ಹೆಜಮಾಡಿ ಕೋಡಿಕರೆ ಪದ್ಮನಾಭ ಕೋಟ್ಯಾನ್ ನಿಧನ
ಶುಕ್ರವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು
(Hejamady) ಹೆಜಮಾಡಿ: ಹೆಜಮಾಡಿ ಕೋಡಿಕರೆ ಪದ್ಮನಾಭ ಕೋಟ್ಯಾನ್ ಟಿಯನ್ (86) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಮೃತರು ಮುಂಬಯಿಯಲ್ಲಿ ಸುಮಾರು 40ವರ್ಷಗಳ ಕಾಲ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮುಂಬೈಯಲ್ಲಿ ಉದ್ಯಮಿಯಾಗಿದ್ದು ಹೆಜಮಾಡಿ ಕೋಡಿ ಪರಪಟ್ಟದಲ್ಲಿ ನೆಲಸಿ ಕೊಡುಗೈ ದಾನಿಯಾಗಿದ್ದರು.
ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ, ನಡಿಕುದ್ರು ಜಾರಂದಾಯ ದೈವಸ್ಥಾನದ ಸಾನದ ಮನೆಯವರಾಗಿ ಸಾನದ ಜೀರ್ಣೋದ್ದಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಹೆಜಮಾಡಿ ಹಾಗೂ ಮುಂಬಯಿಯಲ್ಲಿ ಇವರು ಪಿ. ಕೆ. ಎಂದು ಜನಪ್ರಿಯರಾಗಿದ್ದರು.
ಮೃತರ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

