ಮಂಗಳೂರು ಹರ್ಕ್ಯುಲರ್ಸ್ ತಂಡಕ್ಕೆ ಇನ್ನರ್ ವೀಲ್ ಟ್ರೋಫಿ–2024
ಪಡುಬಿದ್ರಿ : ನಿರಂತರ ಅಭ್ಯಾಸ ಮಾಡಿದರೆ ರಾಷ್ಟç ಮಟ್ಟದ ಆಟಗಾರರಾಗಿ ಮೂಡಿಬರಲು ಸಾಧ್ಯ. ಆಟಗಾರರು ಶಿಸ್ತು ಅನ್ನು ಅಳವಡಿಸಿ ಕೂಂಡು ಅಟದ ನಿಯಮಗಳಿಗೆ ಬದ್ದರಾಗಿ ಕ್ರೀಡೆಯಲ್ಲಿ ತೊಡಗಿಸಿ ಕೂಳ್ಳಬೇಕು. ಇಂದಿನ ಪಂದ್ಯಕೂಟದ ಸೋಲು ಮುಂದಿನ ಗೆಲುವಿಗೆ ಕಾರಣವಾಗಿರುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಚಿ ಹೇಳಿದರು..
ಅವರು ಪಡುಬಿದ್ರಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಅಂತಾರಾಷ್ಟಿçÃಯ ಇನ್ನರ್ ವೀಲ್ ಕ್ಲಬ್ನ ಶತಮಾನೋತ್ಸವದ ಅಂಗವಾಗಿ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನಡೆದ ಇನ್ನರ್ ವೀಲ್ ಟ್ರೋಫಿ – 2024 ತ್ರೋಬಾಲ್ ಪಂದ್ಯಕೂಟದ ಸಮಾರೋಪ ಸಮಾರಂಭದ ಬಹುಮಾನ ವಿತರಿಸಿ ಮಾತನಾಡಿದರು.
ಉಭಯ ಜಿಲ್ಲೆಗಳಿಂದ ಬಲಿಷ್ಠ 16 ಮಹಿಳಾ ತ್ರೋಬಾಲ್ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದವು.
ಫ್ಯೆನಲ್ ಪಂದ್ಯದಲ್ಲಿ ಮಂಗಳೂರಿನ ತುಳುನಾಡು ಯುನೈಟೆಡ್ ತಂಡವನ್ನು ಸೋಲಿಸುವ ಮೂಲಕ ಮಂಗಳೂರು ಹರ್ಕ್ಯುಲರ್ಸ್ ಬಿ ತಂಡ ಇನ್ನರ್ ವೀಲ್ ಟ್ರೋಫಿ-2024 ರ ಪ್ರಥಮ ಸ್ಥಾನ ಪಡೆದು ಕೊಂಡಿತು. ದ್ವಿತೀಯ ಸ್ಥಾನವನ್ನು ತುಳುನಾಡ್ ಯುನೈಟೆಡ್ ಪಡೆದು ಕೊಂಡರೆ ತೃತೀಯ ಸ್ಥಾನವನ್ನು ಮಂಗಳೂರ್ ಸ್ಪೋರ್ಟ್ಸಿಂಗ್ ತಂಡ ಪಡೆದು ಕೊಂಡಿತು.
ಉತ್ತಮ ಎಸೆತಗಾರ್ತಿಯಾಗಿ ಮಂಗಳೂರು ಹರ್ಕ್ಯುಲರ್ಸ ತಂಡದ ಶ್ರೇಯಾ, ಉತ್ತಮ ಹಿಡಿತಗಾರ್ತಿಯಾಗಿ ತುಳುನಾಡ್ ಯುನೈಟೆಡ್ ತಂಡದ ನಮೃತಾ ಮತ್ತು ಉತ್ತಮ ಸವ್ಯಸಾಚಿ ಪ್ರಶಸ್ತಿಯನ್ನು ಮಂಗಳೂರು ಹರ್ಕ್ಯುಲರ್ಸ್ ತಂಡದ ವೈಷ್ಣವಿ ಪಡೆದು ಕೊಂಡರು.
ಇನ್ನರ್ ವೀಲ್ ಅಧ್ಯಕ್ಷೆ ನಮೃತಾ ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಡುಬಿದ್ರಿ ವ್ಯವಸಾಯ ಸಹಕಾರಿ ಸೊಸೈಟಿ ಅಧ್ಯಕ್ಷ ವೈ.ಸುಧೀರ್ ಕುಮಾರ್, ಜಿ.ಪಂ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಪಡುಬಿದ್ರಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಜೆಸಿಐ ಇಂಡಿಯಾ ನಿರ್ದೇಶಕ ವೈ. ಸುಕುಮಾರ್, ಪಡುಬಿದ್ರಿ ರೋಟರಿ ಅಧ್ಯಕ್ಷ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು.
ನಮೃತಾ ಮಹೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಮನೋರಮಾ ಸುವರ್ಣ ವಂದಿಸಿದರು. ಕೀರ್ತನ್ ಸಾಲ್ಯಾನ್ ಹಾಗೂ ಶುಭ ದಿನೇಶ್ ನಿರೂಪಿಸಿದರು.

