• Home  
  • ಶಿರ್ವ –  ಬೆಳ್ಮಣ್ : ರಸ್ತೆ ದುರಸ್ತಿ ಆಗ್ರಹಿಸಿ ಬಾಳೆ ಗಿಡ ನೆಟ್ಟು ಪ್ರತಿಭಟನೆ (Shirva – Belman: Protest by planting banana trees demanding road repairs)
- protest - ಕಾಪು ತಾಲೂಕು ಆಡಳಿತ

ಶಿರ್ವ –  ಬೆಳ್ಮಣ್ : ರಸ್ತೆ ದುರಸ್ತಿ ಆಗ್ರಹಿಸಿ ಬಾಳೆ ಗಿಡ ನೆಟ್ಟು ಪ್ರತಿಭಟನೆ (Shirva – Belman: Protest by planting banana trees demanding road repairs)

Share: ಶಿರ್ವ –  ಬೆಳ್ಮಣ್ : ರಸ್ತೆ ದುರಸ್ತಿ ಆಗ್ರಹಿಸಿ ಬಾಳೆ ಗಿಡ ನೆಟ್ಟು ಪ್ರತಿಭಟನೆ   (Shirva – belman) ಶಿರ್ವ –  ಬೆಳ್ಮಣ್ : ಶಿರ್ವ –  ಬೆಳ್ಮಣ್ ರಾಜ್ಯ ಹೆದ್ದಾರಿ ಗುರುಂಜಿ ಬಳಿ ರಸ್ತೆಯಲ್ಲಿ ಬೃಹತ್‌  ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮತ್ತು ಕಾಂಕ್ರಿಟೀಕರಣ ನಡೆಸ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಗ್ರಾಮಸ್ಥರು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಸಂಕೇತಿಕವಾಗಿ ಪ್ರತಿಭಟನೆ ನಡೆಸಿದರು. […]

(Shirva – belman) ಶಿರ್ವ –  ಬೆಳ್ಮಣ್ : ಶಿರ್ವ –  ಬೆಳ್ಮಣ್ ರಾಜ್ಯ ಹೆದ್ದಾರಿ ಗುರುಂಜಿ ಬಳಿ ರಸ್ತೆಯಲ್ಲಿ ಬೃಹತ್‌  ಗುಂಡಿಗಳು ಬಿದ್ದು ವಾಹನ ಸಂಚಾರಕ್ಕೆ ತುಂಬಾ ಸಮಸ್ಯೆಯಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮತ್ತು ಕಾಂಕ್ರಿಟೀಕರಣ ನಡೆಸ ಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಗ್ರಾಮಸ್ಥರು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಸಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

 ಮಳೆಗಾಲದಲ್ಲಿ ಪ್ರತಿ ವರ್ಷ ಇಲ್ಲಿ ಹೊಂಡಗಳು ಬಿದ್ದು, ಜನರಿಗೆ, ವಿದ್ಯಾರ್ಥಿಗಳ ಬಸ್ಸುಗಳಿಗೆ ಮತ್ತು ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಮಹಿಳೆಯರಿಗೆ ತುಂಬಾ ಅನಾನುಕೂಲ ಉಂಟಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ಸರಿಯಾದ ಚರಂಡಿ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಕ್ಷೇತ್ರದ ಶಾಸಕರು ಮತ್ತು ಸಂಸದರನ್ನು ಪ್ರತಿಭಟನಾಕಾರರು ಆಗ್ರಹಿಸಿದರು.

 ಈ ಸಂದರ್ಭದಲ್ಲಿ ಸ್ಥಳೀಯರಾದ ಅಗ್ನೇಶ್ ಬರ್ಬೊಜಾ, ರೊನಾಲ್ಲ್ಡ್ ಮಿನೇಜಸ್, ಸುನಿತಾ ಮಿನೇಜಸ್, ವಿಲಿಯಂ ಡಿಸೋಜ, ಮೆಲ್ವನ್ ಡಿಸೋಜ, ಫೆಲಿಶ್ಸ್ ದಾಂತಿ, ಮತ್ತು ಗುರುಂಜಿ – ಸೊರ್ಪ ನಿವಾಸಿಗಳು ಉಪಸ್ಥಿತರಿದ್ದರು.‌.

Leave a comment

Your email address will not be published. Required fields are marked *

eMedia Kannada  @2025. All Rights Reserved.