ಸಾಸ್ತಾನ : ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕ, ಮಾಲಕರ ಸಂಘದಿಂದ ವನಮಹೋತ್ಸವ
(Sasthana) ಸಾಸ್ತಾನ : ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರು, ಸಾಸ್ತಾನ ಇವರ ಸಂಯೋಜನೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಸಾಸ್ತಾನದಲ್ಲಿ ಜರಗಿತು.
ಬ್ರಹ್ಮಾವರ ವಲಯ ಅರಣ್ಯ ಇಲಾಖೆಯ ಅಧಿಕಾರಿ ಮಾಲ್ತೇಶ್ ಅಳಲಗಿರಿ ಸಸಿ ವಿತರಿಸು ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅವರು ಈ ಸಂದರ್ಭ ಮಾತನಾಡಿ, ಪರಿಸರದ ಬಗ್ಗೆ ನಿರ್ಲಕ್ಷೀಯ ದೋರಣೆ ಬಿಟ್ಟು, ಅದರ ಉಳಿವಿಗಾಗಿ ವರ್ಷವಿಡೀ ವನಮಹೋತ್ಸವ ಆಚರಿಸುವ ಅನಿವಾರ್ಯತೆ ಇದೆ. ಪರಿಸರ ಉಳಿದರೆ ಮನುಕುಲ ಉಳಿದಂತೆ ಇಲ್ಲವಾದಲ್ಲಿ ಅವನತಿ ಕಟ್ಟಿಟ್ಟ ಬುತ್ತಿ ಎಂದರಲ್ಲದೆ, ಮನೆ ಮನೆಯಲ್ಲೂ ಪರಿಸರ ಉಳಿವಿಗಾಗಿ ಶ್ರಮಿಸಿ ಎಂದರು.
ಇದೇ ವೇಳೆ ಸ್ಥಳೀಯರಿಗೆ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಗಿಡ ಹಸ್ತಾಂತರಿಸಿದರು.
ಸಾಸ್ತಾನಾ ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕರು ಹಾಗೂ ಮಾಲಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋಸೆಸ್ ರೋಡ್ರಿಗಸ್, ಗೋಳಿ ಗರಡಿ ಕ್ಷೇತ್ರದ ಪಾತ್ರಿ ಶಂಕರ್ ಪೂಜಾರಿ, ಅನ್ಯನ್ಯತಾ ಸಂಘದ ಉಪಾಧ್ಯಕ್ಷ ಸೂರ್ಯ ಪೂಜಾರಿ, ಕಾರ್ಯದರ್ಶಿ ಅನಿಲ್ ಹಾಂಡ, ಗೋಪಾಲ ಐರೋಡಿ, ಶಂಕರ್ ಕುಲಾಲ್, ಸುರೇಶ್ ಪೂಜಾರಿ ಗುಂಡ್ಮಿ, ಟೂರಿಸ್ಟ್ ಕಾರು ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಓಣಿ ಮನೆ, ಹಾಗೂ ಅನ್ಯೋನ್ಯತ ಗೂಡ್ಸ್ ವಾಹನ ಚಾಲಕರ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಉದಯ ಪೂಜಾರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

