ಸಾಸ್ತಾನ ಸಿ ಎ ಬ್ಯಾಂಕ್ ಚುನಾವಣಾ ಮತಪಟ್ಟಿಯಲ್ಲಿ ಸತ್ತವರಿಗೂ ಮತದಾನದ ಹಕ್ಕು, ಬಿಜೆಪಿ ಬೆಂಬಲಿತರ ಆರೋಪ, ಪ್ರತಿಭಟನೆ

ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ ಇದರ ಚುನಾವಣೆ ಜು.೩೦ ಭಾನುವಾರ ನಡೆಯಲಿದ್ದು ಚುನಾವಣಾ ಪ್ರಕ್ರಿಯೆಲ್ಲಿ ಲೋಪವೆಸಗಲಾಗಿದೆ ಚುನಾವಣೆ ಮುಂದೂಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತರು ಪ್ರತಿಭಟಿಸಿದ ಘಟನೆ ನಡೆದಿದೆ.
ಶನಿವಾರ ಸಾಸ್ತಾನ ಸಿ.ಎ ಬ್ಯಾಂಕ್ ಎದುರುಗಡೆ ಬಿಜೆಪಿ ಬೆಂಬಲಿತರು ದಿಢೀರ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅಭ್ಯರ್ಥಿ ಪ್ರತಾಪ್ ಶೆಟ್ಟಿ ಸಾಸ್ತಾನ ಮಾತನಾಡಿ, ಮತದಾನದ ಹಕ್ಕು ಪಡೆದವರು ೨೧೭೪ ಜನ ಆದರೆ ಚುನಾವಣೆಗೆ ಒಂದೆರಡು ದಿನಗಳಿರುವಾಗ ೫೩೪ ಹೆಚ್ಚುವರಿ ಮತದಾರರ ಪಟ್ಟಿ ಸೇರ್ಪಡೆಗೊಳಿಸಿದ್ದಾರೆ. ಅದು ಸಹ ನಮ್ಮ ಕೈಗೆ ಸಿಕ್ಕಿಲ್ಲ ಮತದಾರರ ಪಟ್ಟಿಯನ್ನೆ ನಮ್ಮ ಅಭ್ಯರ್ಥಿಗಳಿಗೆ ಕೊಡದೆ ಕಾಂಗ್ರೆಸ್ ಬೆಂಬಲಿತರು ಪಟ್ಟಿ ಹಿಡಿದು ಮತಪ್ರಚಾರದಲ್ಲಿ ನಿರತರಾಗಿದ್ದಾರೆ ಹಾಗಾದರೆ ಇದು ಸಹಕಾರ ಕಾಯ್ದೆ ಉಲ್ಲಂಘನೆ ಅಲ್ಲವೆ?
ಕಾಂಗ್ರೆಸ್ ಬೆಂಬಲಿತರು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹವಣಿಸಿ ಈ ತಂತ್ರ ರೂಪಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಸಂವಿಧಾನ ರೂಪಿಸಿದ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು.
ಈ ಬಗ್ಗೆ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ಸತ್ತವರಿಗೂ ಮತದಾನದ ಹಕ್ಕು ಆಕ್ಷೇಪ
ಚುನಾವಣಾ ಪ್ರಕ್ರಿಯೆಲ್ಲಿ ನಿಗದಿಯಾದ ಮತದಾರರ ಪಟ್ಟಿ ಪರಿಷ್ಕರಿಸಿ ಅದನ್ನು ಮತದಾನಕ್ಕೆ ಅವಕಾಶ ನೀಡುವ ಜತೆಗೆ ಯಾರೋ ಓರ್ವ ವ್ಯಕ್ತಿ ಯೋರ್ವ ಹೈಕೋರ್ಟಿಗೆ ಹೋಗಿ ೫೩೪ ಹೆಚ್ಚುವರಿ ಮತದಾನದ ಹಕ್ಕು ನೀಡುವಂತೆ ಪ್ರತಿಪಾದಿಸಿದ್ದಾರೆ.
ಅದನ್ನು ಸಹಕಾರಿ ನಿಬಂಧಕರು ಅನುಮೋದನೆ ನೀಡಿದ್ದಾರೆ. ಇದ್ಯಾವ ನ್ಯಾಯ? ಚುನಾವಣಾ ಒಂದು ದಿನ ಬಾಕಿ ಇದೆ ಅದೇಗೆ ಅವರಿಗೆ ಅವಕಾಶ ನೀಡಲಾಗುತ್ತದೆ ಸಹಕಾರಿ ಕಾಯ್ದೆ ಉಲ್ಲಂಘಿಸಿದಂತೆ.
ಅಲ್ಲದೆ ಅದರಲ್ಲಿ ೨೧ಜನ ಸತ್ತವರು ಇದ್ದಾರೆ. ಅದೇಗೆ ಅವಕಾಶ ನೀಡಲಾಗುತ್ತದೆ. ಸತ್ತವರು ಮತದಾನ ಮಾಡುತ್ತಾರೆಯೇ ಎಂದು ಪ್ರತಿಭಟನಾಕಾರರು ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.
ಚುನಾವಣೆ ಮುಂದೂಡಿ ಇಲ್ಲ. ಮತದಾರರನ್ನು ಮುಂದಿಟ್ಟು ಬಹಿಷ್ಕಾರದ ಎಚ್ಚರಿಕೆ
ನೀವು ಕೋಟ್೯ ಆದೇಶದ ಅನುಸಾರ ೫೩೪ ಜನರಿಗೆ ಅಥವಾ ಇನ್ನೆರಡು ಪಟ್ಟಿ ನೀಡಿದರೂ ಅವಕಾಶ ನೀಡಿ. ಅದಕ್ಕೆ ನಮ್ಮ ತಕರಾರು ಇಲ್ಲ. ಆದರೆ ಚುನಾವಣಾ ಪ್ರಕ್ರಿಯೆ ನಾಲ್ಕು ದಿನ ಮುಂದೂಡಿ ನಮಗೂ ಮತದಾರರ ಬಳಿ ತೆರಳಿ ಮತಯಾಚಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು.
ಇದಕ್ಕೆ ಚುನಾವಣಾ ಅಧಿಕಾರಿ ರೋಹಿತ್ ತಳ್ಳಿಹಾಕಿ ನಿಗದಿಯಂತೆ ಚುನಾವಣಾ ನಡೆಯಲಿದೆ. ಇದರಲ್ಲಿ ನಾವೇನೂ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಾಗ, ಪ್ರತಿಭಟನಾಕಾರರು ನೀವು ಆಳುವ ಸರಕಾರದ ಪರ ಕೆಲಸ ಮಾಡಬೇಡಿ ಸಂವಿಧಾನದ ಪ್ರಕಾರವೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ನಿಮ್ಮ ಅಧಿಕಾರ ದುರ್ಬಳಕೆ ಸಲ್ಲ ಎಂದು ಅಕ್ರೋಶ ಹೊರಹಾಕಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ಐರೋಡಿ ವಿಠ್ಠಲ ಪೂಜಾರಿ, ಶಂಕರ್ ಅಂಕದಕಟ್ಟೆ, ಸುರೇಶ್ ಕುಂದರ್, ರಾಜು ಪೂಜಾರಿ ಕಾರ್ಕಡ, ಮತ್ತಿತರರು ಇದ್ದರು.

