• Home  
  • ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕು ಸಂಘಗಳನ್ನು ಬಲಪಡಿಸಬೇಕಿದೆ : ಸೊರಕೆ (Taluk associations need to be strengthened with the cooperation of social organizations: Sorake)
- ಸಂಘ, ಸಂಸ್ಥೆಗಳು

ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕು ಸಂಘಗಳನ್ನು ಬಲಪಡಿಸಬೇಕಿದೆ : ಸೊರಕೆ (Taluk associations need to be strengthened with the cooperation of social organizations: Sorake)

Share: ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕು ಸಂಘಗಳನ್ನು ಬಲಪಡಿಸಬೇಕಿದೆ : ಸೊರಕೆ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣ : ದಾನಿಗಳಿಗೆ ಸನ್ಮಾನ    (Kaup) ಕಾಪು : ಬಿಲ್ಲವರ ಅಸ್ತಿತ್ವದ ಸಂಕೇತವಾಗಿ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ ರೂಪುಗೊಂಡಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು. ಅವರು, 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ […]

 (Kaup) ಕಾಪು : ಬಿಲ್ಲವರ ಅಸ್ತಿತ್ವದ ಸಂಕೇತವಾಗಿ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ ರೂಪುಗೊಂಡಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ಅವರು, 5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣ ಗುರು ಸಭಾಂಗಣದ ನಿಮಿತ್ತ ಜರಗಿದ ಸಭಾ ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಿ ಮಾತನಾಡಿದರು.

  ಹಿರಿಯರು ಕುಟುಂಬದಂತೆ ಸಂಘದ ಚಟುವಟಿಕೆ ಮಾಡಿದ್ದರು. ಸಮಾಜದ ಸಂಘಟನೆಗಳ ಸಹಕಾರದಿಂದ ತಾಲೂಕಿನ ಸಂಘಗಳನ್ನು ಬಲಪಡಿಸಬೇಕಿದೆ ಎಂದು ಹೇಳಿದ ಸೊರಕೆ, ರಾಜ್ಯ ಸರಕಾರದಿಂದ 50 ಲಕ್ಷ ಅನುದಾನ ನೀಡುವ ಭರವಸೆ ಇದೆ ಎಂದರು.

   ಬಿಲ್ಲವ ಮುಖಂಡ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ, ಬಿಲ್ಲವ ಸಮಾಜವು ಇತರೆ ಸಮಾಜದವರನ್ನು ಗೌರವಿಸುವ ಸಹೃದಯರು. ನಮಗೆ ರಾಜಕೀಯ ಶಕ್ತಿಯ ಅಗತ್ಯವಿದೆ. ನಮ್ಮ ಒಗ್ಗಟ್ಟನ್ನು ತೋರಿಸಬೇಕಿದೆ. ಯಾವುದೇ ಸಮಾಜವನ್ನು ದ್ವೇಷಿಸದೆ ಸರ್ವರನ್ನು ಗೌರವಿಸಬೇಕಿದೆ ಎಂದರು.

   ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ವೇದ ಕುಮಾರ್, ಬೆಳಪು ಸಹಕಾರಿ ಸೊಸೈಟಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಬಿಲ್ಲವ ಮುಖಂಡರಾದ ಗೋವಿಂದ ಬಾಬು ಪೂಜಾರಿ, ಸಂತೋಷ್ ಬೈರಂಪಳ್ಳಿ, ಪ್ರವೀಣ್ ಪೂಜಾರಿ ಮಾತನಾಡಿದರು.

 ಈ ಸಂದರ್ಭ ಸಭಾಭವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು, ಸಹಕರಿಸಿದ ಸಂಘ ಸಂಸ್ಥೆಗಳನ್ನು ಅಭಿನಂದಿಸಲಾಯಿತು.

ಕಾಪು ಬಿಲ್ಲವರ ಸಹಾಯಕ ಸಂಘದಅಧ್ಯಕ್ಷ ವಿಕ್ರಂ ಕಾಪು ಅಧ್ಯಕ್ಷತೆ ವಹಿಸಿದ್ದರು.

 ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ಪ್ರಭಾಕರ ಎಸ್ ಪೂಜಾರಿ, ಸ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ, ಪುರಸಭಾ ಸದಸ್ಯೆ ಸರಿತಾ ಪೂಜಾರಿ, ಬಿಲ್ಲವ ಮುಖಂಡರಾದ ದಿನೇಶ್ ಪೂಜಾರಿ, ಉಮೇಶ್ ಕಾಪು, ಭಾಸ್ಕರ್ ಎಮ್ ಸಾಲ್ಯಾನ್, ಸುನಿಲ್ ಡಿ ಬಂಗೇರ, ಗೋವಿಂದ ಬಾಬು ಪೂಜಾರಿ, ಪ್ರವೀಣ್ ಪೂಜಾರಿ, ಮುದ್ದು ಪೂಜಾರಿ ಕರಂದಾಡಿ, ಸದಾನಂದ ಅಂಚನ್, ಸಂತೋಷ್ ಬೈರಂಪಳ್ಳಿ, ಹರೀಶ್ ಪೂಜಾರಿ, , ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅನಿಲ್ ಕುಮಾರ್ ಸ್ವಾಗತಿಸಿದರು. ಸಚ್ಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಉದಯ ಸನಿಲ್‌ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.