ಸುರತ್ಕಲ್ ಟೈಮ್ ಔಟ್ ಸಾಕರ್ ಕಪ್ 2024ಗೆ ಚಾಲನೆ
(Surathkal) ಸುರತ್ಕಲ್ : ಇಲ್ಲಿಗೆ ಸಮೀಪದ ಮುಕ್ಕದಲ್ಲಿರುವ ನೂತನಟೈಮ್ ಔಟ್ ಟರ್ಫ್ ಕ್ರೀಡಾಂಗಣದಲ್ಲಿ ಟೈಮ್ ಔಟ್ ಸಾಕರ್ ಕಪ್ 2024 ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಹಾಗೂ ಫುಟ್ಬಾಲ್ ಕ್ರೀಡಾಂಗಣದಲ್ಲಿ ಕ್ರೀಡಾಳುಗಳನ್ನು ಅಭಿನಂದಿಸುವ ಮೂಲಕ ಪುಟ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಒಟ್ಟು 18 ತಂಡಗಳು ಫುಟಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.
ಪ್ರಥಮ ಹದಿನೈದು ಸಾವಿರ, ದ್ವಿತೀಯ ಹತ್ತು ಸಾವಿರ, ಹಾಗೂ ಪ್ರತಿಷ್ಠಿತ ಟ್ರೋಫಿಯೊಂದಿಗೆ ಈ ಕ್ರೀಡಾಕೂಟ ಆಯೋಜನೆಗೊಂಡಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಪುಷ್ಪರಾಜ್ ಮುಕ್ಕಬ ಅವರು ಮಾತನಾಡಿ, ನಗರ ಪ್ರದೇಶದಲ್ಲಿ ಕ್ರೀಡಾಂಗಣದ ಕೊರತೆ ಇರುವ ಸಂದರ್ಭದಲ್ಲಿ ಇಂತಹ ಸುಸಜ್ಜಿತ ಟರ್ಫ್ ಕೋರ್ಟುಗಳನ್ನು ಸ್ಥಾಪಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಕ್ರೀಡೆಯ ಮೂಲಕ ಅವಕಾಶವನ್ನು ಕಲ್ಪಿಸಿ ಕೊಡುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಇಂತಹ ಒಳಾಂಗಣ ಕ್ರೀಡಾಕೂಟಗಳು ಹೆಚ್ಚು ನಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಪ್ರಮುಖ ಗಣ್ಯರಾದ ಜಯಂತ ಶೆಟ್ಟಿ, ಅಶೋಕ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ,
ಸುರತ್ಕಲ್ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಧಾಕರ ಪೂಂಜಾ, ಮುಕ್ಕ ಶ್ರೀ ಸತ್ಯ ಧರ್ಮದೇವಿ ದೇವಸ್ಥಾನದ ಆಡಳಿತ ಸಮಿತಿಯ ಪ್ರಮುಖರಾದ ರವಿರಾಜ ಸುವರ್ಣ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಅಶೋಕ್ ಶೆಟ್ಟಿ ತಡಂಬೈಲು, ಟೈಮ್ ಔಟ್ ಟರ್ಪ್ ಕ್ರೀಡಾಂಗಣದ ಆಶ್ರಯ್ ಶೆಟ್ಟಿ, ಅಕ್ಷಯ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರೂಪೇಶ್ ಮತ್ತು ಇತರರು ಉಪಸ್ಥಿತರಿದ್ದರು.

