• Home  
  • ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ (A helping hand from Srikshetra Dharmasthala)
- social service

ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ (A helping hand from Srikshetra Dharmasthala)

Share: ಶ್ರೀಕ್ಷೇತ್ರ ಧರ್ಮಸ್ಥಳದಿಂದ ಸಹಾಯಹಸ್ತ ಇನ್ನಂಜೆಯಲ್ಲಿ ಮನೆ ನಿರ್ಮಾಣಕ್ಕೆ, ಪಾಂಗಾಳದಲ್ಲಿ ಅನಾರೋಗ್ಯಕ್ಕಾಗಿ ಸಹಾಯ (Kaup) ಕಾಪು: ಕಾಪು ತಾಲೂಕಿನ ಇನ್ನಂಜೆ ರೋಟರಿ ಸಮುದಾಯದಳದ ಸಹಕಾರದಿಂದ ಲಕ್ಷ್ಮಣ ಬಂಗೇರ ರವರಿಗೆ ಮನೆ ನಿರ್ಮಾಣ ಮಾಡುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ  ಮನೆ ನಿರ್ಮಾಣಕ್ಕಾಗಿ ನೀಡಿದ 10 ಸಾವಿರ ರೂ.  ಸಹಾಯ ಧನವನ್ನು ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾಶೆಟ್ಟಿಯವರು ವಿತರಿಸಿದರು.     ಪಾಂಗಳ ಬ್ರಹ್ಮ ಲಿಂಗೇಶ್ವರ ಸಂಘದ ವಸಂತಿಯವರ ಪುತ್ರ ಸಂದೀಪ್ ತೀರಾ ಅನಾರೋಗ್ಯ ದಿಂದ ಬಳಲುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ […]

(Kaup) ಕಾಪು: ಕಾಪು ತಾಲೂಕಿನ ಇನ್ನಂಜೆ ರೋಟರಿ ಸಮುದಾಯದಳದ ಸಹಕಾರದಿಂದ ಲಕ್ಷ್ಮಣ ಬಂಗೇರ ರವರಿಗೆ ಮನೆ ನಿರ್ಮಾಣ ಮಾಡುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ  ಮನೆ ನಿರ್ಮಾಣಕ್ಕಾಗಿ ನೀಡಿದ 10 ಸಾವಿರ ರೂ.  ಸಹಾಯ ಧನವನ್ನು ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾಶೆಟ್ಟಿಯವರು ವಿತರಿಸಿದರು.  

  ಪಾಂಗಳ ಬ್ರಹ್ಮ ಲಿಂಗೇಶ್ವರ ಸಂಘದ ವಸಂತಿಯವರ ಪುತ್ರ ಸಂದೀಪ್ ತೀರಾ ಅನಾರೋಗ್ಯ ದಿಂದ ಬಳಲುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ “ಕೃಟಿಕಲ್ ಪಂಡ್” ನಲ್ಲಿ  ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 30. ಸಾವಿರದ ಮಂಜೂರಾತಿ ಪತ್ರವನ್ನು ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾಶೆಟ್ಟಿಯವರು ನೀಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಈ ಸಂದರ್ಭ ವಲಯಾಧ್ಯಕ್ಷ ಸುಜಯ ಶೆಟ್ಟಿ,  ಸೇವಾಪ್ರತಿನಿಧಿ ಜ್ಯೋತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.  

Leave a comment

Your email address will not be published. Required fields are marked *

eMedia Kannada  @2025. All Rights Reserved.