• Home  
  •   ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ (Warnig of fierce struggle if exemption on toll for local vehicles is canceled : Shekhar Hejmadi)
- social service - ಅಪರಾಧ

  ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ (Warnig of fierce struggle if exemption on toll for local vehicles is canceled : Shekhar Hejmadi)

Share:   ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ  (Hejamadi) ) ಹೆಜಮಾಡಿ ಮೇ 18 :-  ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು  ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರ ವಾಹನಗಳಿಗೆ ನೀಡುವ ವಿನಾಯಯಿತಿ ರದ್ದು ಮಾಡಿದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಟೋಲ್ ವಿರೋಧಿ ಹೋರಾಟ ‌ಸಮಿತಿಯ ಅಧ್ಯಕ್ಷ ಶೇಕರ ಹೆಜ್ಮಾಡಿ ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ.  ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು ಟೋಲ್ ಪ್ಲಾಜಾಗಳಲ್ಲಿ ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದ […]

  ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ರದ್ದಾದರೆ ಉಗ್ರ ಹೋರಾಟ : ಶೇಖರ್ ಹೆಜ್ಮಾಡಿ

 (Hejamadi) ) ಹೆಜಮಾಡಿ ಮೇ 18 :-  ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು  ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರ ವಾಹನಗಳಿಗೆ ನೀಡುವ ವಿನಾಯಯಿತಿ ರದ್ದು ಮಾಡಿದಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಟೋಲ್ ವಿರೋಧಿ ಹೋರಾಟ ‌ಸಮಿತಿಯ ಅಧ್ಯಕ್ಷ ಶೇಕರ ಹೆಜ್ಮಾಡಿ ತಮ್ಮ ಹೇಳಿಕೆಯಲ್ಲಿ ನೀಡಿದ್ದಾರೆ.

 ಹೆಜಮಾಡಿ,  ಸಾಸ್ತನ  ಹಾಗೂ ತೊಕ್ಕೊಟ್ಟು ಟೋಲ್ ಪ್ಲಾಜಾಗಳಲ್ಲಿ ಹೊಸ ಕಂಪನಿಯು ಟೋಲ್ ಸಂಗ್ರಹಕ್ಕೆ ಗುತ್ತಿಗೆ ಪಡೆದ ಬಗ್ಗೆ ಮಾಹಿತಿ ಲಭಿಸಿದೆ.

2016 ರಿಂದ ಟೋಲ್ ವಿರೋಧಿ ಹೋರಾಟ ‌ಸಮಿತಿಯು  ನಿರಂತರವಾಗಿ ಹೋರಾಟ ಮಾಡುವುದರ ಮೂಲಕ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿಯನ್ನು ಪಡೆದಿದೆ. ಈಗ  ಸ್ಥಳೀಯ ವಾಹನಗಳು ಟೋಲ್ ನಲ್ಲಿ ಸಂಚಾರಿಸಿದಾಗ ಅವರ ಪಾಸ್ಟ್ ಟಾಗ್ ನಿಂದ ಹಣ ಕಡಿತಗೊಳಿಸುವ ಪ್ರಕ್ರಿಯೆ ಬಗ್ಗೆ ಸ್ಥಳೀಯ ವಾಹನ ಮಾಲೀಕರಿಂದ ದೂರುಗಳು ಸಮಿತಿಗೆ ಬಂದಿರುತ್ತದೆ. ಸ್ಥಳೀಯರಿಗೆ ನೀಡಿದ ಟೋಲ್ ವಿನಾಯಿತಿಯನ್ನು ಸಂಪೂರ್ಣ ಕಿತ್ತು ಹಾಕುವ ಹುನ್ನಾರ ಇದಾಗಿದೆ.

    ಟೋಲ್ ಪ್ಲಾಜಾದಲ್ಲಿ ಕಂಪನಿಯು  ‌ಕೋಟ್ಯಾಂತರ ರೂಪಾಯಿಯನ್ನು ಸಾರ್ವಜನಿಕರಿಂದ ಟೋಲ್ ನೆಪದಲ್ಲಿ ‌ಸಂಗ್ರಹಿಸಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ನೀಡುವಲ್ಲಿ ವಿಫಲ‌ವಾಗಿದೆ. ರಾಷ್ಟ್ರೀಯ ಹೆದ್ದಾರಿಯ ದುರಾವಾಸ್ಥೆ ಹೇಳತಿರದು. ದಿನನಿತ್ಯ, ಪ್ರತಿ ಕ್ಷಣ ರಾಷ್ಟ್ರೀಯ ಹೆದ್ದಾರಿಯ  ಅಸಮರ್ಪಕ  ನಿರ್ವಹಣೆಯಿಂದ  ಸಾರ್ವಜನಿಕರ ಅಮೂಲ್ಯ ಜೀವ ಬಲಿಯಾಗುತ್ತಿರುವುದು ರೂಢಿಯಾಗಿದೆ. ಈ ಬಗ್ಗೆ ‌ಕಂಪನಿಯು ಯಾವುದೇ ಪರಿಹಾರವನ್ನು ನೀಡುವುದಿಲ್ಲ.

ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿ ಟೋಲ್ ನಲ್ಲಿ ‌ಸ್ಥಳೀಯ ಲೋಕೋಪಯೋಗಿ ‌ರಸ್ತೆಗೆ ಟೋಲ್ ‌ನಿಗದಿಪಡಿಸಿದ್ದು ಕಂಪನಿಯ ಕಾನೂನು ಬಾಹಿರ ಕ್ರಮ ವಾಗಿದೆ. ಅನೇಕ ಹೋರಾಟಗಳ ಮೂಲಕ ‌ಸ್ಥಳೀಯ ಯುವ ಜನರಿಗೆ ಉದ್ಯೋಗವನ್ನು ನೀಡಿದ್ದು, ಸದ್ಯ ಸ್ಥಳೀಯ ಉದ್ಯೋಗಿಗಳನ್ನು ವಜಾ ಗೊಳಿಸುವ ಪ್ರಕ್ರಿಯೆಯು ಕಂಪನಿಯಿಂದ ನಡೆಯುತ್ತಿರುವುದು ಕಂಡು ಬಂದಿದೆ.

 “ಸ್ಥಳೀಯ ವಾಹನಗಳಿಗೆ ಈ ಹಿಂದೆ ನೀಡಿದ ವಿನಾಯಿತಿ ಯನ್ನು ವಜಾಗೊಳಿಸಿದರೆ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಖಾಸಗಿ ಜಾಗದಲ್ಲಿ ‌ರಸ್ತೆ ನಿರ್ಮಾಣ ಮಾಡುವುದರ ಮೂಲಕ ‌ಉಗ್ರ ಹೋರಾಟ‌ವನ್ನು ಹಮ್ಮಿಕೊಳ್ಳಲಾಗುವುದು.” ಈ ಬಗ್ಗೆ ‌ಜನಪ್ರತಿನಿಧಿಗಳ‌ , ವಾಹನ ಮಾಲಿಕರ ಹಾಗು ಸಾರ್ವಜನಿಕರ ಸಭೆಯನ್ನು ಕರೆದು ಚರ್ಚಿಸಿ ಮುಂದಿನ ‌ಹೋರಾಟಗಳ ರೊಪರೇಷೆಗಳನ್ನು ಸಿದ್ದ ಪಡಿಸಲಾಗುವುದು ಎಂದು  ಟೋಲ್ ವಿರೋಧಿ ಹೋರಾಟ ‌ಸಮಿತಿ ಅಧ್ಯಕ್ಷ  ಶೇಖರ ಹೆಜ್ಮಾಡಿ ಪತ್ರಿಕಾ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.