• Home  
  • ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41 ನೇ ಸಂಭ್ರಮಾಚರಣೆ : ಸಾಮೂಹಿಕ ವಿವಾಹ 7 ಜೋಡಿ ಗೃಹಸ್ಥಾಶ್ರಮಕ್ಕೆ, ಸ್ವಸ್ತಿಕ್ ಸಿರಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ (Mass wedding 7 couples to Grihasthashram, Swastik Siri, Swastik Sambhrama Awards)
- social service - ಸಂಘ, ಸಂಸ್ಥೆಗಳು

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41 ನೇ ಸಂಭ್ರಮಾಚರಣೆ : ಸಾಮೂಹಿಕ ವಿವಾಹ 7 ಜೋಡಿ ಗೃಹಸ್ಥಾಶ್ರಮಕ್ಕೆ, ಸ್ವಸ್ತಿಕ್ ಸಿರಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ (Mass wedding 7 couples to Grihasthashram, Swastik Siri, Swastik Sambhrama Awards)

Share: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41ನೇ ಸಂಭ್ರಮಾಚರಣೆ : ಸಾಮೂಹಿಕ ವಿವಾಹ 7 ಜೋಡಿ ಗೃಹಸ್ಥಾಶ್ರಮಕ್ಕೆ, ಸ್ವಸ್ತಿಕ್ ಸಿರಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ  (Bantwala) ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41ನೇ ಸಂಭ್ರಮಾಚರಣೆಯ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಏಳು ಜೋಡಿ ವಧು-ವರರು ಗ್ರಹಸ್ಥಾಶ್ರಮಕ್ಕೆ ಪಾದರ್ಪಣೆಗೈದರು.ಅರ್ಚಕರಾದ ವೇದಮೂರ್ತಿ ಶ್ರೀ ಕೃಷ್ಣಭಟ್ ಕಾರ್ಕಳ  ಮತ್ತವರ ತಂಡದ ಪೌರೋಹಿತ್ಯದಲ್ಲಿಮಧ್ಯಾಹ್ನ 12.4ರ ಶುಭ ಮುಹೂರ್ತದಲ್ಲಿ ವಧು –ವರರು […]

ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41ನೇ ಸಂಭ್ರಮಾಚರಣೆ : ಸಾಮೂಹಿಕ ವಿವಾಹ 7 ಜೋಡಿ ಗೃಹಸ್ಥಾಶ್ರಮಕ್ಕೆ, ಸ್ವಸ್ತಿಕ್ ಸಿರಿ, ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ

 (Bantwala) ಬಂಟ್ವಾಳ: ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 41ನೇ ಸಂಭ್ರಮಾಚರಣೆಯ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದ ಒಳಾಂಗಣ ಕ್ರೀಡಾಂಗಣದಲ್ಲಿ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಏಳು ಜೋಡಿ ವಧು-ವರರು ಗ್ರಹಸ್ಥಾಶ್ರಮಕ್ಕೆ ಪಾದರ್ಪಣೆಗೈದರು.
ಅರ್ಚಕರಾದ ವೇದಮೂರ್ತಿ ಶ್ರೀ ಕೃಷ್ಣಭಟ್ ಕಾರ್ಕಳ  ಮತ್ತವರ ತಂಡದ ಪೌರೋಹಿತ್ಯದಲ್ಲಿ
ಮಧ್ಯಾಹ್ನ 12.4ರ ಶುಭ ಮುಹೂರ್ತದಲ್ಲಿ ವಧು –ವರರು ವೈವಾಹಿಕ ಜೀವನಕ್ಕೆ ಪಾದಾರ್ಪಣೆಗೈದರು.
 ಇದಕ್ಕೂ ಮೊದಲು ವಧು-ವರರನ್ನು
ನಯನಾಡು  ಶ್ರೀ ರಾಮ ಭಜನಾ ಮಂದಿರದಿಂದ ಮದುವೆ ಮಂಟಪದವರೆಗೆ ವೈಭವಪೂರ್ಣವಾದ  ದಿಬ್ಬಣ ಮೆರವಣಿಗೆ ಕರೆತರಲಾಯಿತು.
 ಬಳಿಕ ನಡೆದ ಸಭಾಕಾರ್ಯಕ್ರಮವನ್ನು ದ.ಕ. ಸಂಸದ ಕ್ಯಾ.ಬೃಜೇಶ್ ಚೌಟ ಅವರು ಉದ್ಘಾಟಿಸಿದರು.

ಅವರು ಮಾತನಾಡಿ, ಸಮಾಜದಲ್ಲಿರುವ ನೈಜವಾದ ಅಸಕ್ತರಿಗೆ ನ್ಯಾಯ ಒದಗಿಸುವ ಕಾರ್ಯ ರಾಜಕಾರಣಿಗಳಿಂದಾಗಬೇಕು. ಅಂತಹ ಸಾಲಿಗೆ ಸೇರಿರುವ ತುಂಗಪ್ಪ ಬಂಗೇರ ಮತ್ತವರ ತಂಡದ ಕಾರ್ಯ ಮುಂದಿನ ಪೀಳಿಗೆಗೆ ಪ್ರರೇಣೆ ಮತ್ತು ಇತರರಿಗೆ ಮಾದರಿಯಾಗಿದೆ ಎಂದರು.
ಕಷ್ಟದಲ್ಲಿದ್ದವರಿಗೆ ಸಲ್ಲಿಸುವ ಸೇವೆಯು ಅನುಕರಿಣೀಯವಾಗಿದೆ ಎಂದ ಸಂಸದರು ಜಿಲ್ಲೆಯ‌ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆಯಿತ್ತು ನೂತನ ವಧು, ವರರಿಗೆ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಮಾತನಾಡಿ, ಕಳೆದ 13 ವರ್ಷಗಳಿಂದ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದು, ಭವಿಷ್ಯದ ದಿನಗಳಲ್ಲಿಯೂ ಈ ಕಾರ್ಯಕ್ರಮ ನಿರಂತರ ವಾಗಿ ನಡೆಯಲಿ ಎಂದು ಹಾರೈಸಿದರು.

ಬಂಟ್ವಾಳ ತಾಲೂಕು ಸಂಸ್ಕಾರ ಭಾರತಿ ಅಧ್ಯಕ್ಷರು, ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಅದಾನಿ ಗ್ರೂಪ್ ಮಂಗಳೂರು ಅಧ್ಯಕ್ಷ ಕಿಶೋರ್ ಆಳ್ವ,  ಮುಖ್ಯಮಂತ್ರಿಯವರ ಮಾಜಿ ಆಪ್ತ ಸಹಾಯಕರಾದ ಜಗನ್ನಾಥ ಬಂಗೇರ, ಬಂಟ್ವಾಳ ತಾ. ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ
ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ವ್ಯ.ಸೇ.ಸ. ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ, ಪಿಲಾತಬೆಟ್ಟು ಕೃ.ಪ.ಸ.ಸಂಘದ ಉಪಾಧ್ಯಕ್ಷ ರವಿಶಂಕರ್ ಹೊಳ್ಳ, ಗುತ್ತಿಗೆದಾರ ಮೋಹನ್ ಶೆಟ್ಟಿ ನರ್ವಲ್ದಡ್ಕ, ವಾಮದಪದವು ಕೃ.ಪ.ಸ.ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಶ್ರೀ.ಕ್ಷೇ.ಧ.ಗ್ರಾ.ಯೋ.ಯ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಉದ್ಯಮಿಗಳಾದ ಹರೀಂದ್ರ ಪೈ, ಜಯಚಂದ್ರ ಬೊಳ್ಮಾರ್, ಪಿಲಾತಬೆಟ್ಟು ಗ್ರಾ.ಪಂ.ಮಾಜಿ ಅಧ್ಯಕ್ಷೆ ಹರ್ಷಿಣಿ ಪುಪ್ಪಾನಂದ, ಬಡಗ ಕಜೆಕಾರು ಕೃ.ಪ.ಸ.ಸಂಘದ ಅಧ್ಯಕ್ಷ ಸತೀಶ್ ಪೂಜಾರಿ, ಉದ್ಯಮಿ ಕರುಣಾಕರ ಪೂಜಾರಿ ಮಾಳಿಗೆ ಮನೆ, ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರ. ಕಾರ್ಯದರ್ಶಿ ಪ್ರಶಾಂತ್, ಕುತ್ತಿಲ ಗರಡಿ ಸಮಿತಿ ಅಧ್ಯಕ್ಷ ಸುಶಾಂತ್ ಕರ್ಕೇರ, ಉದ್ಯಮಿ ಸುರೇಶ್ ಕರ್ಕೇರ, ಸಿದ್ದಕಟ್ಟೆ ಕೃ.ಪ.ಸ.ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನ್ಯಾಯವಾದಿ ಅನಿಲ್ ಕುಮಾರ್, ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಸುನೀಲ್ ಗಾಯಕ್‌ವಾಡ್‌ ಮುಂಬೈ, ಕೊರಂಟಬೆಟ್ಟ ಗರಡಿ ಸಮಿತಿ ಅಧ್ಯಕ್ಷ ಸದಾನಂದ ಪೂಜಾರಿ ಕೊರಂಟಬೆಟ್ಟು ಅತಿಥಿಗಳಾಗಿ ಭಾಗವಹಿಸಿದ್ದರು.     
ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಸಂಚಾಲಕ ರಾಜೇಶ್ ಪಿ. ಪುಂಜಾಲಕಟ್ಟೆ, ಪದಾಧಿಕಾರಿಗಳಾದ ಮಾಧವ ಬಂಗೇರ, ಜಯರಾಜ್ ಅತ್ತಾಜೆ ಮೊದಲಾದವರಿದ್ದರು.
ಕ್ಲಬ್ ನ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಎಂ. ಅವರು ಸ್ವಾಗತಿಸಿದರು. ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಪ್ರಸ್ತಾವಿಸಿ ಇದುವರೆಗೆ 498 ಜೋಡಿಗಳಿಗೆ ವಿವಾಹ ಮಾಡಲಾಗಿದೆ. ಸಾಮೂಹಿಕ ವಿವಾಹಗಳಿಗೆ ಕೇಂದ್ರ ಸರಕಾರ ಒತ್ತು ನೀಡುವ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಸಂಸದರಲ್ಲಿ ಮನವಿ ಮಾಡಿದರು.

ರಂಗ ಕಲಾವಿದ ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.
– ರಾಜ್ಯ ಸ್ವಸ್ತಿಸಿರಿ ಪ್ರಶಸ್ತಿ ಪ್ರದಾನ
ಇದೇ ವೇಳೆ ಹರೀಶ್ ಪೂಜಾರಿ (ಉದ್ಯಮ ), ಅಬ್ದುಲ್ ಕುಂಞಿ(ಸಮಾಜ ಸೇವೆ), ಸಾಯಿ ಸುಮಾ ನಾವಡ(ಯಕ್ಷಗಾನ), ಶಶಿಧರ ಆಚಾರ್ಯ (ಶಿಲ್ಪಕಲೆ), ಸಂದೇಶ್ ಮದ್ದಡ್ಕ (ಧಾರ್ಮಿಕ) ಅವರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ
  ಐ.ಬಿ. ಸಂದೀಪ್ ಕುಮಾರ್ ಜೈನ್, ಹರೀಶ ಮಾಂಬಾಡಿ (ಪತ್ರಿಕೋದ್ಯಮ), ರಮೇಶ್ ನಾಯ್ಕ್ (ಸಮಾಜಸೇವೆ), ಚಂದ್ರಹಾಸ ಕಡೆಗೋಳಿ(ಕುಸ್ತಿ), ಆದರ್ಶ ಶೆಟ್ಟಿ (ಅಂಕಣಕಾರ), ಡಿ.ಎಸ್. ಬೋಳೂರು(ರಂಗಭೂಮಿ), ರಮೇಶ್ ಶೆಟ್ಟಿ (ಸಮಾಜ ಸೇವೆ) ಅವರಿಗೆ   ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
 ಬೆಳಿಗ್ಗೆ ನಡೆದ ಭಜನಾ ಕಮ್ಮಟವನ್ನು ಬೆಳ್ತಂಗಡಿ
ಶಾಸಕರಾದ ಹರೀಶ್ ಪುಂಜಾ ಅವರು  ಉದ್ಘಾಟಿಸಿ,  ನೂತನ ವಧುವರರಿಗೂ ಶುಭಹಾರೈಸಿದರು.

 ಭಜನಾ ತರಬೇತುದಾರ ಸಂದೇಶ್ ಮದ್ದಡ್ಜ ಅವರ ಸಾರಥ್ಯದಲ್ಲಿ 18
ಭಜನಾ ತಂಡಗಳು ಭಾಗವಹಿಸಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.