• Home  
  •   ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ.
- ಕರಾವಳಿ - ವಿಡಿಯೋ

  ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿ ನೂತನ ಕಟ್ಟಡ ಉದ್ಘಾಟನೆ.

Share:   ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ ಉದ್ಘಾಟನೆ. ಉಡುಪಿ\ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಗೋಧಾಮು ಕಟ್ಟಡ, ಪಡಿತರ ಮತ್ತು ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ನೆರವೇರಿತು.  ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಕಛೇರಿ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, […]

  ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡ ಉದ್ಘಾಟನೆ.

ಉಡುಪಿ\ಶಿರ್ವ: ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ನೂತನ ಹವಾನಿಯಂತ್ರಿತ ಪ್ರಧಾನ ಕಛೇರಿ ಹಾಗೂ ಗೋಧಾಮು ಕಟ್ಟಡ, ಪಡಿತರ ಮತ್ತು ರಸಗೊಬ್ಬರ ವಿತರಣೆ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಶನಿವಾರ ನೆರವೇರಿತು.

 ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್ ಪ್ರಧಾನ ಕಛೇರಿ ಉದ್ಘಾಟಿಸಿದರು.

ಈ ಸಂದರ್ಭ ಅವರು ಮಾತನಾಡಿ, ಅತ್ಯಂತ ಶಿಸ್ತಿನ ಕಾರ್ಯಕ್ರಮ ಇದಾಗಿದೆ. ನಮ್ಮ ಕಾರ್ಯಕ್ರಮ ನನಗೆ ಆಗುತ್ತಿರುವ ಎಲ್ಲಾ ಸನ್ಮಾನ‌ ಕಾರ್ಯಕ್ರಮ-ಇವೆಲ್ಲವೂ ಕೂಡ ವ್ಯಕ್ತಿಗೆ ಆಗುವ ಗೌರವ ಅಲ್ಲ. ಅದು ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಸಲ್ಲಬೇಕು. ಇವತ್ತು ಮಹಿಳೆಯರು ಸ್ವಾವಲಂಬನೆಯ ಜೀವನ ನಡೆಸಲು ನವೋದಯ ಸ್ವಸಹಾಯ ಸಂಘ ಕಾರಣವಾಗಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿ” ಸಹಕಾರಿ ರಂಗದಲ್ಲಿ ಯಾವುದೇ ಜಾತಿ ಧರ್ಮ ಮತ ಅಡ್ಡಿಯಾಗುವುದಿಲ್ಲ ಅಂತಹ ಸಂಘಟನೆ ಕೂಡಲಸಂಗಮವಾಗುವುದು,ಜನಸಾಮಾನ್ಯರ ಕಟ್ಟಕಡೆಯ ವ್ಯಕ್ತಿಗೆ ಸಹಕಾರಿ ವ್ಯವಸ್ಥೆ ಮುಟ್ಟಿಸುವ ಕೆಲಸ ಈ ಸಂಸ್ಥೆಯಿಂದ ಮುಂದುವರಿಯಲಿ ಎಂದು ಆಶಿಸಿದರು.

 ಶಿರ್ವ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕುತ್ತ್ಯಾರು ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

  ಉಡುಪಿ ಶಾಸಕ ಯಶಪಾಲ್ ಸುವರ್ಣ ಕಾನ್ಫರೆನ್ಸ್ ಹಾಲ್, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಗ್ರಾಹಕರ ಭದ್ರತಾ ಕೋಶ,   ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ ರಸಗೊಬ್ಬರ ಗೋಧಾಮು ಮತ್ತು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ಎಂ ಎಸ್ ಸಿ ಗೋದಾಮು ಉದ್ಘಾಟಿಸಿದರು.

 ನಾಬಾರ್ಡ್ ನ ಡಿಡಿಎಂ ಸಂಗೀತ ಎಸ್ ಕರ್ತ, ಮಂಗಳೂರು ಮತ್ತು ಉಡುಪಿ ಸಹಕಾರ ಸಂಘಗಳ ಉಪ ನಿಬಂಧಕ ಎಚ್. ಎನ್. ರಮೇಶ್ ಹಾಗೂ ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್ ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷೆ ವಾರಿಜಾ ಆರ್ ಕಲ್ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.  

ಬೆಳಿಗ್ಗೆ ಕಚೇರಿ ಕಟ್ಟಡ ಉದ್ಘಾಟನೆ ನಡೆದು 10 ಗಂಟೆಗೆ ಪ್ರಧಾನ ಕಚೇರಿಯಿಂದ ಶಿರ್ವ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದವರೆಗೆ ಶೋಭ ಯಾತ್ರೆ ನಡೆಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.