• Home  
  • ಸಾಲಿಗ್ರಾಮ – ಕಾಯಾಕಿಂಗ್ ಮೂಲಕ ಸಂವಿಧಾನ ಜಾಗೃತಿ (Saligrama: Constitution awareness through kayaking)
- ಪ್ರಚಲಿತ

ಸಾಲಿಗ್ರಾಮ – ಕಾಯಾಕಿಂಗ್ ಮೂಲಕ ಸಂವಿಧಾನ ಜಾಗೃತಿ (Saligrama: Constitution awareness through kayaking)

Share: ಸಾಲಿಗ್ರಾಮ – ಕಾಯಾಕಿಂಗ್ ಮೂಲಕ ಸಂವಿಧಾನ ಜಾಗೃತಿ (Saligrama)ಸಾಲಿಗ್ರಾಮ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸೀತಾ ನದಿತಟದಲ್ಲಿ ಉಡುಪಿ ಎಡಿಸಿ ಮಮತಾ ದೇವಿ (Udupi ADC Mamatha Devi), ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ (CEO Prathik) ಹಾಗೂ ಕುಂದಾಪುರ ಎ. ಸಿ ರಶ್ಮಿ(Kundapura AC Rashmi) ಕಾಯಾಕಿಂಗ್ ಮೂಲಕ ಸಂವಿಧಾನದ ಜಾಗೃತಿ ಮೊಳಗಿಸಿದರು. ೭೫ ಎಂದು ವಿವಿಧ ರೀತಿಯ ವಿನ್ಯಾಸಗೊಳಿಸಿದ ದೋಣಿಯ ಮೂಲಕ ವಿಹರಿಸಿ ಅಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಡಾ. […]

ಸಾಲಿಗ್ರಾಮ – ಕಾಯಾಕಿಂಗ್ ಮೂಲಕ ಸಂವಿಧಾನ ಜಾಗೃತಿ

(Saligrama)ಸಾಲಿಗ್ರಾಮ: ಇಲ್ಲಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸೀತಾ ನದಿತಟದಲ್ಲಿ ಉಡುಪಿ ಎಡಿಸಿ ಮಮತಾ ದೇವಿ (Udupi ADC Mamatha Devi), ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ (CEO Prathik) ಹಾಗೂ ಕುಂದಾಪುರ ಎ. ಸಿ ರಶ್ಮಿ(Kundapura AC Rashmi) ಕಾಯಾಕಿಂಗ್ ಮೂಲಕ ಸಂವಿಧಾನದ ಜಾಗೃತಿ ಮೊಳಗಿಸಿದರು.

೭೫ ಎಂದು ವಿವಿಧ ರೀತಿಯ ವಿನ್ಯಾಸಗೊಳಿಸಿದ ದೋಣಿಯ ಮೂಲಕ ವಿಹರಿಸಿ ಅಲ್ಲಿ ಅಳವಡಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಭಾವ ಚಿತ್ರಕ್ಕೆ ಪುಷ್ಭಾರ್ಚನೆಗೈದು ಗೌರವ ಸಮರ್ಪಿಸಿದರು.

 ಈ ಸಂದರ್ಭದಲ್ಲಿ ಕುಂದಾಪುರ ಎ.ಸಿ ರಶ್ಮಿ ಮಾತನಾಡಿ, ಸಾಲಿಗ್ರಾಮ ಕಾಯಾಕಿಂಗ್ ಪಾಯಿಂಟ್ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳು, ಜಾಗೃತಿ ಆಂದೋಲನಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸುವಂತೆ ನಡೆಸುವ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

 ರಾಜ್ಯದಲ್ಲೆ ಮೊಟ್ಟ ಮೊದಲ ಬಾರಿಗೆ ನದಿಯ ಮೂಲಕ ಸಂವಿಧಾನ ಜಾಗೃತಿ ಮೊಳಗಿಸಿದ ಬಗ್ಗೆ ಅಧಿಕಾರಿ ವರ್ಗ ಹರ್ಷ ವ್ಯಕ್ತಪಡಿಸಿತು.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖಾಧಿಕಾರಿ ಕುಮಾರ್, ತಹಶಿಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಪ್ರಬೇಶನರಿ ಐಪಿಎಸ್ ಅಧಿಕಾರಿ ಹರ್ಷ ಪ್ರಿಯಂವಧಾ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಅನಿತಾ ಮದ್ಲೂರ್, ಕಾಯಾಕಿಂಗ್ ಮುಖ್ಯಸ್ಥರಾದ ಮಿಥುನ್ ಮೆಂಡನ್, ಲೋಕೇಶ್ ಮೆಂಡನ್, ವಿನಯ್ ಬಂಗೇರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶಿವ ಎಸ್ ನಾಯ್ಕ್ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.