• Home  
  • ನಾಳೆ (ನ. 5) ಹುಣ್ಣಿಮೆ ಈ ವರ್ಷದ  ದೊಡ್ಡ ಸೂಪರ್ ಮೂನ್ (Tomorrow (Nov. 5) is the full moon, the biggest supermoon of the year)
- science

ನಾಳೆ (ನ. 5) ಹುಣ್ಣಿಮೆ ಈ ವರ್ಷದ  ದೊಡ್ಡ ಸೂಪರ್ ಮೂನ್ (Tomorrow (Nov. 5) is the full moon, the biggest supermoon of the year)

Share:   ನಾಳೆ (ನ. 5) ಹುಣ್ಣಿಮೆ ಈ ವರ್ಷದ  ದೊಡ್ಡ ಸೂಪರ್ ಮೂನ್   ಅಕ್ಟೋಬರ್, ನವಂಬರ್, ಡಿಸೆಂಬರ್ ಮೂರು ಸೂಪರ್‌ ಮೂನ್‌ ಗಳಲ್ಲಿ ಇದು ಅತಿ ದೊಡ್ಡದು     (Udupi) ಉಡುಪಿ: ನವಂಬರ್ 5ನೇ ತಾರೀಕು ಕಾರ್ತೀಕ ಹುಣ್ಣಿಮೆಯಂದು ಸೂಪರ್‌ ಮೂನ್‌ ಕಾಣಸಿಗಲಿದೆ.    ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರತಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ . ಈ ಬಾರಿ ವಿಶೇಷವಾಗಿ ಭವ್ಯ ಸೂಪರ್‌ ಮೂನ್‌ […]

    (Udupi) ಉಡುಪಿ: ನವಂಬರ್ 5ನೇ ತಾರೀಕು ಕಾರ್ತೀಕ ಹುಣ್ಣಿಮೆಯಂದು ಸೂಪರ್‌ ಮೂನ್‌ ಕಾಣಸಿಗಲಿದೆ.

   ಶರತ್ಕಾಲದ ರಾತ್ರಿ ತಂಪು ತಂಪಾಗಿ ತೇವಭರತಹವಾಮಾನದಲ್ಲಿ ಶುಭ್ರ ಆಕಾಶ ನೋಡಲು ಆಹ್ಲಾದ. ಅದರಲ್ಲೂ ಹುಣ್ಣಿಮೆ ಚಂದ್ರ ಬೆಳದಿಂಗಳ ಹಾಲು ಹೊಯ್ದಂತೆ . ಈ ಬಾರಿ ವಿಶೇಷವಾಗಿ ಭವ್ಯ ಸೂಪರ್‌ ಮೂನ್‌ ಕಾಣ ಸಿಗಲಿದೆ.

    ಈ ವರ್ಷದ ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ಮೂರು ಸೂಪರ್‌ ಮೂನ್‌ ಗಳಲ್ಲಿ ಈಗ ನಡೆವ ಸೂಪರ್ ಮೂನ್ ಭೂಮಿಗೆ ಸಮೀಪವಿದ್ದು ಅತಿ ದೊಡ್ಡದು.

   ಭೂಮಿಗೆ ದೀರ್ಘ ವೃತ್ತದಲ್ಲಿ 28 ದಿನಗಳಿಗೊಮ್ಮೆ ತಿರುಗು ಚಂದ್ರ ಭೂಮಿಗೊಮ್ಮೆ ಸಮೀಪವಿರುವುದುಂಟು. { 3,56,400ಕಿಮೀ).  ಆಗ ಹುಣ್ಣಿಮೆಯಾದಲ್ಲಿ ಚಂದ್ರ ಮಾಮೂಲಿಗಿಂತ ದೊಡ್ಡದಾಗಿ ಕಾಣುವನು.

   ಈ ವರ್ಷದ ಮೂರು ಸೂಪರ್ ಮೂನ್‌ಗಳು ಅಕ್ಟೋಬರ್, ನವಂಬರ್ ಹಾಗೂ ಡಿಸೆಂಬರ್ ನಲ್ಲಿವೆಯಾದರೂ, ಭೂಮಿಗೆ ಅತೀ ಸಮೀಪ ಈ ನವಂಬರ್ 5ರ ಹುಣ್ಣಿಮೆಯದ್ದು. ಅದು 3, 57,000 ಕಿಮೀಗೆ ಬಂದು ಸರಾಸರಿ ದೂರಕ್ಕಿಂತ 27,000 ಕಿಮೀ ಭೂಮಿಗೆ ಹತ್ತಿರ ಬರುತ್ತದೆ. 14 ಅಂಶ ದೊಡ್ಡದಾಗಿ ಕಂಡು 27ಅಂಶ ಹೆಚ್ಚಿನ ಬೆಳದಿಂಗಳಿಂದ ಚಂದ್ರ ಹೊಳೆಯಲಿದೆ.

  ಅಂದು ಅಕಾಲಿಕ ಮಳೆಯಿಲ್ಲದಿದ್ದಲ್ಲಿ ನಮ್ಮ ಹುಣ್ಣಿಮೆಯ ಸೂಪರ್ ಸೂಪರ್ ಮೂನ್ , ಚಂದ್ರ ತುಂಬಾ ಖುಷಿ ಕೊಡಲಿದೆ ಎಂದು ಉಡುಪಿಯ ಡಾ. ಎ ಪಿ ಭಟ್ ಹೇಳಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.