ಸಾಂತೂರು : ಸ್ಟಾಕ್ ಮಾರ್ಕೇಟ್ ಹೂಡಿಕೆ – ರೂ. 4 ಲಕ್ಷ 90 ಸಾವಿರ ಹಣ ಕಳೆದುಕೊಂಡ ವ್ಯಕ್ತಿ
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
(Padubidri) ಪಡುಬಿದ್ರಿ : ವ್ಯಕ್ತಿಯೋರ್ವ ಅ್ಯಪ್ ಮೂಲಕ ಸ್ಟಾಕ್ ಮಾರ್ಕೇಟ್‌ಗೆ ಹೂಡಿಕೆ ಮಾಡಿ ರೂ.4 ಲಕ್ಷದ 90 ಸಾವಿರ ಹಣ ಕಳೆದುಕೊಂಡ ಘಟನೆ ಸಾಂತೂರು ಗ್ರಾಮದಲ್ಲಿ ಘಟಿಸಿದೆ.
ಹಣ ಕಳೆದುಕೊಂಡ ಉತ್ತಮ್ ರವರು ಇನ್‌ಸ್ಟಾಗಾಂ ನಲ್ಲಿ ಸ್ಟಾಕ್ ಮಾರ್ಕೇಟ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾಗ ಮಾಡುತ್ತಿರುವಾಗ ವಾಟ್ಸಪ್ ಗ್ರೂಪ್ ಲಿಂಕ್ ಇದ್ದು, ಅದರ ಮೂಲಕ ಸಂಪರ್ಕಿಸಿ, ಕಾನ್ಫೈರ್ ಎಂಬ ಹೆಸರಿನ ಆಪ್ ಡೌನ್‌ಲೋಡ್ ಮಾಡಿದ್ದರು.
ತದನಂತರ ಉತ್ತಮ್ ರವರು ಅದರಲ್ಲಿ ತಿಳಿಸಿದಂತೆ ವೈಯಕ್ತಿಕ ಡಾಟಾ ಭರ್ತಿ ಮಾಡಿ ನ. 6 ರಂದು ರೂ 50,000 ಸ್ಟಾಕ್ ಮಾರ್ಕೇಟ್‌ಗೆ ಇನ್‌ವೆಸ್ಟ್ ಮಾಡಿ, ನಂತರ ರೂಪಾಯಿ 10,000 ವಿತ್‌ಡ್ರಾ ಮಾಡಿದ್ದರು. ಅದರ ನಂತರ ಅದೇ ದಿನ ಹಂತ ಹಂತವಾಗಿ ಒಟ್ಟು ರೂ.5 ಲಕ್ಷವನ್ನು ಸ್ಟಾಕ್ ಮಾರ್ಕೇಟ್‌ಗೆ ಇನ್‌ವೆಸ್ಟ್ ಮಾಡಿದ್ದರು. ನಂತರ ಉಳಿದ 4, 90,000 ಹಣವನ್ನು ವಾಪಾಸು ತೆಗೆಯಲು ಹೋದಾಗ ಆಗದೇ ಇದ್ದಾಗ ಮೋಸದ ಅರಿವಾಗಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

