• Home  
  • ಸ್ಕೂಟಿಗೆ ಕಾರು ಡಿಕ್ಕಿ : ಬೈಕ್ ಸಹ ಸವಾರ ಟ್ಯಾಂಕರ್ ಅಡಿಗೆ ಬಿದ್ದು ಸಾವು (Car collides with scooty: Biker falls into tanker’s kitchen, dies)
- ಅಪಘಾತ

ಸ್ಕೂಟಿಗೆ ಕಾರು ಡಿಕ್ಕಿ : ಬೈಕ್ ಸಹ ಸವಾರ ಟ್ಯಾಂಕರ್ ಅಡಿಗೆ ಬಿದ್ದು ಸಾವು (Car collides with scooty: Biker falls into tanker’s kitchen, dies)

Share:  ಸ್ಕೂಟಿಗೆ ಕಾರು ಡಿಕ್ಕಿ : ಬೈಕ್ ಸಹ ಸವಾರ ಟ್ಯಾಂಕರ್ ಅಡಿಗೆ ಬಿದ್ದು ಸಾವು ವಿಶ್ವನಾಥ್‌ ಪುತ್ರನ್ ಮುಂಬಯಿಯಲ್ಲಿ ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದರು. (Pangala) ಪಾಂಗಾಳ: ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶ ಪಡೆಯಲು ನಿಂತಿದ್ದ ಸ್ಕೂಟಿಗೆ ಸ್ಕಾಪಿ೯ಯೋ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನ ಮೇಲೆ ಟ್ಯಾಂಕರ್ ಹರಿದು ಗಂಭೀರವಾಗಿ ಗಾಯೊಂಡು ಮೃತಪಟ್ಟಿರುವ ಘಟನೆ ಕೋತಲ್ ಕಟ್ಟೆ ಪಾಂಗಾಳ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.    ಕಾಪು ಉಳಿಯಾರಗೊಳಿ ಗ್ರಾಮದ […]

(Pangala) ಪಾಂಗಾಳ: ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶ ಪಡೆಯಲು ನಿಂತಿದ್ದ ಸ್ಕೂಟಿಗೆ ಸ್ಕಾಪಿ೯ಯೋ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನ ಮೇಲೆ ಟ್ಯಾಂಕರ್ ಹರಿದು ಗಂಭೀರವಾಗಿ ಗಾಯೊಂಡು ಮೃತಪಟ್ಟಿರುವ ಘಟನೆ ಕೋತಲ್ ಕಟ್ಟೆ ಪಾಂಗಾಳ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

   ಕಾಪು ಉಳಿಯಾರಗೊಳಿ ಗ್ರಾಮದ ಕೈಪುಂಜಾಲು ನಿವಾಸಿ ವಿಶ್ವನಾಥ ಕೆ. ಪುತ್ರನ್ ಮೃತ ಸಹಸವಾರ.

   ಅವರು ತಮ್ಮ ಗೆಳೆಯ ಸಂತೋಷ್ ಎನ್ ಅಮೀನ್   ಚಲಾಯಿಸುತ್ತಿದ್ದ ಆತನ ಸಹೋದರ ರಾಜು ಶ್ರೀಯಾನ್ ಅವರ ಬೈಕಿನ ಹಿಂಬದಿ ಸವಾರನಾಗಿ ಕುಳಿತು ಕೈಪುಂಜಾಲ್‌ನಿಂದ ಕಾಪುವಿಗೆ ತೆರಳುತ್ತಿದ್ದ ಸಂದರ್ಭ  ಕೋತಾಲಕಟ್ಟೆ ಸವೀ೯ಸ್ ರಸ್ತೆಯ ಮೂಲಕ ಪಾಂಗಾಳಕ್ಕೆ ಹೋಗಿ ಅಲ್ಲಿ ಯೂ-ಟನ್೯ ಪಡೆದು ವಾಪಾಸ್ಸು ಕಾಪುವಿಗೆ ಹೋಗಲು ಸವೀ೯ಸ್ ರಸ್ತೆ ಮುಕ್ತಾಯಗೊಂಡ ಜಾಗದಲ್ಲಿ ನಿಂತು ನಿಧಾನವಾಗಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದಾಗ ಮಂಗಳೂರುನಿಂದ ಉಡುಪಿಗೆ ಕಡೆಗೆ ಹೋಗುತ್ತಿದ್ದ ಸ್ಕಾಪಿ೯ಯೋ ಕಾರು ಬಂದು ಸ್ಕೂಟಿಗೆ ವರೆಸಿದ ಪರಿಣಾಮ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದು,  ರಸ್ತೆಯ ಬಲ ಭಾಗಕ್ಕೆ ಬಿದ್ದಿದ್ದ ವಿಶ್ವನಾಥ ಕೆ. ಪುತ್ರನ್  ಅವರಿಗೆ ಕಾರಿನ ಹಿಂದೆ ಬರುತ್ತಿದ್ದ ಟ್ಯಾಂಕರ್ ಲಾರಿಯ ಚಕ್ರ ತಾಗಿದ ಪರಿಣಾಮ ವಿಶ್ವನಾಥ ಕೆ ಪುತ್ರನ್‌ನ ಬಲಗೈ ಹಾಗೂ ಹೊಟ್ಟೆಯ ಭಾಗ ಹಾಗೂ ಬೆನ್ನಿಗೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಗಾಯಾಳುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ದುರದೃಷ್ಟವಶಾತ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಕಾರು ಮತ್ತು ಟ್ಯಾಂಕರ್ ಚಾಲಕರ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಮುಂಬಯಿ ಬಿಟ್ಟು ಬಂದಿದ್ದ ವ್ಯಕ್ತಿಯ ದಾರುಣ ಅಂತ್ಯ : ವಿಶ್ವನಾಥ ಕೆ. ಪುತ್ರನ್ ಹಲವು ವರ್ಷ ಮುಂಬಯಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಇತ್ತೀಚೆಗೆ ಊರಿಗೆ ಬಂದು ನೆಲೆಸಿದ್ದರು. ಊರಿನಲ್ಲಿ ಹೊಸದಾಗಿ ಬದುಕು ಕಟ್ಟಿಕೊಳ್ಳುವ ಯತ್ನದಲ್ಲಿದ್ದ ಅವರು ವಿಧಿಯಾಟಕ್ಕೆ ಬಲಿಯಾಗಿದ್ದಾರೆ.

  ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.