ಶ್ರೀ.ಕ್ಷೇ ಧ. ಗ್ರಾ. ಯೋಜನೆ, ಆಯುರ್ವೇದ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉಡುಪಿ ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ನಡೆದ ಉಚಿತ ಶಿಬಿರ
(Udupi)ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ ಉದ್ಯಾವರ ಉಡುಪಿ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬ್ರಹ್ಮಗಿರಿಯ ಪ್ರಗತಿ ಸೌಧದಲ್ಲಿ ಶನಿವಾರ ನೆರವೇರಿತು.
ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ನೆರವೇರಿಸಿದರು.
ಅವರು ಮಾತನಾಡಿ, ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕೆಂದು ಶುಭ ಹಾರೈಸಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಜಯಕೃಷ್ಣ ನಾಯಕರವರು ಶುಭಹಾರೈಸಿದರು.
ಆಸ್ಪತ್ರೆಯ ನುರಿತ ತಜ್ಞರಾದ ಡಾ. ಪ್ರಶಾಂತ ಡಾ. ಗಾಯತ್ರಿ, ಡಾ. ಸುಷ್ಮಾ, ಡಾ. ಶೈಲೇಶ್, ಹಾಗೂ ಸಿಬ್ಬಂದಿ ವರ್ಗದವರು, ಹಾಗೂ ಚಿಕಿತ್ಸಾ ತಂಡದವರು ಆರೋಗ್ಯ ತಪಾಸನೆಯನ್ನು ನಡೆಸಿದರು.
ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ, ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ, ಜಯಂತ್, ಶ್ರೀಮತಿ ಸ್ವಪ್ನ ಉಪಸ್ಥಿತರಿದ್ದರು.
ಪ್ರಾದೇಶಿಕ ಕಚೇರಿಯ ಆಡಳಿತ ಯೋಜನಾಧಿಕಾರಿ ಅಮರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕರಾದ ಗಿರೀಶ್ ಗೌಡ ರವರು ಕಾರ್ಯಕ್ರಮ ನಿರ್ವಹಿಸಿದರು. ಯೋಜನಾಧಿಕಾರಿ ಪ್ರವೀಣ್ ಶಿಂಧೆ ವಂದಿಸಿದರು.

