• Home  
  • ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿಸುವ ಬೆಳ್ಳಿ ರಥಕ್ಕೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್‌ ನಿಂದ ಅದ್ಧೂರಿ ಸ್ವಾಗತ (Padubidri Gramin Congress gives grand welcome to the silver chariot dedicated to Subrahmanya Kshetra)
- ಧಾರ್ಮಿಕ

ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿಸುವ ಬೆಳ್ಳಿ ರಥಕ್ಕೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್‌ ನಿಂದ ಅದ್ಧೂರಿ ಸ್ವಾಗತ (Padubidri Gramin Congress gives grand welcome to the silver chariot dedicated to Subrahmanya Kshetra)

Share: ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿಸುವ ಬೆಳ್ಳಿ ರಥಕ್ಕೆ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್‌ ನಿಂದ ಅದ್ಧೂರಿ ಸ್ವಾಗತ ದಾನಿ ಡಾ. ಕೆ.ವಿ. ರೇಣುಕಾ ಪ್ರಸಾದ್ ಕುರುಂಜಿಯವರು ಶ್ರೀ ಸುಬ್ರಹ್ಮಣ್ಯ ಸಮರ್ಪಿಸಿದ ರಥ   (Padubidri) ಪಡುಬಿದ್ರಿ: ದಾನಿ ಡಾ. ಕೆ.ವಿ. ರೇಣುಕಾ ಪ್ರಸಾದ್ ಕುರುಂಜಿ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ  ಸಮರ್ಪಿಸುವ  ಹಾಗೂ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ. ಲಕ್ಷ್ಮೀ ನಾರಾಯಣ ಆಚಾರ್ಯ ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರು ನಿರ್ಮಿಸಿರುವ ಸುಮಾರು ₹1 ಕೋಟಿ […]

ದಾನಿ ಡಾ. ಕೆ.ವಿ. ರೇಣುಕಾ ಪ್ರಸಾದ್ ಕುರುಂಜಿಯವರು ಶ್ರೀ ಸುಬ್ರಹ್ಮಣ್ಯ ಸಮರ್ಪಿಸಿದ ರಥ  

(Padubidri) ಪಡುಬಿದ್ರಿ: ದಾನಿ ಡಾ. ಕೆ.ವಿ. ರೇಣುಕಾ ಪ್ರಸಾದ್ ಕುರುಂಜಿ ಅವರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ  ಸಮರ್ಪಿಸುವ  ಹಾಗೂ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರ ಬಿ. ಲಕ್ಷ್ಮೀ ನಾರಾಯಣ ಆಚಾರ್ಯ ಮತ್ತು ಪುತ್ರ ಶ್ರೀ ರಾಜಗೋಪಾಲ ಆಚಾರ್ಯರು ನಿರ್ಮಿಸಿರುವ ಸುಮಾರು ₹1 ಕೋಟಿ ವೆಚ್ಚದ ಬೆಳ್ಳಿ ಬೆಳ್ಳಿರಥವನ್ನು  ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಮರ್ಪಿಸುವ ಸಲುವಾಗಿ ಮಂಗಳವಾರ ಬೆಳ್ಳಿ ರಥವನ್ನು ಪಡುಬಿದ್ರಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

     ಪಡುಬಿದ್ರಿಯಲ್ಲಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕರುಣಾಕರ ಎಮ್ ಪೂಜಾರಿ ನೇತೃತ್ವದಲ್ಲಿ ಪುಷ್ಪಾರ್ಚನೆ ಗೈದು ಸ್ವಾಗತಿಸಲಾಯಿತು.

     ಈ ಸಂದರ್ಭ ಕೆ.ಪಿ.ಸಿ.ಸಿ. ಸಂಯೋಜಕ ನವೀನಚಂದ್ರ ಜೆ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ ಸುಕುಮಾರ್ , ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಡಳಿತ ಮೊಕ್ತೇಸರರಾದ ಭವಾನಿ ಶಂಕರ್ ಹೆಗ್ಡೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ಅಧ್ಯಕ್ಷ ವಿಶ್ವಾಸ್ ಅಮೀನ್, ಗ್ರಾ.ಪಂ ಸದಸ್ಯರಾದ ಗಣೇಶ್ ಕೋಟ್ಯಾನ್, ಜ್ಯೋತಿ ಮೆನನ್, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್,  ಕಾಂಗ್ರೆಸ್ ನಾಯಕರಾದ ಸುಚರಿತಾ ಅಮೀನ್, ಕಸ್ತೂರಿ ಪ್ರವೀಣ್, ತಸ್ನೀನ್ ಆರಾ, ಸಂತೋಷ್ ಪಡುಬಿದ್ರಿ,  ಆಶ್ವಥ್ ಆಚಾರ್ಯ, ಕೃಷ್ಣ ಬಂಗೇರ, ಗಣೇಶ್ ಪೂಜಾರಿ, ರೋಶಾನ್ ಪೂಜಾರಿ, ನಾರಾಯಣ  ಕಲ್ಲಟ್ಟೆ ,  ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.