• Home  
  •  ಸಚಿವ ಶ್ರೀ ಶಿವರಾಜ್ ತಂಗಡಗಿ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ: ನಿರ್ಮಾಣ ಕಾಮಗಾರಿ ವೀಕ್ಷಣೆ (Minister Shivraj Thangadagi Visit Kaup new Mariyamma Temple; Observe the construction)
- ಕರಾವಳಿ

 ಸಚಿವ ಶ್ರೀ ಶಿವರಾಜ್ ತಂಗಡಗಿ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ: ನಿರ್ಮಾಣ ಕಾಮಗಾರಿ ವೀಕ್ಷಣೆ (Minister Shivraj Thangadagi Visit Kaup new Mariyamma Temple; Observe the construction)

Share: ಸಚಿವ ಶ್ರೀ ಶಿವರಾಜ್ ತಂಗಡಗಿ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ: ನಿರ್ಮಾಣ ಕಾಮಗಾರಿ ವೀಕ್ಷಣೆ (Kaup) ಕಾಪು:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ತಂಗಡಗಿ ಶಿವರಾಜ್ ಸಂಗಪ್ಪ ಅವರು ಬುಧವಾರ ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದರು.  ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ ಅಮ್ಮನ ಅನುಗ್ರಹ ಪ್ರಸಾದ ನೀಡಿ […]

ಸಚಿವ ಶ್ರೀ ಶಿವರಾಜ್ ತಂಗಡಗಿ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ: ನಿರ್ಮಾಣ ಕಾಮಗಾರಿ ವೀಕ್ಷಣೆ

(Kaup) ಕಾಪು:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ತಂಗಡಗಿ ಶಿವರಾಜ್ ಸಂಗಪ್ಪ ಅವರು ಬುಧವಾರ ಬೆಳಿಗ್ಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮನ ದರುಶನ ಪಡೆದರು.

 ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.

 ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ (K Vasudeva Shetty) ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾಪು ಶ್ರೀ ಮಾರಿಯಮ್ಮ ಸಾಂಸ್ಕೃತಿಕ ಭವನಕ್ಕೆ ಅನುದಾನ ಒದಗಿಸಬೇಕೆಂದು ಅಮ್ಮನ ಮುಂದೆ ಮನವಿಯನ್ನು ನೀಡಿದರು. ನಂತರ ಭರದಿಂದ ಸಾಗುತ್ತಿರುವ ನಿರ್ಮಾಣ ಕಾರ್ಯಗಳ ಬಗ್ಗೆ ವಿವರಿಸಿದರು.

 ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ತಂಗಡಗಿ ಶಿವರಾಜ್ ಅವರು,  ನಾನು ಕಾಸರಗೋಡಿಗೆ ಹೊರಟಿದ್ದೆ. ಕಾಪು ಮಾರಿಯಮ್ಮನ ದರುಶನ ಮಾಡೋಣ ಅಂತ ಆಸೆಯಾಯ್ತು. ನನ್ನ ಹುಟ್ಟೂರಿನ ಗ್ರಾನೈಟ್ ಇಳಕಲ್ಲ್ ಶಿಲೆಯನ್ನು ಇಲ್ಲಿ ಬಳಕೆ ಮಾಡಿರೋದು ನನಗೆ ಬಹಳ ಸಂತೋಷವಾಗಿದೆ. ಸಮಿತಿಯವರು ಬಹಳ ಶ್ರಮಪಟ್ಟು ಕೆಲಸವನ್ನು ಮಾಡ್ತಾ ಇದ್ದಾರೆ. ನಿಜವಾಗ್ಲೂ ಮೆಚ್ಚುವಂತದ್ದು, ಈ ಕ್ಷೇತ್ರವನ್ನು ಪ್ರವಾಸದ್ಯೋಮ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಮಾಡಲು ನನ್ನ ಇಲಾಖೆಯಿಂದ ಏನೆಲ್ಲಾ ಸಾಧ್ಯವಿದೆ ಅದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಕಾರ್ಯಧ್ಯಕ್ಷರಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ(Kaup MLA Suresh Shetty Gurme) ,  

ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ಉಪಾಧ್ಯಕ್ಷರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ,  ಸಚಿವರ ಆಪ್ತರಾದ ವೀರೇಂದ್ರ ಪಾಟೀಲ್, ಆಪ್ತ ಕಾರ್ಯದರ್ಶಿ ಮಧುಸೂದನ್ ರೆಡ್ಡಿ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ಪೂರ್ಣಿಮಾ, ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಗೌರವಧ್ಯಕ್ಷರಾದ ಅನಿಲ್ ಬಲ್ಲಾಳ್ ಕಾಪು ಬೀಡು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಸಮಿತಿಯ ಗೌರವ ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರುಗಳಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕಿ ಗೀತಾಂಜಲಿ ಎಮ್. ಸುವರ್ಣ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಚಂದ್ರಶೇಖರ್ ಅಮೀನ್, ರವೀಂದ್ರ ಎಮ್, ಬಾಬು ಮಲ್ಲಾರ್, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕ ಮಧುಕರ್ ಎಸ್, ಸುನೀಲ್ ಎಸ್. ಪೂಜಾರಿ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ಪ್ರಭಾತ್ ಶೆಟ್ಟಿ ಮೂಳೂರು, ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕಿ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಉಪಸಮಿತಿಯ ಸಂಚಾಲಕರುಗಳಾದ ಶಿವಣ್ಣ ಎಸ್. ಅಂಚನ್, ಶ್ರೀಧರ ಕಾಂಚನ್, ಕೆ. ಕೊರಗ ಬೆಳಪು, ಜಗ್ಗು ಮಲ್ಲಾರ್, ದೇವರಾಜ್ ಕೋಟ್ಯಾನ್, ಅಶ್ವಿನಿ ಕೋಟ್ಯಾನ್, ರಾಧಾರಮಣ ಶಾಸ್ತ್ರೀ, ಕಾಪು ಠಾಣಾಧಿಕಾರಿ ಅಬ್ದುಲ್ ಖಾದರ್, ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ವಿಕ್ಕಿ ಮಡುಂಬು, ಸಿಬ್ಬಂದಿಗಳು, ಅರ್ಚಕ ವೃಂದ, ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.