• Home  
  • ಸೌಜನ್ಯ ಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ
- ಅಪರಾಧ - ವಿಡಿಯೋ

ಸೌಜನ್ಯ ಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

Share: ಸೌಜನ್ಯ ಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ  ಉಡುಪಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಸೌಜನ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಸಭೆಗೂ ಮುನ್ನ ಪ್ರತಿಭಟನಾಕಾರರು ಉಡುಪಿಯ ಅನಂತೇಶ್ವರ ಮತ್ತು ಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಕೃಷ್ಣಮಠದಿಂದ ಅಜ್ಜರಕಾಡುವಿನ ತನಕ ಪಾದಾಯಾತ್ರೆ ನಡೆಸಿದರು. ಪ್ರತಿಭಟನಾ […]

ಸೌಜನ್ಯ ಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ

 ಉಡುಪಿ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಸೌಜನ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಸಭೆಗೂ ಮುನ್ನ ಪ್ರತಿಭಟನಾಕಾರರು ಉಡುಪಿಯ ಅನಂತೇಶ್ವರ ಮತ್ತು ಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಕೃಷ್ಣಮಠದಿಂದ ಅಜ್ಜರಕಾಡುವಿನ ತನಕ ಪಾದಾಯಾತ್ರೆ ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ “ಕಳೆದ 11 ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಕಪ್ಪು ಚುಕ್ಕೆ ಬಂದ್ರೆ ಸುಮ್ಮನಿರಲ್ಲ. ನಾವು ಶಾಂತ ರೀತಿಯ ಹೋರಾಟ ಮಾಡುತ್ತಿದ್ದೇವೆ. ಈ ಪರಿಪಾಠ ಮುಂದುವರಿದರೆ ಹೋರಾಟ ತೀವ್ರಗೊಳಿಸುತ್ತೇವೆ. ಲಕ್ಷ ಕೋಟಿ ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಸಿಎಂ, ಗೃಹಸಚಿವರು, ಪ್ರಧಾನಿಗೆ ಎಚ್ಚರಿಕೆ ಕೊಡುತ್ತೇನೆ. ಯಾಕೆ ನೀವು ಆರೋಪಿಗಳನ್ನು ರಕ್ಷಿಸಿ ಇಟ್ಟಿದ್ದೀರಿ. ಮಾತೆಯರನ್ನು ನಮ್ಮ ಮೇಲೆ ಚೂ ಬಿಡ್ತೀರಾ?. ನಮ್ಮ ಬಳಿಯೂ ಮಾತೆಯರಿದ್ದಾರೆ. ಎಂತೆಂತಹ ದುರ್ಗಾದೇವಿಯರಿದ್ದಾರೆ ಗೊತ್ತಾ? ದುಡ್ಡಿಗೋಸ್ಕರ ಅಲ್ಲ ಸತ್ಯ ಧರ್ಮ ನ್ಯಾಯಕ್ಕೋಸ್ಕರ ಹೋರಾಡುವ ದುರ್ಗೆಯರಿದ್ದಾರೆ. ಭಾಷಣ ಮಾಡುವುದು ನಮಗೆ ತೀಟೆ ಅಲ್ಲ. ನಮ್ಮ ತೆರಿಗೆಯ ಹಣ ಪ್ರಕರಣದ ತನಿಖೆಗೆ ಬಳಕೆಯಾಗಿದೆ. ಪ್ರಕರಣ ತನಿಖೆಗೆ 80 ಕೋಟಿ ಅಧಿಕ ಖರ್ಚಾಗಿದೆ. ಜನರ ತೆರಿಗೆ ಹಣಕ್ಕೆ ಬೆಲೆ ಇಲ್ವಾ? ಅಂದು ಸೌಜನ್ಯ ನ ಸಾವಾದಾಗ ಅಂದು ಇದ್ದ ಮುಖ್ಯಮಂತ್ರಿ, ಗೃಹ ಮಂತ್ರಿಗಳು ಇಂದು ಏನಾಗಿದ್ದಾರೆ ಎಂದು ಯೋಚಿಸಿ ನೋಡಿ, ಇವರೆಲ್ಲ ಸೌಜನ್ಯ ಪ್ರಕರಣವನ್ನು ಮುಚ್ಚಿಸಿದ್ದಾರೆ.

  ಇಲ್ಲಿನ ಸಂಸದೆ ಶೋಭಾ ಕರಂದ್ಲಾಂಜೆ ಕೂಡಾ ಅಂದು ಧರ್ಮಸ್ಥಳಕ್ಕೆ ಬಂದು ಹೋಗಿದ್ದರು ಆದರೆ ಅವರದೇ ಸಂಬಂಧದ ಸಾವೀಗೀಡಾಗಿದ್ದ ಸೌಜನ್ಯ ನ ಮನೆಗೆ ಭೇಟಿ ನೀಡಲಿಲ್ಲ. ಶೋಭಾ ಕರಂದ್ಲಾಂಜೆ ಗೆ ಮಕ್ಕಳನ್ನು ಹೆತ್ತು, ಸಲಹಿ ತಿಳಿದಿಲ್ಲ ಆದುದರಿಂದ ಸೌಜನ್ಯ ನ ತಾಯಿಯ ದುಖ ಅವರಿಗೆ ಅರ್ಥವಾಗಿಲ್ಲ.

 ಧರ್ಮದಲ್ಲಿ ನಾವು ಇದ್ದೇವೆ. ಮನೆಯವರು ನ್ಯಾಯಾಲಯದಲ್ಲಿ ದೂರು ಕೊಟ್ಟರು ಕೂಡ ಆರೋಪಿಗಳವಿರುದ್ದ ಕ್ರಮ ಆಗಿಲ್ಲ. ನಾವು ಈಗ ನಮ್ಮ ಬಾಯಿಯಿಂದ ಮಾತ್ರ ಸತ್ಯ ಹೇಳಬಹುದು ಆದರೇ ಒಂದೇ ಒಂದು ಅಕ್ಷರದ ದಾಖಲೆ ಇಲ್ಲ.  ಇದನ್ನು ಆಗಿನ ಪೋಲೀಸರು ನುಂಗಿ ನೀರು ಕುಡಿದಿದ್ದಾರೆ. ಧರ್ಮಸ್ಥಳ ನ್ಯಾಯದ ಪೀಠ. ಅಂತಹ ಜಾಗದಲ್ಲಿ ಇಂದು ನ್ಯಾಯ ಸಿಗುವುದಿಲ್ಲ ಎಂದಾದರೆ ಸನಾತನ ಹಿಂದೂ ಧರ್ಮ ನಾಶ ಆಗಿ ಹೋಗುತ್ತದೆ. ಈ ದೇಶದ ನ್ಯಾಯಾಂಗ ವ್ಯವಸ್ಥೆ ಸರಿ ಆಗಬೇಕು. ಮುಂದಿನ ಎರಡು ಮೂರು ತಿಂಗಳು ನಿರಂತರ ಹೋರಾಟ ನಡೆಯಲಿದೆ. ಸೌಜನ್ಯ ನ ತಾಯಿ ಯಾರ ವಿರುದ್ದ ಆರೋಪ ಮಾಡಿದ್ದರೋ ಅವರಿಗೆ ಶಿಕ್ಷೆ ಆಗಬೇಕು” ಎಂದರು.

ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ, ದೈವ ಚಿಂತಕರದ ತಮ್ಮಣ್ಣ ಶೆಟ್ಟಿ, ಸಾವಿರಾರು ಮಂದಿ ಹೋರಾಟಗಾರರು ಭಾಗವಹಿಸಿದರು.

 ಪ್ರತಿಭಟನೆಯಲ್ಲಿ ಹೈಡ್ರಾಮಾ

  ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ಮತ್ತು ಈ ಪ್ರತಿಭಟನೆ ವಿರುದ್ಧ ನಡೆದ ಇನ್ನೊಂದು ಪ್ರತಿಭಟನೆಗಳು ಹೈಡ್ರಾಮಕ್ಕೆ ಕಾರಣವಾದವು.

 ತಿಮರೋಡಿ ಮಹೇಶ್‌ ಶೆಟ್ಟಿಯವರ ಪ್ರತಿಭಟನೆಯ ವಿರುದ್ಧ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತೆಯರು ಮತ್ತು ಧರ್ಮಸ್ಥಳದ ಭಕ್ತಾಭಿಮಾನಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.

    ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಧರ್ಮಸ್ಥಳದ ಹೆಸರನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ, ಡಾ.ಡಿ.ವಿರೇಂದ್ರ ಹಗ್ಗೆಡೆ ಪರ ಘೋಷಣೆಗಳನ್ನು ಕೂಗುತ್ತಾ ನೂರಾರು ಸಂಖ್ಯೆಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

  ಈ ಸಂದರ್ಭದಲ್ಲಿ ಪೊಲೀಸರು ಈ ಪ್ರತಿಪ್ರತಿಭಟನಾಕಾರರನ್ನು ತಡೆಯಲು ಹರಸಾಹಸ ನಡೆಸಿದರು. ಈ ಸಂದರ್ಭದಲ್ಲಿ ತಳ್ಳಾಟ ಕೂಡ ನಡೆಯತು. ಯೋಜನೆಯ ಕಾರ್ಯಕರ್ತೆಯರು ಪೊಲೀಸರೊಂದಿಗೆ ವಾಗ್ವಾದಕ್ಕೂ ಇಳಿದರು. ಕೊನೆಗೆ ಹಗ್ಗ, ಬ್ಯಾರಿಕೇಡ್ ಗಳ ಮೂಲಕ ಎರಡೂ ಪ್ರತಿಭಟನಾಕಾರರನ್ನು ದೂರಕ್ಕೆ ಸರಿಸಲಾಯಿತು.

   ರಥಬೀದಿ, ಕಾಲ್ನಡಿಗೆ, ಹುತಾತ್ಮ ಸ್ಮಾರಕದ ಬಳಿ ನೂರಾರು ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. ಖುದ್ದು ಎಸ್ಪಿ ಅಕ್ಷಯ್ ಹಾಕೆ, ಎಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ದಿನಕರ್ ಮುಂತಾದ ಹಿರಿಯ ಅಧಿಕಾರಿಗಳು ಬಂದೋಬಸ್ತ್ ಉಸ್ತುವಾರಿ ನಡೆಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.