ಸೋಣ ಶುಕ್ರವಾರ: ಕುಂಜಾರುಗಿರಿಗೆ ಮಹಿಳೆಯರ ದಂಡು
ಉಡುಪಿ: ಶ್ರೀದೇವಿಯ ಒಂಬತ್ತು ಕ್ಷೇತ್ರಗಳಲ್ಲಿ ಒಂದಾದ ಕುಂಜಾರು ಗಿರಿ ಕ್ಷೇತ್ರದಲ್ಲಿ ವಿಶೇ಼ಷ ಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಿತು. ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ರವರು ಮಾತನಾಡಿ, ಸಾಕ್ಷಾತ್ ಭಗವಂತನ ರೂಪದಲ್ಲಿರುವ ಪರಶುರಾಮ ದೇವರು ಯುಗದ ಆರಂಭದಲ್ಲಿ ಶ್ರೀ ದುರ್ಗಾದೇವಿಯನ್ನು ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದಾರೆ. ದೇವತೆಗಳೆಲ್ಲ ಇಲ್ಲಿಗೆ ಪುಷ್ಪಕ ವಿಮಾನದಲ್ಲಿ ಬಂದಿರುತ್ತಾರೆಂಬ ಪ್ರತೀತಿ ಇದ್ದುರಿಂದ ಇಲ್ಲಿಯ ಕ್ಷೇತ್ರವನ್ನು ವಿಮಾನ ಗಿರಿ ಎಂದು ಹೇಳಲಾಗುತ್ತಿದೆ. ಕರಾವಳಿಯ ಸೋಣ ತಿಂಗಳಲ್ಲಿ ಈ ಬಾರಿ ಐದು ಶುಕ್ರವಾರ ಬರುತ್ತಿದ್ದು, ಇಂದು ಮೂರನೇ ಶುಕ್ರವಾರ. ಮುಂದೆ ಎರಡು ಶುಕ್ರವಾರ ಬಾಕಿ ಇದ್ದು, ಆ ದಿನ ವಿಶೇಷ ಪೂಜೆ ನೆರವೇರಲಿದೆ ಎಂದರು.
ಸಾವಿರಾರು ಭಕ್ತಾಧಿಗಳು ದೇವಳಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
