• Home  
  • ಸಿಎಂ ಸಿದ್ದರಾಮಯ್ಯನವರಿಂದ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ವೀಕ್ಷಣೆ
- ಕರಾವಳಿ - ಜೀವನಶೈಲಿ - ವಿಡಿಯೋ

ಸಿಎಂ ಸಿದ್ದರಾಮಯ್ಯನವರಿಂದ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ವೀಕ್ಷಣೆ

Share: ಸಿಎಂ ಸಿದ್ದರಾಮಯ್ಯನವರಿಂದ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ವೀಕ್ಷಣೆ  ಉಡುಪಿ: ಜಿಲ್ಲೆಯಲ್ಲಾದ ಮಳೆ ಹಾನಿ ಪ್ರದೇಶಗಳಿಗೆ ಇಂದು(ಮಂಗಳವಾರ) ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಲು ಆಗಮಿಸಿದ್ದಾರೆ.  ಈ ವೇಳೆ ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.  ಹೌದು,’ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ […]

ಸಿಎಂ ಸಿದ್ದರಾಮಯ್ಯನವರಿಂದ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ವೀಕ್ಷಣೆ

 ಉಡುಪಿ: ಜಿಲ್ಲೆಯಲ್ಲಾದ ಮಳೆ ಹಾನಿ ಪ್ರದೇಶಗಳಿಗೆ ಇಂದು(ಮಂಗಳವಾರ) ಸಿಎಂ ಸಿದ್ದರಾಮಯ್ಯನವರು ಭೇಟಿ ನೀಡಲು ಆಗಮಿಸಿದ್ದಾರೆ.

 ಈ ವೇಳೆ ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ ಸಿಎಂ ದಿಢೀರ್ ಭೇಟಿ ನೀಡಿದ್ದು, ವಿದ್ಯಾರ್ಥಿನಿಯರ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

 ಹೌದು,’ಗೃಹಲಕ್ಷ್ಮೀ ಯೋಜನೆ ಬಗ್ಗೆ ವಿದ್ಯಾರ್ಥಿನಿಯರ ಜೊತೆ ಮಾತುಕತೆ ನಡೆಸಿದ ಸಿಎಂ, ‘ಈ ಯೋಜನೆಯಿಂದ ನಿಮಗೆ ಹಣ ಸಿಗುವುದಿಲ್ಲ, ಬದಲಾಗಿ ನಿಮ್ಮ ಅಮ್ಮನಿಗೆ ಹಣ ಸಿಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಡಿಗ್ರಿ ಪಾಸಾದ ಮೇಲೆ ನಿಮಗೆ ಕೆಲಸ ಸಿಗುವ ತನಕ ಯುವನಿಧಿ ನೀಡುತ್ತೇವೆ. ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದರು.

 ಇನ್ನು ವಿದ್ಯಾರ್ಥಿಗಳ ಜೊತೆ ಮಾತನಾಡುವಾಗ ‘ನಮಗೆ ಲ್ಯಾಪ್ಟಾಪ್ ಅವಶ್ಯಕತೆಯಿದ್ದು ಅದನ್ನು ಕೊಡಬೇಕಾಗಿ ಬೇಡಿಕೆಯಿಟ್ಟಿದ್ದಾರೆ.

 ಹೌದು, ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ತಮ್ಮಬೇಡಿಕೆಯನ್ನು ಸಿಎಂ ಮುಂದಿಟ್ಟಿದ್ದಾರೆ.

 ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಅಗತ್ಯವಿದೆ. ನಮಗೆ ಲ್ಯಾಪ್ ಟಾಪ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಈ ವೇಳೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.