಮಾಡಿ, ಜು.24: ಇತ್ತೀಚಿನ ದಿನಗಳಲ್ಲಿ ಕಾಪು ಬಿಜೆಪಿ ಮುಖಂಡ  ಶರಣ್ ಕುಮಾರ್ ಮಟ್ಟುರವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ, ಜನಸೇವೆ ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಕೇವಲ ಆರೋಪಗಳ ಮೂಲಕ ರಾಜಕೀಯ ಮಾಡುವುದು ಬಿಜೆಪಿಯ ಹತಾಶ ಮನೋಭಾವವನ್ನು ತೋರಿಸುತ್ತದೆ. ಎಂದು  ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ  ಪ್ರಬೋಧ್ ಚಂದ್ರ ಹೆಜ್ಮಾಡಿ ಹೇಳಿದರು

 “ರಾಮಭಕ್ತ”ಎನ್ನುವುದು ಕೇವಲ ಮಾತಿನಲ್ಲಿ ಹೇಳಿಕೊಳ್ಳುವುದರಿಂದ ಸಾಬೀತಾಗುವುದಿಲ್ಲ. ಶ್ರೀರಾಮನ ಆದರ್ಶಗಳಾದ ಸತ್ಯ, ನ್ಯಾಯ, ಪ್ರಾಮಾಣಿಕತೆ ಹಾಗೂ ಜನಸೇವೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ರಾಮಭಕ್ತರಾಗಲು ಸಾಧ್ಯ. ರಾಮಭಕ್ತಿ ಭಾಷಣದಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು.

   ಹೆಜಮಾಡಿಯ ಸಂಘ-ಸಂಸ್ಥೆಗಳು, ದೇವಾಲಯಗಳು ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಬೋಧ್ ಚಂದ್ರರವರ ಕೊಡುಗೆ ಏನು ಎಂಬುದನ್ನು ಇಲ್ಲಿನ ಜನತೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಅದನ್ನು ನಾವು ವೈಯಕ್ತಿಕವಾಗಿ ಹೇಳಿಕೊಳ್ಳುವ ಅಗತ್ಯವಿಲ್ಲ. ಜನರೇ ಅದಕ್ಕೆ ಸಾಕ್ಷಿಯಾಗಿದ್ದಾರೆ.

  ಆದ್ದರಿಂದ ಇತರರನ್ನು ಟೀಕಿಸುವ ಮೊದಲು, ಹೆಜಮಾಡಿಯ ದೈವ-ದೇವಸ್ಥಾನಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕ ಅಭಿವೃದ್ಧಿಗೆ ಬಿಜೆಪಿಯ ಮುಖಂಡ  ಶರಣ್ ಕುಮಾರ್ ಮಟ್ಟುರವರ ಕೊಡುಗೆ ಏನು ಎಂಬುದನ್ನು ಜನರ ಮುಂದೆ ಸ್ಪಷ್ಟಪಡಿಸಬೇಕು. ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿ ಅವರ ಮೇಲಿದೆ. ಕೇವಲ ಆರೋಪ ಮತ್ತು ಪ್ರಚಾರದಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.

  ಜನರ ವಿಶ್ವಾಸ ಕಳೆದುಕೊಂಡ ಬಳಿಕ ಎಷ್ಟೇ ದೊಡ್ಡ ಭಾಷಣ ಮಾಡಿದರೂ ಪ್ರಯೋಜನವಿಲ್ಲ. ಇದೇ ರೀತಿಯ ಅಹಂಕಾರದ ರಾಜಕೀಯ, ದಾರಿ ತಪ್ಪಿಸುವ ಹೇಳಿಕೆಗಳು ಹಾಗೂ ಜನವಿರೋಧಿ ಧೋರಣೆಯನ್ನು ಬಿಜೆಪಿ ಮುಂದುವರಿಸಿದರೆ, ಹೆಜಮಾಡಿಯಲ್ಲಿ “ಶರಣಯ್ಯ… ಶರಣು”ಎಂದು ಓಡುವ ದಿನ ದೂರವಿಲ್ಲ. ಜನರ ಧ್ವನಿಯನ್ನು ಯಾರೂ ಶಾಶ್ವತವಾಗಿ ಕಡೆಗಣಿಸಲು ಸಾಧ್ಯವಿಲ್ಲ.

  ಹೆಜಮಾಡಿಯ ಜನತೆ ಯಾರು ನಿಜವಾಗಿ ಸೇವೆ ಮಾಡಿದ್ದಾರೆ ಮತ್ತು ಯಾರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ ಎಂಬುದನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ತಮ್ಮ ತೀರ್ಪು ನೀಡಲಿದ್ದು, ಅದೇ ಅಂತಿಮ ತೀರ್ಪು ಅಗಲಿದೆ. ಎಂದೂ ಪ್ರಬೋಧ್ ಚಂದ್ರ ಹೆಜ್ಮಾಡಿ  ಪ್ರಕಟಣೆಯಲ್ಲಿ ತಿಳಿಸಿದರು‌.

    “ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು ನನ್ನ ಸಂಸ್ಕೃತಿಯಲ್ಲ. ಅಭಿವೃದ್ಧಿ, ಜನಪರ ಕೆಲಸಗಳು, ಸಾರ್ವಜನಿಕ ಸೇವೆ ಹಾಗೂ ಜನರಿಗಾಗಿ ಮಾಡಿದ ಕಾರ್ಯಗಳ ಬಗ್ಗೆ ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ನಾನು ಯಾವಾಗಲೂ ಸಿದ್ಧ. ಜನರೇ ಅಂತಿಮ ನ್ಯಾಯಾಧೀಶರು. ಅವರ ತೀರ್ಪಿಗೆ ನಾನು ಸದಾ ಗೌರವ ನೀಡುತ್ತೇನೆ”ಎಂದೂ ಪ್ರಭೋದ್‌ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.