• Home  
  • ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ (Saint Milagres Co. Ltd. – Society extends a helping hand to Spandana Divyangara Kendra)
- ಸಂಘ, ಸಂಸ್ಥೆಗಳು - ಸಹಾಯ ಹಸ್ತ

ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ (Saint Milagres Co. Ltd. – Society extends a helping hand to Spandana Divyangara Kendra)

Share: ಸೈಂಟ್ ಮಿಲಾಗ್ರಿಸ್ ಕೋ ಆ. – ಸೊಸೈಟಿ ವತಿಯಿಂದ ಸ್ಪಂದನ ದಿವ್ಯಾಂಗರ ಕೇಂದ್ರಕ್ಕೆ ಸಹಾಯ ಹಸ್ತ ಸಮಾಜ ಸೇವೆಯು ಹಣಕಾಸು ಸಂಸ್ಥೆಗಳಿಗೆ ಮಾದರಿ: ವಂ. ಫಾ. ಡೆನ್ನಿಸ್ ಡೇಸಾ (Udupi) ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ – ಸೊಸೈಟಿ ವತಿಯಿಂದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣಾ ಕೇಂದ್ರದಲ್ಲಿ ಮಂಗಳವಾರ ಅಗತ್ಯ ವಸ್ತುಗಳ ವಿತರಣಾ ಸಮಾರಂಭ ನಡೆಯಿತು.   ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆ. ಸೊಸೈಟಿಯು […]

(Udupi) ಉಡುಪಿ: ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ – ಸೊಸೈಟಿ ವತಿಯಿಂದ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ನೇಜಾರಿನ ಸ್ಪಂದನ ದಿವ್ಯಾಂಗರ ಸಂರಕ್ಷಣಾ ಕೇಂದ್ರದಲ್ಲಿ ಮಂಗಳವಾರ ಅಗತ್ಯ ವಸ್ತುಗಳ ವಿತರಣಾ ಸಮಾರಂಭ ನಡೆಯಿತು.

  ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆ. ಸೊಸೈಟಿಯು ಅನೇಕ ವರ್ಷಗಳಿಂದ ಉಡುಪಿ ಜಿಲ್ಲೆಯ ವಿಶೇಷ ಮಕ್ಕಳ ಶಾಲೆ ಹಾಗೂ ದಿವ್ಯಾಂಗರ ಕೇಂದ್ರಕ್ಕೆ ಅಗತ್ಯ ವಸ್ತುಗಳನ್ನು ವಿತರಿಸಿಕೊಂಡು ಬರುತ್ತಿದೆ. ಇದು ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿ ಆಗಿದೆ ಎಂದು ಶೋಕ ಮಾತಾ ಇಗರ್ಜಿಯ ಧರ್ಮಗುರು  ವಂ. ಫಾ. ಡೆನ್ನಿಸ್ ಡೇಸಾ ಹೇಳಿದರು.

   ಹಣಕಾಸಿನ ವ್ಯವಹಾರ ಜೊತೆ ಸಮಾಜಮುಖಿ ಕಾರ್ಯವು ನಿರಂತರವಾಗಿ ನಡೆದು ದುರ್ಬಲ ವರ್ಗದವರಿಗೆ ಆಸರೆಯಾಗಿ ಇರಲಿ ಎಂದು ಹಾರೈಸಿದರು‌. 

  ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಲ್ಪೆ ಠಾಣಾ ಉಪನಿರೀಕ್ಷಕರಾದ ಅನಿಲ್ ಕುಮಾರ್, ಸೊಸೈಟಿಯ ಅಭಿವೃದ್ಧಿ ಅಧಿಕಾರಿ ಮನೀಶ್, ಉಡುಪಿ ಶಾಖಾ ವ್ಯವಸ್ಥಾಪಕಿ ಪ್ರಮೀಳಾ ಲೋಬೊ, ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ, ಉಡುಪಿ ಶಾಖೆಯ ಸಿಬ್ಬಂದಿಗಳಾದ ಸಂದೇಶ್, ನಿಶಿತ್, ರೋಶನ್ ಮೆಂಡೋನ್ಸ, ಧನುಷ್, ಸುವಿಧಾ, ಅಜಯ್ ಶೆಟ್ಟಿ, ಸುಮಂತ್ ಉಪಸ್ಥಿತರಿದ್ದರು.

   ಜಾಸ್ಮಿನ್ ಶಿಲ್ಪಾ ಕ್ರಾಸ್ಟ ನಿರೂಪಿಸಿದರು. ನಿಶಿತ್ ಕುಲಾಲ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.