• Home  
  • ಹೆಜಮಾಡಿ : ಏಳೂರು ಮೊಗವೀರ ಮಹಾಸಭಾದ ಆಯೋಜನೆಯಲ್ಲಿ  ಸಮುದ್ರ ಪೂಜೆ( Samudra Puja in Hejamady organized by Yeluru Mogaveera Mahasabha)
- Mansoon - ಧಾರ್ಮಿಕ - ವಿಡಿಯೋ

ಹೆಜಮಾಡಿ : ಏಳೂರು ಮೊಗವೀರ ಮಹಾಸಭಾದ ಆಯೋಜನೆಯಲ್ಲಿ  ಸಮುದ್ರ ಪೂಜೆ( Samudra Puja in Hejamady organized by Yeluru Mogaveera Mahasabha)

Share: ಹೆಜಮಾಡಿ: ಏಳೂರು ಮೊಗವೀರ ಮಹಾಸಭಾದ ಆಯೋಜನೆಯಲ್ಲಿ ಸಮುದ್ರ ಪೂಜೆ  (Hejamdy) ಹೆಜಮಾಡಿ: ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಕನ್ನಂಗಾರು ಮೊಗವೀರ ಸಭಾ ಸಹಕಾರದಲ್ಲಿ ಹೆಜಮಾಡಿಯ ಅಮಾಸೆಕರಿಯ ಸಮುದ್ರ ಕಿನಾರೆಯಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಸಮುದ್ರ ಪೂಜೆ, ಹಾಗೂ ಸಮುದ್ರಕ್ಕೆ ಹಾಲೆರೆಯಲಾಯಿತು. ಹೆಜಮಾಡಿ ವೀರ ಮಾರುತಿ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಂದ ಹಾಲು, ತೆಂಗಿನಕಾಯಿ ಹೂಗಳನ್ನು ಭಜನಾ  ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು.  ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ […]

 (Hejamdy) ಹೆಜಮಾಡಿ: ಏಳೂರು ಮೊಗವೀರ ಮಹಾಸಭಾ ಆಯೋಜನೆಯಲ್ಲಿ ಕನ್ನಂಗಾರು ಮೊಗವೀರ ಸಭಾ ಸಹಕಾರದಲ್ಲಿ ಹೆಜಮಾಡಿಯ ಅಮಾಸೆಕರಿಯ ಸಮುದ್ರ ಕಿನಾರೆಯಲ್ಲಿ ಶನಿವಾರ ಬೆಳಿಗ್ಗೆ ಸಾಮೂಹಿಕ ಸಮುದ್ರ ಪೂಜೆ, ಹಾಗೂ ಸಮುದ್ರಕ್ಕೆ ಹಾಲೆರೆಯಲಾಯಿತು.

ಹೆಜಮಾಡಿ ವೀರ ಮಾರುತಿ ಮಂದಿರದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅಲ್ಲಿಂದ ಹಾಲು, ತೆಂಗಿನಕಾಯಿ ಹೂಗಳನ್ನು ಭಜನಾ  ಮೆರವಣಿಗೆಯೊಂದಿಗೆ ಹೆಜಮಾಡಿ ಅಮಾಸೆ ಕರಿಯ ಸಮುದ್ರ ಕಿನಾರೆಗೆ ತರಲಾಯಿತು.

 ಸಮುದ್ರ ಕಿನಾರೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರ ರಾಜನಿಗೆ ಹಾಲೆರೆಯಲಾಯಿತು.

 ಏಳೂರು ಮೋಗವೀರ ಮಹಾಸಭಾದ ಅಧ್ಯಕ್ಷ ಎಸ್‌ ದಿವಾಕರ ಹೆಜಮಾಡಿಯವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

  ಈ ಸಂದರ್ಭ ಏಳೂರು ಮೋಗವೀರ ಮಹಾಸಭಾ ಅಧ್ಯಕ್ಷ ಎಸ್‌ ದಿವಾಕರ ಹೆಜಮಾಡಿ, ಉಪಾಧ್ಯಕ್ಷ ಬಾಲಕೃಷ್ಣ ಸುವರ್ಣ, ಕಾರ್ಯದರ್ಶಿ ಲಲಿತ್‌ ಕುಮಾರ್‌, ಕೋಶಾಧಿಕಾರಿ ಶ್ರೇಯಸ್‌ ಸಾಲ್ಯಾನ್‌, 16 ಪಟ್ಲ ಮೊಗವೀರ ಮಹಾಸಭಾದ ಅಧ್ಯಕ್ಷ ರವಿ ಎಸ್ ಕುಂದರ್, ಕನ್ನಂಗಾರು ಮೊಗವೀರ ಮಹಾಸಭಾ, ಹೆಜಮಾಡಿ ಮೊಗವೀರ ಮಹಾಸಭಾ, ಮಟ್ಟು ಮೊಗವೀರ ಮಹಾಸಭಾ, ಆಚೆ ಮಟ್ಟು ಮೊಗವೀರ ಮಹಾಸಭಾ, ಪಲಿಮಾರು ಮೊಗವೀರ ಮಹಾಸಭಾ, ಗುಂಡಿ ಮೊಗವೀರ ಮಹಾಸಭಾ, ಸಣ್ಣಗುಂಡಿ ಮೊಗವೀರ ಮಹಾಸಭಾದ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು, ದ. ಕ ಮೊಗವೀರ ಮಹಾಜನ ಸಂಘದ ಕಾರ್ಯದರ್ಶಿ ಶರಣ್ ಕುಮಾರ್‌ ಮಟ್ಟು, ಸುಧಾಕರ ಕರ್ಕೇರಾ, ಮಹಿಳಾ ಸಭಾದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ಸಂಖ್ಯೆಯಲ್ಲಿ ಮೀನುಗಾರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.