• Home  
  • ಸರ್ಕಾರಿ ಬಸ್ಸಿಗೆ ಹಿಂದಿನಿಂದ ಗುದ್ದಿದ ನೂತನ ಕಾರು, ಸಂಪೂರ್ಣ  ನಜ್ಜುಗುಜ್ಜು (Bu̧s Car accident au Uchila NH 66)
- ಅಪರಾಧ

ಸರ್ಕಾರಿ ಬಸ್ಸಿಗೆ ಹಿಂದಿನಿಂದ ಗುದ್ದಿದ ನೂತನ ಕಾರು, ಸಂಪೂರ್ಣ  ನಜ್ಜುಗುಜ್ಜು (Bu̧s Car accident au Uchila NH 66)

Share: ಸರ್ಕಾರಿ ಬಸ್ಸಿಗೆ ಹಿಂದಿನಿಂದ ಗುದ್ದಿದ ನೂತನ ಕಾರು, ಸಂಪೂರ್ಣ  ನಜ್ಜುಗುಜ್ಜು (Uchila) ಉಚ್ಚಿಲ: ಉಚ್ಚಿಲ ರಾಹೆ 66 ರಲ್ಲಿ ಸರಕಾರಿ ಬಸ್ಸಿಗೆ ಕಾರೊಂದು ಗುದ್ದಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.  ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸರಕಾರಿ ಬಸ್ಸು ಉಚ್ಚಿಲ ರಾ. ಹೆದ್ದಾರಿ ಪಕ್ಕ ನಿಂತಿತ್ತು. ಈ ಸಮಯ  ಮಣಿಪಾಲಕ್ಕೆ ಸಾಗುತ್ತಿದ್ದ ನೂತನ ಟೊಯಟಾ ಹೈಬ್ರಿಡ್ ಕಾರು ನಿಂತಿದ್ದ ಬಸ್ಸಿಗೆ ಹಿಂದಿನಿಂದ ಗುದ್ದಿದೆ.   ಹೆದ್ದಾರಿಯಲ್ಲಿ ನಿಂತಿದ್ದ ಬಸ್ಸನ್ನು ಕಂಡ ಕಾರಿನ ಚಾಲಕಿ ಬ್ರೇಕನ್ನು ಒತ್ತಿದ್ದಾಗ, […]

ಸರ್ಕಾರಿ ಬಸ್ಸಿಗೆ ಹಿಂದಿನಿಂದ ಗುದ್ದಿದ ನೂತನ ಕಾರು, ಸಂಪೂರ್ಣ  ನಜ್ಜುಗುಜ್ಜು

(Uchila) ಉಚ್ಚಿಲ: ಉಚ್ಚಿಲ ರಾಹೆ 66 ರಲ್ಲಿ ಸರಕಾರಿ ಬಸ್ಸಿಗೆ ಕಾರೊಂದು ಗುದ್ದಿದ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ.

 ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ಸರಕಾರಿ ಬಸ್ಸು ಉಚ್ಚಿಲ ರಾ. ಹೆದ್ದಾರಿ ಪಕ್ಕ ನಿಂತಿತ್ತು. ಈ ಸಮಯ  ಮಣಿಪಾಲಕ್ಕೆ ಸಾಗುತ್ತಿದ್ದ ನೂತನ ಟೊಯಟಾ ಹೈಬ್ರಿಡ್ ಕಾರು ನಿಂತಿದ್ದ ಬಸ್ಸಿಗೆ ಹಿಂದಿನಿಂದ ಗುದ್ದಿದೆ.  

ಹೆದ್ದಾರಿಯಲ್ಲಿ ನಿಂತಿದ್ದ ಬಸ್ಸನ್ನು ಕಂಡ ಕಾರಿನ ಚಾಲಕಿ ಬ್ರೇಕನ್ನು ಒತ್ತಿದ್ದಾಗ, ಕಾರು ನಿಯಂತ್ರಣ ಕಳೆದುಕೊಂಡು ಬಸ್ಸಿಗೆ ಗುದ್ದಿ ಹೆದ್ದಾರಿ ವಿಭಾಜಕದಲ್ಲಿ ಪಲ್ಟಿಯಾಗಿ ಬಿದ್ದಿದೆ.

ಕಾರಿನಲ್ಲಿ ಮಣಿಪಾಲ ಆಸ್ಪತ್ರೆಯ ಮಹಿಳಾ ವೈದ್ಯರೊಬ್ಬರು ಇದ್ದು, ಅವರು  ತ್ರಿಶೂರಿನಿಂದ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದರು.

ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.