• Home  
  • ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ (Veteran Journalist Shahapura Venkatesh Manu passes away)
- ನಿಧನ

ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ (Veteran Journalist Shahapura Venkatesh Manu passes away)

Share: ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ (Bengaluru) ಬೆಂಗಳೂರು: ಶಹಪುರ ವೆಂಕಟೇಶ್ ಮಾನು, ಬೆಂಗಳೂರು ಬಳ್ಳಾರಿಯಲ್ಲಿ 2007-10ರವರೆಗೆ  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ಜಿಲ್ಲ‍ಾ  ವರದಿಗಾರರಾಗಿದ್ದು, ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿದ್ದು, ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ವೆಂಕಟೇಶ ಮಾನು(53)ರವರು, ಜುಲೈ12ರ ಬೆಳಗಿನ ಜಾವ ಜಿ.ಎಮ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರು ಬಹುದಿನಗಳಿಂದ ಅನಾರೋಗ್ಯದಿಂದ  ಜಿ.ಎಮ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಎರಡು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ, ಸೇವೆ ಸಲ್ಲಿಸಿದ್ದು ಸರಳ ಹಾಗೂ […]

ಹಿರಿಯ ಪತ್ರಕರ್ತ ಶಹಪುರ ವೆಂಕಟೇಶ್ ಮಾನು ನಿಧನ

(Bengaluru) ಬೆಂಗಳೂರು: ಶಹಪುರ ವೆಂಕಟೇಶ್ ಮಾನು, ಬೆಂಗಳೂರು ಬಳ್ಳಾರಿಯಲ್ಲಿ 2007-10ರವರೆಗೆ  ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ಜಿಲ್ಲ‍ಾ  ವರದಿಗಾರರಾಗಿದ್ದು, ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಿದ್ದು, ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ವೆಂಕಟೇಶ ಮಾನು(53)ರವರು, ಜುಲೈ12ರ ಬೆಳಗಿನ ಜಾವ ಜಿ.ಎಮ್.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

 ಅವರು ಬಹುದಿನಗಳಿಂದ ಅನಾರೋಗ್ಯದಿಂದ  ಜಿ.ಎಮ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಎರಡು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ, ಸೇವೆ ಸಲ್ಲಿಸಿದ್ದು ಸರಳ ಹಾಗೂ ಸ್ನೇಹ ಜೀವಿಯೆಂದು ಗುರುತಿಸಿಕೊಂಡಿದ್ದರು.

ವೆಂಕಟೇಶ್ ಮಾನುರವರು, ಮೂಲತಃ ಕಲ್ಬುರ್ಗಿ ಜಿಲ್ಲೆಯ ಶಹಪುರದವರಾಗಿದ್ದಾರೆ. ಅನೆೇಕ ವರ್ಷಗಳ ಕಾಲ ಬಳ್ಳಾರಿಯಲ್ಲಿದ್ದು, ಪತ್ರಿಕಾರಂಗದಲ್ಲಿ ಪ್ರಮುಖ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ನಂತರ ಕಾರಣಾಂತರಗಳಿಂದಾಗಿ ಹಲವು ವರ್ಷಗಳ ಹಿಂದೆಯೇ ಕುಟುಂಬ ಸಮೇತರಾಗಿ ಬೆಂಗಳೂರು  ಮಹಾನಗರಕ್ಕೆ ಸ್ಥಳಾಂತರವಾಗಿದ್ದರು.  ಅವರು ಪತ್ನಿ ಸಮೇತ ತುಂಬು ಕುಟುಂಬ, ಅಪಾರ ಸ್ನೇಹಿತರ ವರ್ಗ, ಬಂಧು ಬಳಗವನ್ನು ಅಗಲಿದ್ದಾರೆ.

 ಅಂತ್ಯಕ್ರಿಯೆ :  ವೆಂಕಟೇಶ ಮಾನುರವರ ಮೃತದೇಹ ದರ್ಶನಕ್ಕಾಗಿ, ಬೆಂಗಳೂರಿನ ನಾಗರಬಾವಿಯಲ್ಲಿನ ಅವರ ಸ್ವಗೃಹದಲ್ಲಿ ಜುಲೈ12ರಂದು ಬೆಳಿಗ್ಗೆ 9ಗಂಟೆವರೆಗೆ  ಅವಕಾಶವಿದೆ. ನಂತರ ಅವರ ಮೃತದೇಹವನ್ನು ಅವರ ಜನ್ಮಭೂಮಿ ಕಲ್ಬುರ್ಗಿ ಜಿಲ್ಲೆಯ ಶಹಪುರಕ್ಕೆ ಕೊಂಡೊಯ್ಯಲಾಗುವುದು. ಅಲ್ಲಿ ಜುಲೈ 13ರಂದು ಅವರ ಅಂತ್ಯ ಕ್ರಿಯೆ ಜರುಗಿಸಲಾಗುವುದು.

ಶ್ರದ್ಧಾಂಜಲಿ ಅರ್ಪಣೆ:  ಇಹ ಲೋಕ ತ್ಯಜಿಸಿದ ವೆಂಕಟೇಶ ಮಾನುರವರ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸೆಂದು ಬಳ್ಳಾರಿ ಜಿಲ್ಲೆಯ ಹಾಗೂ ವಿಜಯನಗರ ಜಿಲ್ಲೆಯ ಸಮಸ್ತ ಪತ್ರಕರ್ತರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.