• Home  
  • ಹೆಜಮಾಡಿ ದೇವಸ್ಥಾನದಲ್ಲಿ ಪ್ರತೀ ಸೋಮವಾರದ ಅನ್ನದಾನಕ್ಕೆ ಅದಮಾರುಶ್ರೀ ಚಾಲನೆ (Hejmadi Temple drive for Anna daana)
- ಧಾರ್ಮಿಕ

ಹೆಜಮಾಡಿ ದೇವಸ್ಥಾನದಲ್ಲಿ ಪ್ರತೀ ಸೋಮವಾರದ ಅನ್ನದಾನಕ್ಕೆ ಅದಮಾರುಶ್ರೀ ಚಾಲನೆ (Hejmadi Temple drive for Anna daana)

Share: ಹೆಜಮಾಡಿ ದೇವಸ್ಥಾನದಲ್ಲಿ ಪ್ರತೀ ಸೋಮವಾರದ ಅನ್ನದಾನಕ್ಕೆ ಅದಮಾರು ಶ್ರೀ ಚಾಲನೆ ಪ್ರೀತಿಯಿಂದ ಕೂಡಿದ ಅನ್ನದಾನ ರುದ್ರ ದೇವರಿಗೆ ಸಂತೃಪ್ತಿ: ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೆಜಮಾಡಿ: ಅನ್ನದಾನದ ಮಾಡುವಾಗ ಪ್ರೀತಿ ಮತ್ತು ಆದರದಿಂದ ನೀಡಬೇಕು. ಇದರಿಂದ ರುದ್ರದೇವರು ಸಂತುಷ್ಠನಾಗುತ್ತಾನೆ. ಹೆಜಮಾಡಿ ದೇವಳದಲ್ಲಿ ಆರಂಭಗೊAಡ ಅನ್ನ ಪ್ರಸಾದವು ನಿತ್ಯ ಸೇವೆಯಾಗಿ ಜರುಗುವಂತಾಗಲಿ. ಈ ಮೂಲಕ ರುದ್ರದೇವರು ಸಂತುಷ್ಟನಾಗಿ ಲೋಕ ಕಲ್ಯಾಣವಾಗಲಿ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು. ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ […]

ಹೆಜಮಾಡಿ ದೇವಸ್ಥಾನದಲ್ಲಿ ಪ್ರತೀ ಸೋಮವಾರದ ಅನ್ನದಾನಕ್ಕೆ ಅದಮಾರು ಶ್ರೀ ಚಾಲನೆ

ಪ್ರೀತಿಯಿಂದ ಕೂಡಿದ ಅನ್ನದಾನ ರುದ್ರ ದೇವರಿಗೆ ಸಂತೃಪ್ತಿ: ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು

ಹೆಜಮಾಡಿ: ಅನ್ನದಾನದ ಮಾಡುವಾಗ ಪ್ರೀತಿ ಮತ್ತು ಆದರದಿಂದ ನೀಡಬೇಕು. ಇದರಿಂದ ರುದ್ರದೇವರು ಸಂತುಷ್ಠನಾಗುತ್ತಾನೆ. ಹೆಜಮಾಡಿ ದೇವಳದಲ್ಲಿ ಆರಂಭಗೊAಡ ಅನ್ನ ಪ್ರಸಾದವು ನಿತ್ಯ ಸೇವೆಯಾಗಿ ಜರುಗುವಂತಾಗಲಿ. ಈ ಮೂಲಕ ರುದ್ರದೇವರು ಸಂತುಷ್ಟನಾಗಿ ಲೋಕ ಕಲ್ಯಾಣವಾಗಲಿ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತೀ ಸೋಮವಾರ ನಡೆಸಲು ಉದ್ದೇಶಿಸಿರುವ ಅನ್ನದಾನಕ್ಕೆ ಶ್ರೀಪಾದರು ಸೋಮವಾರ ಚಾಲನೆ ನೀಡಿ ಆಶೀರ್ವಚಿಸಿದರು.

ಈ ಸಂದರ್ಭ ಅವರು ಶ್ರೀ ರುದ್ರದೇವರಿಗೆ ಪೂಜೆ ಸಲ್ಲಿಸಿದರು. ಇದಕ್ಕೆ ಮುನ್ನ ಶ್ರೀಪಾದರನ್ನು ಶ್ರೀ ದೇವಳದ ವತಿಯಿಂದ ಅರ್ಚಕರಾದ ವಿಠಲ ಭಟ್, ಸುಧೀಂದ್ರ ಆಚಾರ್ಯ, ಪದ್ಮನಾಭ ಆಚಾರ್ಯ, ರಮೇಶ್ ಭಟ್ ವಿದ್ಯುಕ್ತವಾಗಿ ಸ್ವಾಗತಿಸಿದರು.

ಶ್ರೀ ದೇವಳದ ಅಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮೊಕ್ತೆಸರರುಗಳಾದ ರವಿ ಎನ್.ಕೋಟ್ಯಾನ್, ಸುರೇಶ್ ದೇವಾಡಿಗ, ಪಾಂಡುರAಗ ಕರ್ಕೇರ, ಜಯಂತ್ ಪುತ್ರನ್, ಸಂಜೀವ ಟಿ., ಹರೀಶ್ ಶೆಣೈ, ಜಯಂತಿ ಅಚಾರ್ಯ, ಅಭಿವೃದ್ಧಿ ಸಮಿತಿಯ ಜಿನರಾಜ ಬಂಗೇರ, ರಾಜೇಶ್ ಅಚಾರ್ಯ, ಪರಮೇಶ್ವರ್, ಅರುಣ್ ಶೆಟ್ಟಿ ಪಡುಮನೆ, ಸುಧಾಕರ ಕರ್ಕೇರ, ಹರೀಶ್ ದೇವಾಡಿಗ, ವಾಮನ ಕೋಟ್ಯಾನ್ ನಡಿಕುದ್ರು, ಸದಾಶಿವ ಕೋಟ್ಯಾನ್, ಗಣ್ಯರಾದ ಮೋಹನ್‌ದಾಸ್ ಹೆಜ್ಮಾಡಿ, ಶೋಭಾ ಶೆಟ್ಟಿ, ಗೀತಾಂಜಲಿ ಸುವರ್ಣ, ನಾರಾಯಣ ಮೆಂಡನ್ ಗುರುವಪ್ಪ ಕೋಟ್ಯಾನ್, ವಿನೋದ್ ಕೋಟ್ಯಾನ್, ರವಿಕಾಂತ್ ಭಟ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.