• Home  
  • ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ (Karave Swabhimani Sena takes to the roads to put a stop to a series of accidents)
- social work

ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ (Karave Swabhimani Sena takes to the roads to put a stop to a series of accidents)

Share: ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ   ಮೈಸೂರು-ಕುಶಾಲನಗರ, ಕುಶಾಲನಗರ ರಸ್ತೆಯ ಹಂಪ್‌ಗಳಿಗೆ ಬಣ್ಣ ಬಳಿದ ಕರವೇ ಪದಾಧಿಕಾರಿಗಳು (Kushala Nagara) ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಂಪ್‌ಗಳಿಗೆ ವೇಗ ನಿಯಂತ್ರಕಗಳು ಬಣ್ಣ ಬಳಿಯದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಇಂದು ಜನಹಿತ ರಕ್ಷಣೆಗೆ ಮುಂದಾಗಿದೆ.   ಸಾರ್ವಜನಿಕರಿಂದ ಸತತವಾಗಿ ಬರುತ್ತಿದ್ದ ಅಪಘಾತಗಳ ಸುದ್ದಿಗೆ ತಕ್ಷಣವೇ ಸ್ಪಂದಿಸಿದ […]

(Kushala Nagara) ಕುಶಾಲನಗರ: ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಂಪ್‌ಗಳಿಗೆ ವೇಗ ನಿಯಂತ್ರಕಗಳು ಬಣ್ಣ ಬಳಿಯದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಇಂದು ಜನಹಿತ ರಕ್ಷಣೆಗೆ ಮುಂದಾಗಿದೆ.

  ಸಾರ್ವಜನಿಕರಿಂದ ಸತತವಾಗಿ ಬರುತ್ತಿದ್ದ ಅಪಘಾತಗಳ ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ಪದಾಧಿಕಾರಿಗಳು, ರಸ್ತೆಗಿಳಿದು ಅಪಾಯಕಾರಿ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಯುವ ಮೂಲಕ ರಸ್ತೆ ಸುರಕ್ಷತೆಯ ಮಹತ್ತರ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

 ಗೋಲ್ಡನ್ ಟೆಂಪಲ್ ಹೋಗುವ ರಸ್ತೆ ಪಕ್ಕದ ಹೆದ್ದಾರಿ,   ಕುಶಾಲನಗರ ಹಳೆ ಮಾರ್ಕೆಟ್ ರಸ್ತೆ, ಐಬಿ ರಸ್ತೆ, ಸೋಮವಾರಪೇಟೆ ಮುಖ್ಯ ರಸ್ತೆ ಗಳ ಹಂಪ್‌ ಗಳಿಗೆ ಬಣ್ಣ ಬಳಿಯಲಾಯಿತು.

 ಈ ಸಂದರ್ಭ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಉಪಾಧ್ಯಕ್ಷ ರಾಜಶೇಖರ್ ಗೌಡ,   ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಅಧ್ಯಕ್ಷೆ  ಜಯಶ್ರೀ ಮುರುಗೇಶ್, ಪ್ರಚಾರ ಸಮಿತಿ ಅಧ್ಯಕ್ಷ ಫ್ರೆಡ್ಡಿ,  ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ಉಪಾಧ್ಯಕ್ಷ ನಾಸಿರ್, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಆರ್. ಚಂದ್ರು, ಕಾರ್ಮಿಕ ಘಟಕದ ಉಪಾಧ್ಯಕ್ಷ  ಮಣಿಕಂಠ, ಸಂಚಾಲಕ ವಿಪಿ ಚಂದ್ರಶೇಖರ್, ಕೂಡಿಗೆ ವಲಯ ಅಧ್ಯಕ್ಷೆ ನಿಶಾ, ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷ ಕ್ಲಿಫರ್ಡ್ ರೊಡ್ರಿಗಸ್, ಪ್ರಮುಖರಾದ ಅಂತೋಣಿ, ನಂಜಪ್ಪ, ವಿಲ್ಸನ್, ಬಾಲಕೃಷ್ಣ, ಖಾಸಿಂ,  ಜೈರುದ್ದೀನ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.