• Home  
  • ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ (Coastal Force helicoptor that fell into the sea : Three missing, one resqued)
- ಅಪಘಾತ

ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ (Coastal Force helicoptor that fell into the sea : Three missing, one resqued)

Share: ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ (Gujarath) ಗುಜರಾತ್ : ಭಾರತೀಯ ಕರಾವಳಿ ಪಡೆಯ ಹೆಲಿಕಾಪ್ಟರೊಂದು ರಕ್ಷಣಾ ಕಾರ್ಯಾಚರಣೆ ಅರಬ್ಬಿ ಸಮುದ್ರಕ್ಕೆ ಬಿದ್ದು 3 ಜನರು ನಾಪತ್ತೆಯಾದ ಘಟನೆ ಗುಜರಾತ್​ನಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.  ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್​ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಈ ಅವಘಡ ಘಟಿಸಿದೆ.  ಭಾರತದ ಮೋಟಾರ್​​ ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ರಕ್ಷಿಸಲು ಹೆಲಿಕಾಪ್ಟರ್​ ಆಗಮಿಸಿತ್ತು. ಪೋರಬಂದರ್​ನಿಂದ […]

ಸಮುದ್ರಕ್ಕೆ ಬಿದ್ದ ಕರಾವಳಿ ಪಡೆಯ ಹೆಲಿಕಾಪ್ಟರ್​​ : ಮೂವರು ನಾಪತ್ತೆ, ಓರ್ವನ ರಕ್ಷಣೆ

(Gujarath) ಗುಜರಾತ್ : ಭಾರತೀಯ ಕರಾವಳಿ ಪಡೆಯ ಹೆಲಿಕಾಪ್ಟರೊಂದು ರಕ್ಷಣಾ ಕಾರ್ಯಾಚರಣೆ ಅರಬ್ಬಿ ಸಮುದ್ರಕ್ಕೆ ಬಿದ್ದು 3 ಜನರು ನಾಪತ್ತೆಯಾದ ಘಟನೆ ಗುಜರಾತ್​ನಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.

 ಭಾರತೀಯ ಕರಾವಳಿ ಪಡೆಯ ಸುಧಾರಿತ ಹೆಲಿಕಾಪ್ಟರ್​ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆ ವೇಳೆ ಈ ಅವಘಡ ಘಟಿಸಿದೆ.

 ಭಾರತದ ಮೋಟಾರ್​​ ಟ್ಯಾಂಕರ್ ಹರಿ ಲೀಲಾದಲ್ಲಿ ಗಾಯಗೊಂಡ ಸಿಬ್ಬಂದಿಗಳನ್ನು ರಕ್ಷಿಸಲು ಹೆಲಿಕಾಪ್ಟರ್​ ಆಗಮಿಸಿತ್ತು. ಪೋರಬಂದರ್​ನಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ರಕ್ಷಣಾ ಕಾರ್ಯದಲ್ಲಿ ಹೆಲಿಕಾಪ್ಟರ್​ ತೊಡಗಿತ್ತು.

 ನಾಲ್ವರನ್ನು ಸೇರಿ ಹೆಲಿಕಾಪ್ಟರ್​ ರಾತ್ರಿ 11 ಗಂಟೆಗೆ ಕಾರ್ಯ ನಿರ್ವಹಿಸುತ್ತಿತ್ತು. ಈ ವೇಳೆ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಗಿತ್ತು. ಆದರೆ ಈ ಸಮಯದಲ್ಲಿ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್‌  ಸಮುದ್ರಕ್ಕೆ ಬಿದ್ದಿದೆ ಎನ್ನಲಾಗುತ್ತಿದೆ.

 ಹೆಲಿಕಾಪ್ಟರ್​ ಪತನದ ವೇಳೆ ಓರ್ವನನ್ನು ರಕ್ಷಿಸಿಲಾಗಿದೆ.  ಮೂವರು ನಾಪತ್ತೆಯಾಗಿದ್ದಾರೆ. ಹೆಲಿಕಾಪ್ಟರ್ ಅವಶೇಷಗಳನ್ನು ಪತ್ತೆ ಮಾಡಲಾಗಿದೆ. ಮೂವರಿಗಾಗಿ ನಾಲ್ಕು ಹಡಗು, ಎರಡು ವಿಮಾನ ಕಾರ್ಯಾಚರಣೆ ನಡೆಸುತ್ತಿದೆ.​

Leave a comment

Your email address will not be published. Required fields are marked *

eMedia Kannada  @2025. All Rights Reserved.