• Home  
  • ಶಿರಾಡಿಯಲ್ಲಿ ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ (Private Bus Overturns in Shiradi ; Many injured)
- ಅಪರಾಧ

ಶಿರಾಡಿಯಲ್ಲಿ ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ (Private Bus Overturns in Shiradi ; Many injured)

Share: ಶಿರಾಡಿಯಲ್ಲಿ ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ  ನೆಲ್ಯಾಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಯಲ್ಲಿ ಪಲ್ಟಿಯಾಗಿ 5 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಿಗ್ಗೆ 5.30ಕ್ಕೆ ಸಂಭವಿಸಿದೆ.  ಗಾಯಗೊಂಡವರನ್ನು ರಶೀಕ್ (21), ಇಲಿಯಸ್(30)ಸಕಲೇಶಪುರ, ಪ್ರತೀಕ್ಷ (32)ಗೋಳಿತಟ್ಟು, ಮುಸ್ತಾಫ್ (26)ಮಂಗಳೂರು, ಅಮರನಾಥ್ ಗುಲ್ಬರ್ಗ (26), ಗುಲ್ಬರ್ಗ  ಗುರುತಿಸಲಾಗಿದೆ.  ಗಾಯಗೊಂಡ ಮೂವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ, ಉಳಿದ ಇಬ್ಬರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.  ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ […]

ಶಿರಾಡಿಯಲ್ಲಿ ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

 ನೆಲ್ಯಾಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಯಲ್ಲಿ ಪಲ್ಟಿಯಾಗಿ 5 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಿಗ್ಗೆ 5.30ಕ್ಕೆ ಸಂಭವಿಸಿದೆ.

 ಗಾಯಗೊಂಡವರನ್ನು ರಶೀಕ್ (21), ಇಲಿಯಸ್(30)ಸಕಲೇಶಪುರ, ಪ್ರತೀಕ್ಷ (32)ಗೋಳಿತಟ್ಟು, ಮುಸ್ತಾಫ್ (26)ಮಂಗಳೂರು, ಅಮರನಾಥ್ ಗುಲ್ಬರ್ಗ (26), ಗುಲ್ಬರ್ಗ  ಗುರುತಿಸಲಾಗಿದೆ.

 ಗಾಯಗೊಂಡ ಮೂವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ, ಉಳಿದ ಇಬ್ಬರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

 ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಹೆಡ್‍ಕಾನ್‍ಸ್ಟೇಬಲ್  ಕುಶಾಲಪ್ಪ ನಾಯ್ಕ, ಪೊಲೀಸರಾದ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.