ಹೆಜಮಾಡಿ; ಬೈಕ್ ಸವಾರರು ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರ ಎಗರಿಸಿ ಪರಾರಿ
(Padubidri) ಪಡುಬಿದ್ರಿ : ಹೆಜಮಾಡಿಯ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಸ ಬಿಸಾಡಲೆಂದು ಹೊರಗಡೆ ಬಂದಾಗ, ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾದ ಘಟನೆ ಹೆಜಮಾಡಿ ಮಾರುತಿ ರೋಡ್ ಬಳಿ ಬಿ ಜಿ ಶೆಣೈ ರವರ ಮನೆ ಹತ್ತಿರದ ರಸ್ತೆಯಲ್ಲಿ ಘಟಿಸಿದೆ
ಕರಿಮಣಿ ಸರವು 6 ಗ್ರಾಂ ತೂಕದ್ದಾಗಿದ್ದು, ರೂ.25,000 ಮೌಲ್ಯದ್ದಾಗಿದೆ ಎಂದು ಪಡುಬಿದ್ರಿ ಪೊಲೀಸರು ಅಂದಾಜಿಸಿದ್ದಾರೆ.
ಕರಿಮಣಿ ಸರ ಕಳೆದುಕೊಂಡ ಸುಲೋಚನಾರವರು ಹೆಜಮಾಡಿ ಗ್ರಾಮದ ಮಾರುತಿ ರೋಡ್ ಬಳಿ ಇರುವ ರಮೇಶ್ ಜಿ. ಶೆಣೈ ಇವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದರು. ಮನೆಯ ಕಸ ಬಿಸಾಡಲೆಂದು ಮನೆಯ ಹೊರಗಡೆ ರಸ್ತೆಯ ಬದಿಯಲ್ಲಿ ಇರುವಾಗ ಅಪರಿಚಿತರಿಬ್ಬರು ಬೈಕ್ ನಲ್ಲಿ ಹೆಜಮಾಡಿ ಯಾರ್ಡ್ ಕಡೆಯಿಂದ ಅವರ ಹತ್ತಿರ ಬಂದಿದ್ದರು. ಹಿಂಬದಿ ಸವಾರ ಒಮ್ಮೆಲೆ ಸುಲೋಚನರವರ ಕುತ್ತಿಗೆಗೆ ಕೈಹಾಕಿ ಬಂಗಾರದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

