ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು –ಜಯರಾಮ ಶೆಟ್ಟಿ
(Kota)ಕೋಟ: ಮಲ್ಲಿಗೆ ಕೃಷಿಯಲ್ಲಿ ಸ್ವಾವಲಂಬಿ ಬದುಕು ಕಾಣಲು ಸಾಧ್ಯ ಎಂಬುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಹಿಳೆಯರೇ ಸಾಕ್ಷಿ. ಮನೆ ವಠಾರ ತಾರೆಸಿ ಮೇಲೆ ಇದನ್ನು ನಿರ್ವಹಿಸಿ ತೊರಿಸಿ ಕೊಟ್ಟಿದ್ದಾರೆ ಎಂದು ಕೋಟ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಹೇಳಿದರು.
ಪಾಂಡೇಶ್ವರ ಯಡಬೆಟ್ಟು ಪರಿಸರದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು ಇವರ ಜಂಟಿ ಸಹಯೋಗದೊಂದಿಗೆ 53 ನೇ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಲ್ಲಿಗೆ ಕೃಷಿ ಒಂದು ಲಾಭದಾಯಕ ಬೆಳೆಯಾಗಿ ಸಾಕಷ್ಟು ಕೃಷಿಕರ ಕೈ ಹಿಡಿದಿದೆ. ಕೃಷಿಯಲ್ಲಿ ನಾನಾ ರೀತಿಯ ಇದೆ ಆದರೆ ಜನ ಒಂದೇ ಕೃಷಿ ಪದ್ಧತಿ ಅನುಸರಿಸುವುದರಿಂದ ಲಾಭದಾಯಕದಿಂದ ವಿಮುಖರಾಗುತ್ತಿದ್ದಾರೆ. ಬದಲಾಗಿ ಸಮಗ್ರ ಕೃಷಿ ಪದ್ದತಿಯನ್ನು ಪ್ರತಿಯೊರ್ವ ರೈತರು ಅನುಸರಿಸಿದರೆ ಯಶಸ್ಸು ತಾನಾಗಿಯೇ ಬರುತ್ತದೆ. ಪಂಚವರ್ಣ ಸಂಘಟನೆಯ ರೈತ ಗುರುತಿಸುವ ಕಾಯಕ ಅತ್ಯದ್ಭುತ. ಅವರ ಸಮಾಜಮುಖಿ ಕಾರ್ಯ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದರು.
ಈ ವೇಳೆ ಮಲ್ಲಿಗೆ ಕೃಷಿ ಸಾಧಕಿ ಸವಿತಾ ಸುರೇಶ್ ಪೂಜಾರಿಯವರಿಗೆ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ಪಂಜು ಪೂಜಾರಿ ಯಡಬೆಟ್ಟು, ಪಾಂಡೇಶ್ವರ ಗ್ರಾ. ಪಂ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್, ಬ್ರಹ್ಮಬೈದರ್ಕಳ ಗೋಳಿ ಗರಡಿ ಭಜನಾ ತಂಡದ ಮುಖ್ಯಸ್ಥೆ ಕುಸುಮಾ ಮನೋಜ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.

