ಹೆಜಮಾಡಿ ಕಡಲ ಕಿನಾರೆಯಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ
(Hejamady) ಹೆಜಮಾಡಿ: ಸಂಭಾವ್ಯ ಕಡಲ ಕೊರೆತ, ಸುನಾಮಿಯಂತಹ ಅಪಾಯ ತಡೆಗಟ್ಟಲು, ಆಕ್ರಮಗಳನ್ನೆಲ್ಲಾ ತಡೆದು ಕಂಟಕಗಳನ್ನೆಲ್ಲ ನಿವಾರಿಸಿ ಭಗವಂತನ ಅನುಗ್ರಹದಿಂದ ಸಕಲ ಜೀವಿಗಳ ಕ್ಷೇಮಾಭ್ಯುದಯಕ್ಕಾಗಿ ಹೆಜಮಾಡಿ ಕಡಲ ಕಿನಾರೆಯ ವಿವಿದೆಡೆ ಸಹಸ್ರಾರು ಭಕ್ತರು ಶಿಸ್ತುಬದ್ಧವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ನಡೆಸಲಾಯಿತು.
ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಸಮಿತಿಯ ಉಡುಪಿ, ದ.ಕ., ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯ ಸಂಯುಕ್ತ ಆಶ್ರಯದಲ್ಲಿ ಎಲ್ಲೆಡೆ ಹಮ್ಮಿಕೊಂಡ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಮಹಾಭಿಯಾನ ಕಾರ್ಯಕ್ರಮದಂತೆ ಹೆಜಮಾಡಿಯ ಅಮವಾಸ್ಯೆ ಕರಿಯ ಬಳಿ ಮೂಲ್ಕಿ ತಾಲೂಕಿನ 108 ಜನರ 6 ತಂಡಗಳು ಮತ್ತು ಹೆಜಮಾಡಿಯ ತಂಡವು ಸಾಮೂಹಿಕವಾಗಿ ಪಠಣ ನಡೆಸಿದರು.
ಇದೇ ಸಂದರ್ಭ ಹೆಜಮಾಡಿ ಕೋಡಿಯ ಕಡಲ ಕಿನಾರೆಯಲ್ಲಿ ಪಲಿಮಾರು, ಚರಂತಿಪೇಟೆ ಮತ್ತು ಮಾನಂಪಾಡಿಯ2 ತಂಡಗಳು ಪ್ರತ್ಯೇಕವಾಗಿ ಸಾಮೂಹಿಕ ಪಠಣ ನಡೆಸಿದರು.
ಸಂಜೆ 4 ಗಂಟೆಯಿAದ 6 ಗಂಟೆವರೆಗೆ ಏಕಕಾಲದಲ್ಲಿ ಎಲ್ಲಾ ಗುಂಪುಗಳು 6 ಬಾರಿ ಸಾಮೂಹಿಕ ಪಠಣ ನಡೆಸಿದರು.
ಉದ್ದೇಶ: ಕಡಲ್ಕೊರೆತ, ಸುನಾಮಿಗಳಂತಹ ಸಮುದ್ರೋತ್ಪಾತ ತಡೆಗಟ್ಟಲು, ರಾಷ್ಟ್ರಾಕ್ರಮಣ, ಧರ್ಮಾಕ್ರಮಣ ತಡೆಯುಂಟಾಗಲು, ಭಾರತೀಯ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸಲು, ಮನುಕುಲದ ಮಹೋನ್ನತಿ, ಲೋಕಹಿತ, ಪರಿಸರ ಸಂರಕ್ಷಣೆಗಾಗಿ, ವ್ಯಕ್ತಿಗತ ಸಕಲ ಕಂಟಕ ನಿವಾರಣೆಯೊಂದಿಗೆ ಆರೋಗ್ಯಭಾಗ್ಯ ಸಿದ್ಧಿ, ಇಷ್ಟಾರ್ಥ ಪ್ರಾಪ್ತಿ ಹಾಗೂ ಭಗವಾನುಗ್ರಹ ಪ್ರಾಪ್ತಿಗಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ನಡೆಯಿತು.

