ಹೆಜಮಾಡಿ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ 83ನೇ ಮಂಗಲೋತ್ಸವ
ಯುವ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಯ ದಾರಿದೀಪ : ಚೆನ್ನಕೇಶವ ಡಿ. ಮೆಂಡನ್
(Padubidri) ಪಡುಬಿದ್ರಿ: ಗ್ರಾಮಾಭಿವೃದ್ಧಿಗೆ ಯುವ ಸಂಘಟನೆಗಳು ದಾರಿದೀಪವಿದ್ದಂತೆ. ಗ್ರಾಮೀಣ ಭಾಗದಲ್ಲಿ ಯುವ ಜನತೆಯನ್ನು ದಾರಿತಪ್ಪದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆಯು ಇತರರಿಗೆ ಮಾದರಿಯಾಗಿದೆ ಎಂದು ಬೆಂಗಳೂರು ಯುವ ಉದ್ಯಮಿ ಚೆನ್ನಕೇಶವ ಡಿ. ಮೆಂಡನ್ ಹೇಳಿದರು.
ಹೆಜಮಾಡಿಯ ಮಟ್ಟು ಮೊಗವೀರ ಮಹಾಸಭಾದ ಆಡಳಿತಕ್ಕೊಳಪಟ್ಟ ಮಟ್ಟುಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರದ 83ನೇ ವಾರ್ಷಿಕ ಮಂಗಲೋತ್ಸವ ಹಾಗೂ ಮಟ್ಟು ವಿದ್ಯಾದಾಯಿನಿ ಯುವಕ-ಯುವತಿ ವೃಂದದ 43ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪೋದ್ಘಾಟನೆಗೈದು ಅವರು ಮಾತನಾಡಿದರು.
ಮಟ್ಟು ವಿದ್ಯಾದಾಯಿನಿ ಯುವಕ ವೃಂದದ ಅಧ್ಯಕ್ಷ ಭರತೇಶ್ ಡಿ. ಹೆಜ್ಮಾಡಿ ಅಧ್ಯಕ್ಷತೆವಹಿಸಿದ್ದರು.
ಮಟ್ಟು ಶ್ರೀ ಪಾಂಡುರಂಗ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶರಣ್ ಕುಮಾರ್ ಮಟ್ಟು, ಲಿಖಿತ್ ಕೇಶವ ಸುವರ್ಣ, ನೀಲಯ ಗುರಿಕಾರ, ವಿದಿತ್ ಅಶೋಕ್ ಕುಮಾರ್, ಅಂಜಲಿ ಎಮ್. ಸುವರ್ಣ, ಕೇಶವ ಎಲ್.ಮೆಂಡನ್, ರಿಯಾ ಎಸ್. ಕರ್ಕೇರರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಂಗಳೂರು ದೇವನಹಳ್ಳಿ ಟೋಲ್ ಪ್ಲಾಝಾದ ಆಡಳಿತ ನಿರ್ದೇಶಕ ಯಜ್ಞೇಶ್ ಕರ್ಕೇರ, ಹೆಜಮಾಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಲೋಕೇಶ್ ಅಮೀನ್, ಮಟ್ಟು ಮೊಗವೀರ ಮಹಾಸಭಾದ ಮಾಜಿ ಅಧ್ಯಕ್ಷ ಬಾಲಕೃಷ್ಣ ಎಲ್. ಸುವರ್ಣ, ಯುವ ಉದ್ಯಮಿ ಲೋಹಿತಾಕ್ಷ ಎ. ಕರ್ಕೇರ, ಭರತೇಶ್ ಎನ್. ಮೆಂಡನ್ ವೆಸ್ಟ್ ಆಫ್ರಿಕಾ, ಕೇಶವ ಎನ್. ಶ್ರೀಯಾನ್ ಮಟ್ಟುಪಟ್ಣ, ಮಟ್ಟು ಮೊಗವೀರ ಮಹಾಸಭಾದ ೧ನೇ ಗುರಿಕಾರ ನೀಲಯ್ಯ ಗುರಿಕಾರ, ೨ನೇ ಗುರಿಕಾರ ಜಯರಾಮ ಗುರಿಕಾರ, ಮಹಾಸಭಾದ ಅಧ್ಯಕ್ಷ ರಘುವೀರ ಎಲ್. ಸುವರ್ಣ, ಮಟ್ಟು ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ನೂತನ್ ಮನೋಹರ್, ಮುಂಬೈ ಸಮಿತಿಯ ಅಧ್ಯಕ್ಷ ಡಾ. ಶ್ರೀಧರ್ ವಿ. ಶೇರಿಗಾರ್, ಯುವತಿ ವೃಂದದ ಅಧ್ಯಕ್ಷೆ ಶೋಭಿತಾ ಹರೀಶ್, ಶ್ರೀ ಪಾಂಡುರಂಗ ಭಜನಾ ಮಂದಿರದ ಪ್ರಧಾನ ಅರ್ಚಕ ವಿಜಯ ಕೆ. ಕೋಟ್ಯಾನ್, ಹರೀಶ್ ಡಿ.ಪುತ್ರನ್, ಎಮ್.ಡಿ.ಕರ್ಕೇರ, ಡಿ.ಎನ್. ಸಾಲ್ಯಾನ್, ಸೋನಿ ಶಶಿಧರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ವಿಮಲಾ ದಯಾನಂದ್ ಸ್ವಾಗತಿಸಿದರು. ಶರಣ್‌ಕುಮಾರ್ ಮಟ್ಟು ಕಾರ್ಯಕ್ರಮ ನಿರ್ವಹಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.
ಬಳಿಕ ವೃಂದದ ಸದಸ್ಯರಿಂದ ನೃತ್ಯ ವೈವಿಧ್ಯ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

